ಸುನಿಲ್ ಗವಾಸ್ಕರ್ ಪಾದ ಮುಟ್ಟಿದ ನಿತೀಶ್ ರೆಡ್ಡಿ ತಂದೆ; ಮಾಜಿ ಕ್ರಿಕೆಟಿಗನ ಕಣ್ಣಲ್ಲಿ ಬಂತು ನೀರು!! ವಿಡಿಯೋ ನೋಡಿ

AUS vs IND 4th Test: ನಿತೀಶ್ ರೆಡ್ಡಿ ಅದ್ಭುತ ಶತಕದ ಗಳಿಸಿದ ನಂತರ ಮುತ್ಯಾಲ ರೆಡ್ಡಿಯವರು ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾದರು. ಆಗ ಗವಾಸ್ಕರ್ ʼನಿಮ್ಮಿಂದಾಗಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ರತ್ನ ಸಿಕ್ಕಿದೆʼ ಅಂತಾ ಹೇಳಿದರು.

Written by - Puttaraj K Alur | Last Updated : Dec 30, 2024, 01:03 AM IST
  • ಕ್ರಿಕೆಟ್‌ ದಂತಕಥೆ ಸುನಿಲ್‌ ಗವಾಸ್ಕರ್‌ ಪಾದ ಮುಟ್ಟಿದ ನಿತೀಶ್‌ ರೆಡ್ಡಿ ತಂದೆ
  • ನಿತೀಶ್ ಶತಕದ ನಂತರ ಮುತ್ಯಾಲ ರೆಡ್ಡಿಯವರು ಸುನಿಲ್ ಗವಾಸ್ಕರ್ ಭೇಟಿಯಾದರು
  • ʼನಿಮ್ಮಿಂದಾಗಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ರತ್ನ ಸಿಕ್ಕಿದೆʼ ಎಂದ ಸುನಿಲ್‌ ಗವಾಸ್ಕರ್
ಸುನಿಲ್ ಗವಾಸ್ಕರ್ ಪಾದ ಮುಟ್ಟಿದ ನಿತೀಶ್ ರೆಡ್ಡಿ ತಂದೆ; ಮಾಜಿ ಕ್ರಿಕೆಟಿಗನ ಕಣ್ಣಲ್ಲಿ ಬಂತು ನೀರು!! ವಿಡಿಯೋ ನೋಡಿ title=
ಗವಾಸ್ಕರ್‌ ಪಾದ ಮುಟ್ಟಿದ ನಿತೀಶ್‌ ರೆಡ್ಡಿ ತಂದೆ!

Nitish Reddy father Mutyala Reddy: ಆಸ್ಟ್ರೇಲಿಯಾ ವಿರುದ್ಧದ ೪ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಶತಕ ಗಳಿಸಿದರು. ಅವರ ಈ ಆಕರ್ಷಕ ಶತಕ ಎಲ್ಲೆಡೆ ಚರ್ಚೆಯಾಗುತ್ತಿದೆ. ನಿತೀಶ್ ಪಂದ್ಯದಲ್ಲಿ ಶತಕ ಬಾರಿಸಿದಾಗ ಅವರ ತಂದೆ ಮುತ್ಯಾಲ ರೆಡ್ಡಿ ಅವರ ಕಣ್ಣಲ್ಲಿ ನೀರು ಬಂದಿತ್ತು. ಒಬ್ಬ ತಂದೆ ತನ್ನ ಮಗನ ಯಶಸ್ಸಿನಲ್ಲಿ ಹೇಗೆ ಸಂತೋಷಪಡುತ್ತಾನೆ? ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಯಿತು. ಮೆಲ್ಬೋರ್ನ್ ಮೈದಾನದಲ್ಲಿ ಇಡೀ ವಿಶ್ವವೇ ಈ ದೃಶ್ಯವನ್ನು ನೋಡಿದೆ. ನಿತೀಶ್ ಅವರ ಇನ್ನಿಂಗ್ಸ್‌ನಿಂದ ಇಡೀ ಕ್ರೀಡಾಂಗಣದಲ್ಲಿ ಸಂಭ್ರಮ ಮನೆಮಾಡಿತ್ತು. ನಿತೀಶ್ ಶತಕದ ನಂತರ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಾಸಿಂ ಜಾಫರ್ ಕೂಡ ಹಾಡಿ ಹೊಗಳಿದ್ದಾರೆ. 

ಸುನಿಲ್ ಗವಾಸ್ಕರ್ ಪಾದ ಮುಟ್ಟಿದ ನಿತೀಶ್ ತಂದೆ! 

ನಿತೀಶ್ ರೆಡ್ಡಿ ಕ್ರಿಕೆಟ್‌ ವೃತ್ತಿಜೀವನಕ್ಕಾಗಿ ಅವರ ತಂದೆ ಮುತ್ಯಾಲ ರೆಡ್ಡಿ ಅವರು ತಮ್ಮ ಸರ್ಕಾರಿ ಕೆಲಸವನ್ನೇ ತೊರೆಇದ್ದರು. ನಿತೀಶ್ ಅವರ ಕ್ರಿಕೆಟ್ ಕೌಶಲ್ಯವನ್ನು ಸುಧಾರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದರು. ʼನನಗಾಗಿ ನೀವು ಸರ್ಕಾರಿ ಕೆಲಸವನ್ನು ತ್ಯಾಗ ಮಾಡಿದ್ದೀರಿ, ಮುಂದೊಂದು ದಿನ ನಾನು ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆʼ ಅಂತಾ ನಿತೀಶ್‌ ತಮ್ಮ ತಂದಗೆ ಮಾತುಕೊಟ್ಟಿದ್ದರು. ಅದರಂತೆ ಅವರು ಆಸೀಸ್‌ ವಿರುದ್ಧ ಆಕರ್ಷಕ ಶತಕ ಸಿಡಿಸಿದ್ದಾರೆ. ನಿತೀಶ್ ಶತಕದ ಗಳಿಸಿದ ನಂತರ ಮುತ್ಯಾಲ ರೆಡ್ಡಿಯವರು ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾದರು. ಆಗ ಗವಾಸ್ಕರ್ ʼನಿಮ್ಮಿಂದಾಗಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ರತ್ನ ಸಿಕ್ಕಿದೆʼ ಅಂತಾ ಹೇಳಿದರು. ʼನೀವು ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಮತ್ತು ನಿಮ್ಮಿಂದ ನನ್ನ ಕಣ್ಣಲ್ಲಿ ನೀರು ಬಂತುʼ ಅಂತಾ ಗವಾಸ್ಕರ್‌ ಈ ವೇಳೆ ಮುತ್ಯಾಲ ರೆಡ್ಡಿಗೆ ತಿಳಿಸಿದರು. ತನ್ನ ಮಗ ಇಷ್ಟು ದೊಡ್ಡ ಮೈದಾನದಲ್ಲಿ ಆಡುತ್ತಿದ್ದಾನೆ ಮತ್ತು ಇಷ್ಟು ದೊಡ್ಡ ಇನ್ನಿಂಗ್ಸ್ ಆಡುತ್ತಿದ್ದಾನೆ ಎಂಬುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲವೆಂದು ನಿತೀಶ್ ತಾಯಿ‌ ಭಾವುಕರಾಗಿ ಗವಾಸ್ಕರ್‌ಗೆ ತಿಳಿಸಿದರು. ಸಂಭಾಷಣೆಯ ವೇಳೆ ನಿತೀಶ್ ರೆಡ್ಡಿ ಅವರ ತಂದೆ ಗವಾಸ್ಕರ್ ಅವರ ಪಾದ ಮುಟ್ಟಿ ನಮಸ್ಕರಿಸಿದರು. 

ಇದನ್ನೂ ಓದಿ: ಬ್ಯಾಟಿಂಗ್‌ನ ಮೂಲಕ ಎದುರಾಳಿಗಳ ಎದೆ ನಡುಗಿಸಿದ ನಿತೀಶ್‌ ರೆಡ್ಡಿ ಅವರ ಪ್ರೇಯಸಿ ಯಾರು ಗೊತ್ತಾ..?

ರವಿಶಾಸ್ತ್ರಿ ಕಣ್ಣಲ್ಲೂ ನೀರು ತುಂಬಿತ್ತು!

ಇದಕ್ಕೂ ಮುನ್ನ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ, ʼನಿತೀಶ್ ರೆಡ್ಡಿ ಅವರ ಅದ್ಭುತ ಇನ್ನಿಂಗ್ಸ್ ನೋಡಿ ನನ್ನ ಕಣ್ಣಲ್ಲಿ ನೀರು ಬಂತುʼ ಎಂದು ಹೇಳಿದ್ದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರೆಡ್ಡಿ ನಾಲ್ಕನೇ ದಿನದ ಬೆಳಗಿನ ಅವಧಿಯಲ್ಲಿ 189 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 114 ರನ್ ಗಳಿಸಿ ಔಟಾದರು. ʼನಿತೀಶ್‌ ಬ್ಯಾಟಿಂಗ್ ಮಾಡಿದ ರೀತಿಯು ಅವರ ಪ್ರತಿಭೆ ಮತ್ತು ಶಿಸ್ತು ತೋರಿಸಿದೆ. ಅವರ ಅದ್ಭುತ ಇನ್ನಿಂಗ್ಸ್‌ ನೋಡಿ ನಾನು ಮೌನವಾದೆ ಮತ್ತು ನನ್ನ ಕಣ್ಣಲ್ಲಿ ನೀರು ಬಂದಿತು. ಅದು ಸಂತೋಷದ ಕಣ್ಣೀರು, ನನ್ನ ಕಣ್ಣಿಗೆ ಅಷ್ಟು ಸುಲಭವಾಗಿ ಬರುವುದಿಲ್ಲ. ನಿನ್ನೆ ರೆಡ್ಡಿಯವರ ಇನ್ನಿಂಗ್ಸ್ ನೋಡಿ ಖುಷಿ ಪಟ್ಟಿದ್ದೇನೆʼ ಅಂತಾ ಹೇಳಿದರು. 

ಟೀಂ ಇಂಡಿಯಾ 369 ರನ್ ಗಳಿಸಿದೆ

ಭಾರತದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 474 ರನ್ ಗಳಿಸಿತ್ತು. ಇದಾದ ಬಳಿಕ ಭಾರತ ತಂಡ 221 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ವಾಷಿಂಗ್ಟನ್ ಸುಂದರ್ ಜೊತೆಗೂಡಿ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಂಡ ನಿತೀಶ್ 127 ರನ್‌ಗಳ ಜೊತೆಯಾಟ ನಡೆಸಿದರು. ಈ ಆಟಗಾರರಿಂದಲೇ ಭಾರತ ತಂಡ ಫಾಲೋ ಆನ್ ಉಳಿಸುವಲ್ಲಿ ಯಶಸ್ವಿಯಾಗಿತ್ತು. ತಂಡ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 369 ರನ್ ಗಳಿಸಿತ್ತು. ನಿತೀಶ್ 114 ರನ್ ಮತ್ತು ಸುಂದರ್ 50 ರನ್ ಗಳಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 82 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 228 ರನ್‌ ಗಳಿಸಿದ್ದು, ಒಟ್ಟು 333 ರನ್‌ಗಳ ಮುನ್ನಡೆ ಸಾಧಿಸಿದೆ. 

ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೇಷ್ಠ ದಾಖಲೆ ಬರೆದ ಬುಮ್ರಾ: 147 ವರ್ಷಗಳ ಇತಿಹಾಸದಲ್ಲಿ ಯಾವೊಬ್ಬ ಕ್ರಿಕೆಟಿಗನೂ ಮಾಡಿರದ ವಿಶೇಷ ಸಾಧನೆಯಿದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News