ರಫೇಲ್ ಒಪ್ಪಂದದ ವಿಚಾರವಾಗಿ ಪ್ರಧಾನಿ ಕಚೇರಿಯ ಪ್ರಗತಿ ಮೇಲ್ವಿಚಾರಣೆಯನ್ನು ಹಸ್ತಕ್ಷೇಪ ಅಥವಾ ಪ್ರತ್ಯೇಕ ಮಾತುಕತೆ ಎಂದು ಪರಿಗಣಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸೋರಿಕೆಯಾಗಿರುವ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸದಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಬುಧವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಚುನಾವಣೆ ಬಳಿಕ ರಫೇಲ್ ಒಪ್ಪಂದದ ತನಿಖೆ ನಡೆಯಲಿದೆ. ಚೌಕಿದಾರ್ ಜೈಲಿಗೆ ಹೋಗುತ್ತಾರೆ ಎಂದು ಹೇಳುವ ಮೂಲಕ ಪ್ರತಿಯೊಬ್ಬರಿಗೂ "ಚೌಕಿದಾರ್" ಆಗಬೇಕೆಂಬ ಪ್ರಧಾನಿ ಪ್ರಸ್ತಾಪವನ್ನು ರಾಹುಲ್ ಗಾಂಧಿ ಟೀಕಿಸಿದರು.
ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ನಡೆಯುತ್ತಿರುವ ತನಿಖೆಯಿಂದ ಸರ್ಕಾರ ಭೀತಿಗೆ ಸಿಲುಕಿದೆ ಆದ್ದರಿಂದ ಅವರು ಸಿಬಿಐ ಮುಖ್ಯಸ್ಥ ಅಲೋಕ್ ಕುಮಾರ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಫ್ರಾನ್ಸ್ ನಿಂದ ಖರೀದಿ ಮಾಡಿರುವ 8.6 ಶತಕೋಟಿ ಡಾಲರ್ ಮೊತ್ತದ 36 ಯುದ್ದ ವಿಮಾನಗಳ ವ್ಯಾಪಾರದಿಂದ ಅನಿಲ್ ಅಂಬಾನಿ ಕಂಪನಿ ಲಾಭ ಪಡೆದಿದೆ ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ನೇರವಾಗಿ ರಿಲಯನ್ಸ್ ಪರವಾಗಿ ವ್ಯವಹಾರ ಕುದುರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.
ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ರಿಲಯನ್ಸ್ ಹೆಸರನ್ನು ಸೂಚಿಸಿದ್ದೆ ಮೋದಿ ಸರ್ಕಾರ ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂಡ್ ಹೇಳಿದ್ದಾರೆ.ಆ ಮೂಲಕ ಈಗ ಅವರ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.