ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ ಆರೀಫ್..!. ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ, ತಾಲಿಬಾನ್ ಚಟುವಟಿಕೆ. ತಾಲಿಬಾನ್ ಪವರ್ಫುಲ್ ಬಳಿಕ ಆಲ್ ಖೈದಾ ಮೇಲೆ ಒಲವು. ಈ ಹಿಂದೆ ಟ್ವಿಟರ್ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್. ಟೆಲಿಗ್ರಾಮ್ನಲ್ಲಿ ಆಲ್ ಖೈದಾ ಗ್ರೂಪ್ಗಳಲ್ಲಿ ಆರೀಫ್ ಆಕ್ಟೀವ್..?
Suspected terrorist Arif Arrested in Bengaluru: ಖಾಸಗಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸ್ತುತ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಆಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೀಫ್, ಆಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ. ಈತನಿಗೆ ಪತ್ನಿ ಜೊತೆ ಇಬ್ಬರು ಮಕ್ಕಳಿದ್ದು, ಈತ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಅಯ್ಮನ್ ಅಲ್ ಝವಾಹಿರಿ ಹತ್ಯೆ : ಭಯೋತ್ಪಾದನೆಯ ಮೇಲೆ ಪ್ರಬಲ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿಯನ್ನು ಹತ್ಯೆಗೈದಿರುವುದಾಗಿ ಅಮೇರಿಕಾ ಹೇಳಿಕೊಂಡಿದೆ. ಕಾಬೂಲ್ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕನನ್ನು ಕೊಂದಿರುವುದಾಗಿ ಯುಎಸ್ ಅಧ್ಯಕ್ಷ ಘೋಷಿಸಿದ್ದಾರೆ.
ಶಂಕಿತರು ಟೆಲಿಗ್ರಾಮ್ ಹಾಗೂ ಫೇಸ್ ಮೂಲಕ ಉಗ್ರ ನಾಯಕರ ಭಾಷಣದ ವಿಡಿಯೋ ಪೋಸ್ಟ್ ಮಾಡುತ್ತಿದ್ದರು. ಸಮಾಜದ ಸ್ವ್ಯಾಸ್ತ ಹಾಳುಮಾಡುವ ವಿಡಿಯೋ ಪೋಸ್ಟ್ ಬಗ್ಗೆ ಫೇಸ್ ಬುಕ್ ಎಚ್ಚರಿಸಿ ನಂತರ ಬ್ಲಾಕ್ ಮಾಡಿದ್ದರೂ ಸಹ ಅಖ್ತರ್ ಹುಸೇನ್ ನಕಲಿ ಅಕೌಂಟ್ ತೆರೆದು ತನ್ನ ಚಟುವಟಿಕೆ ಮುಂದುವರೆಸಿದ್ದ.
ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆಗಳ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಅಲ್ ಖೈದಾ ಹೊರಡಿಸಿದ ಬೆದರಿಕೆಗಳನ್ನು ಉಲ್ಲೇಖಿಸಿ, ದೇಶದ ಸಾಮಾಜಿಕ ಸಾಮರಸ್ಯವನ್ನು ಕದಡುವುದಕ್ಕೆ ಪ್ರಮುಖವಾಗಿ ಭಾರತೀಯ ಜನತಾ ಪಕ್ಷವು ಹೊಣೆಯಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಎಕ್ಯೂಐಎಸ್ ಜೂನ್ 6ರಂದು ಬೆದರಿಕೆ ಪತ್ರ ನೀಡಿದ್ದು, ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ 'ಪ್ರವಾದಿ ಗೌರವಕ್ಕಾಗಿ ಹೋರಾಡಲು' ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿತ್ತು.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಉಗ್ರಗಾಮಿ ಸಂಘಟನೆ ಅಲ್-ಖೈದಾ ಭಾರತದ ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
Bomb Threat To Delhi Airport - ಆಗಸ್ಟ್ 15 ಕ್ಕಿಂತ ಮುಂಚೆ, ಭಯೋತ್ಪಾದಕ ಸಂಘಟನೆ ಅಲ್ ಖೈದಾ ದೆಹಲಿಯ ಐಜಿಐ ವಿಮಾನ ನಿಲ್ದಾಣವನ್ನು ಅಂದರೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Indira Gandhi International Airport) ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ.
ಭಯೋತ್ಪಾದನೆ ಕುರಿತ ಯುಎನ್ ವರದಿಯು ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಐಸಿಸ್ ಭಯೋತ್ಪಾದಕರು ಇದ್ದಾರೆ ಎಂದು ಎಚ್ಚರಿಸಿದೆ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನಿಂದ 150 ರಿಂದ 200 ಉಗ್ರರ ಮೂಲಕ ಅಲ್-ಖೈದಾ ದಾಳಿ ನಡೆಸಲು ಸಂಚು ರೂಪಿಸಿದೆ ಎನ್ನುವ ಆತಂಕಕಾರಿ ಮಾಹಿತಿಯನ್ನು ವರದಿ ಬಹಿರಂಗಪಡಿಸಿದೆ.
ವರದಿಗಳ ಪ್ರಕಾರ, ಜನಪ್ರಿಯ ಸ್ಥಳಗಳಾದ ಫ್ರೀಮಾಸನ್ ಟೆಂಪಲ್, ಸರ್ವೊಥಮಾಮ್ ಮೇಸೋನಿಕ್ ಟೆಂಪಲ್ ಮತ್ತು ಕೇರಳದ ಕೊಚ್ಚಿಯ ಕೋಡರ್ ಹಾಲ್ ಪ್ರದೇಶಗಳಲ್ಲಿ ಜಿಹಾದಿಗಳಿಂದ ತೀವ್ರ ಬೆದರಿಕೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.