ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಈ ಅಧಿವೇಶನದಲ್ಲಿ, ಸರ್ಕಾರವು ಅನೇಕ ಪ್ರಮುಖ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಮಾಡಲು ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಸೇಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಅಡಿಯಲ್ಲಿ ಸರ್ಕಾರವು ನೇರವಾಗಿ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ.
2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 963 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದ್ದು, ಲೋಕಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರದಲ್ಲಿ ಗೃಹ ಸಚಿವಾಲಯ ಈ ಡೇಟಾವನ್ನು ನೀಡಿದೆ.
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಭಯೋತ್ಪಾದನೆ ವಿರುದ್ಧ ಸಹಿಷ್ಣು ನೀತಿಯನ್ನು ಅನುಸರಿಸಿ, ಭಯೋತ್ಪಾದಕರನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಗೃಹ ಸಚಿವಾಲಯ ಹೇಳಿದೆ.
ಮೋದಿ ಸರ್ಕಾರ ಇಂಧನ ಚಿಲ್ಲರೆ ವ್ಯಾಪಾರವನ್ನು ಜಾರಿಗೆ ತರಲು ಯೋಚಿಸುತ್ತಿದೆ. ಇಂಧನ ಚಿಲ್ಲರೆ ವ್ಯಾಪಾರ ಎಂದರೆ ನೀವು ಪೆಟ್ರೋಲ್ ಡೀಸೆಲ್ ಅನ್ನು ಪೆಟ್ರೋಲ್ ಪಂಪ್ಗಳಲ್ಲಿ ಮಾತ್ರವಲ್ಲದೆ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿಯೂ ಖರೀದಿಸಬಹುದು.
ಮೋದಿ ಸರ್ಕಾರವು ಮೊದಲ ಬಾರಿಗೆ ಎಲ್ಇಡಿ ಬಲ್ಬ್ ಗಳನ್ನೂ ಅಗ್ಗದ ಬೆಲೆಗೆ ನೀಡುವ ಮೂಲಕ ದಾಖಲೆಯನ್ನು ಮಾಡಿದೆ. ಈಗ ಸರ್ಕಾರದ ಯೋಜನೆ ಅಗ್ಗದ ಏರ್ ಕಂಡಿಷನರ್ (ಎಸಿ) ಅನ್ನು ಸಾರ್ವಜನಿಕರಿಗೆ ತಲುಪಿಸುವುದು. ಈ ಎಸಿಗಳು ಮಾರುಕಟ್ಟೆಯ ಮೌಲ್ಯದೊಂದಿಗೆ ಸಾಕಷ್ಟು ಅಗ್ಗವಾಗುತ್ತವೆ ಮತ್ತು ವಿದ್ಯುತ್ ಬಿಲ್ ಕೂಡ ತುಂಬಾ ಕಡಿಮೆಯಿರುತ್ತದೆ ಎನ್ನಲಾಗಿದೆ.
ಪ್ರಧಾನಿ ವಿರುದ್ದ ಟೀಕಾ ಪ್ರಹಾರವನ್ನು ಹರಿತಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ರೀತಿಯ ಚಳುವಳಿ ಅಗತ್ಯವೆಂದು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬಿಎಸ್ಪಿ ಮಾಯಾವತಿ "ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೋದಿ ಸರ್ಕಾರವು ಅಧಿಕಾರವನ್ನು ದುರೋಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಎಸ್ಪಿ ಮತ್ತು ಬಿಎಸ್ಪಿ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ದೂರ ಸರಿಯಿತ್ತಿರುವ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಭಾನುವಾರ ಬಿಜೆಪಿ ಪಕ್ಷವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಅಗತ್ಯವಿದೆ ಎಂದು ತಿಳಿಸಿದರು.
ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ
ನಿವೃತ್ತಿ ವಯಸ್ಸನ್ನು ಬದಲಾಯಿಸಲು ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಬನ್ಶಿಲಾಲ್ ಮಹಾಟೋ ಅವರ ಪ್ರಶ್ನೆಗೆ ಉತ್ತರಿಸುತ್ತಾ ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಭದ್ರತಾ ಪ್ರಾಧಿಕಾರವನ್ನು ಬಜೆಟ್ನಲ್ಲಿ ರಚಿಸುವುದನ್ನು ಈ ಬಾರಿ ಸರ್ಕಾರ ಘೋಷಿಸಬಹುದೆಂದು ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ, ಈ ಅಧಿಕಾರದ ಅಡಿಯಲ್ಲಿ ಹೂಡಿಕೆ ಮತ್ತು ವಿಮೆಗೆ ಸಂಬಂಧಿಸಿದ ಎಲ್ಲಾ ಸಾಮಾಜಿಕ ಭದ್ರತೆ ಯೋಜನೆಗಳನ್ನು ಒಂದೇ ಛಾವಣಿಯಡಿಯಲ್ಲಿ ತರಲು ಕೇಂದ್ರ ಸರ್ಕಾರ ಬಯಸಿದೆ.
2017ರ ಅಂತಿಮ ಘಟ್ಟಕ್ಕೆ ನಾವೀಗ ಬಂದಿದ್ದೇವೆ. 2017 ಕೊನೆಗೊಳ್ಳಲು ಒಂದೆರಡೆ ದಿನ ಬಾಕಿ ಇದೆ. ಮೂರನೇ ದಿನ 2018 ಪ್ರಾರಂಭವಾಗಲಿದೆ. ಹೊಸ ವರ್ಷದಲ್ಲಿ ಅನೇಕ ವಿಷಯಗಳು ಬದಲಾಗುತ್ತವೆ. ಹೊಸ ವರ್ಷದಿಂದ ಹಲವಾರು ನಿಯಮಗಳ ಅನುಷ್ಠಾನವನ್ನು ಸರ್ಕಾರ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.