ರಫೇಲ್ ಒಪ್ಪಂದದ ವಿವರವನ್ನು ಸುಪ್ರೀಂಗೆ ಸಲ್ಲಿಸಿದ ಕೇಂದ್ರ ಸರ್ಕಾರ

 ಸೋಮವಾರದಂದು ಕೇಂದ್ರ ಸರ್ಕಾರವು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸುಪ್ರಿಂಕೋರ್ಟ್ ಗೆ ಲಿಖಿತವಾಗಿ ನೀಡಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Last Updated : Nov 12, 2018, 05:02 PM IST
 ರಫೇಲ್ ಒಪ್ಪಂದದ ವಿವರವನ್ನು ಸುಪ್ರೀಂಗೆ ಸಲ್ಲಿಸಿದ ಕೇಂದ್ರ ಸರ್ಕಾರ title=

ನವದೆಹಲಿ: ಸೋಮವಾರದಂದು ಕೇಂದ್ರ ಸರ್ಕಾರವು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸುಪ್ರಿಂಕೋರ್ಟ್ ಗೆ ಲಿಖಿತವಾಗಿ ನೀಡಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಒಪ್ಪಂದವನ್ನು ಪ್ರಕ್ರೀಯೆಗೆ ಅನುಗುಣವಾಗಿ ಮಾಡಲಾಗಿದೆ ಎಂದು ತಿಳಿಸಿದೆ. 2013 ರಲ್ಲಿನ ರಕ್ಷಣಾ ಇಲಾಖೆಯ ನಿಯಮಕ್ಕನುಗುಣವಾಗಿ 36 ಯುದ್ದ ವಿಮಾನಗಳನ್ನು ಖರೀಧಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಪಾಲುದಾರರನ್ನು ಆಯ್ಕೆ ಮಾಡುವಲ್ಲಿ ತನ್ನದು ಯಾವುದೇ ರೀತಿ ಪಾತ್ರವಿಲ್ಲ ವಿದೇಶಿ ಕಂಪನಿಯು ತನ್ನ ಅವಶ್ಯಕತೆಗೆ ಅನುಗುಣವಾಗಿ ಅದು ಪಾಲುದಾರರನ್ನು ಆಯ್ಕೆ ಮಾಡಿಕೊಂಡಿದೆ.ಅಫಿಡವಿಟ್ ಪ್ರಕಾರ, 2016 ರ ಆಗಸ್ಟ್ 24 ರಂದು ಭದ್ರತಾ ಸಮಿತಿಯು ತನ್ನ ಅನುಮೋದನೆಯನ್ನು ನೀಡಿತು.ಅದರ ನಂತರ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದವನ್ನು 2016ರ ಸೆಪ್ಟೆಂಬರ್ 23 ರಂದು ಅಂತಿಮಗೊಳಿಸಲಾಯಿತು ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.

ಅಕ್ಟೋಬರ್ ತಿಂಗಳಲ್ಲಿ ಸುಪ್ರಿಂಕೋರ್ಟ್ ರಫೇಲ್ ಒಪ್ಪಂದದ ವಿಚಾರವಾಗಿ ಅದರ ಖರೀದಿ ದರ ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ವಕೀಲರಾದ ಮನೋಹರ್ ಲಾಲ್ ಶರ್ಮಾ, ವಿನೀತ್ ದಂಡಾ ಅವರು ರಫೇಲ್ ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸಬೇಕೆಂದು ಅವರು ಸುಪ್ರಿಂನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು.   

 

Trending News