'ಕೊಲೆಗಡುಕರು ಆಳುತ್ತಾರೆ, ಕೊಲೆಗಡುಕತನ ಹೊಸ ಜೀವನದ ವಿಧಾನ, ಇದು ನವಭಾರತ ' ಎಂದು ಟ್ವಿಟ್ಟರ್ ತೊರೆದ ಅನುರಾಗ್ ಕಶ್ಯಪ್

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಳಿಸಿದ್ದಾರೆ. ತಮ್ಮ ಪೋಷಕರು ಮತ್ತು ಮಗಳಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ಟರ್ ಬಿಡಲು ನಿರ್ಧರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹೇಳಿದ್ದಾರೆ.

Last Updated : Aug 11, 2019, 12:40 PM IST
 'ಕೊಲೆಗಡುಕರು ಆಳುತ್ತಾರೆ, ಕೊಲೆಗಡುಕತನ ಹೊಸ ಜೀವನದ ವಿಧಾನ, ಇದು ನವಭಾರತ ' ಎಂದು ಟ್ವಿಟ್ಟರ್ ತೊರೆದ ಅನುರಾಗ್ ಕಶ್ಯಪ್  title=

ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಳಿಸಿದ್ದಾರೆ. ತಮ್ಮ ಪೋಷಕರು ಮತ್ತು ಮಗಳಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ಟರ್ ಬಿಡಲು ನಿರ್ಧರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಅನುರಾಗ್ ಕಶ್ಯಪ್ ತಮ್ಮ ಅಭಿಪ್ರಾಯಗಳನ್ನು ಯಾವುದೇ ಸಂಕೋಚವಿಲ್ಲದೆ ವ್ಯಕ್ತಪಡಿಸುತ್ತಿದ್ದರು.ಈಗ ತಮ್ಮ ಟ್ವಿಟ್ಟರ್ ಖಾತೆ ಅಳಿಸುವ ಮೂಲಕ ಮುನ್ನ ಕೊನೆಯ ಟ್ವೀಟ್ ನಲ್ಲಿ ಅವರು ರೀತಿ ಬರೆದುಕೊಂಡಿದ್ದಾರೆ.

 

“ನಿಮ್ಮ ಪೋಷಕರಿಗೆ ಮತ್ತು ನಿಮ್ಮ ಮಗಳಿಗೆ ಆನ್‌ಲೈನ್ ಬೆದರಿಕೆಗಳು ಬಂದಾಗ ಈ ಬಗ್ಗೆ ಯಾರೂ ಮಾತನಾಡಲು ಬಯಸುವುದಿಲ್ಲ ಎಂದು ನಿಮಗೆ ಗೊತ್ತು. ಇದಕ್ಕೆ ಯಾವುದೇ ಕಾರಣ ಅಥವಾ ತಾರ್ಕಿಕತೆಯಿಲ್ಲ. ಕೊಲೆಗಡುಕರು ಆಳುತ್ತಾರೆ ಮತ್ತು ಕೊಲೆಗಡುಕತೆಯು ಹೊಸ ಜೀವನದ ವಿಧಾನವಾಗಿರುತ್ತದೆ. ಈ ಹೊಸ ಭಾರತದಲ್ಲಿ ಎಲ್ಲರಿಗೂ ಅಭಿನಂದನೆಗಳು ಮತ್ತು ನೀವೆಲ್ಲರೂ ಅಭಿವೃದ್ಧಿ ಹೊಂದುತ್ತೀರಿ ಎಂದು ಭಾವಿಸುತ್ತೇವೆ' ಎಂದು ಕಶ್ಯಪ್ ವಿಷಾದ ವ್ಯಕ್ತಪಡಿಸಿದ್ದಾರೆ.

“ನಾನು ನಿಮ್ಮೆಲ್ಲರ ಸಂತೋಷ ಮತ್ತು ಯಶಸ್ಸನ್ನು ಬಯಸುತ್ತೇನೆ. ನಾನು ಟ್ವಿಟ್ಟರ್ ತೊರೆದಾಗ ಇದು ನನ್ನ ಕೊನೆಯ ಟ್ವೀಟ್ ಆಗಿರುತ್ತದೆ. ಭಯವಿಲ್ಲದೆ ನನ್ನ ಮನಸ್ಸು ಮಾತನಾಡಲು ಸಾಧ್ಯವಿಲ್ಲದಿದ್ದಾಗ ನಾನು ಮಾತನಾಡುವುದಿಲ್ಲ. ಗುಡ್ ಬೈ ' ಎಂದು  ಕಶ್ಯಪ್ ತಮ್ಮ ಕೊನೆಯ ಟ್ವಿಟರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Trending News