ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸಮಾನ ಮನಸ್ಕ ಪಕ್ಷಗಳ ಅಗತ್ಯವಿದೆ- ಮಲ್ಲಿಕಾರ್ಜುನ್ ಖರ್ಗೆ

ಎಸ್ಪಿ ಮತ್ತು ಬಿಎಸ್ಪಿ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ದೂರ ಸರಿಯಿತ್ತಿರುವ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಭಾನುವಾರ ಬಿಜೆಪಿ ಪಕ್ಷವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಅಗತ್ಯವಿದೆ ಎಂದು ತಿಳಿಸಿದರು.

Last Updated : Oct 7, 2018, 02:40 PM IST
ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸಮಾನ ಮನಸ್ಕ ಪಕ್ಷಗಳ ಅಗತ್ಯವಿದೆ- ಮಲ್ಲಿಕಾರ್ಜುನ್ ಖರ್ಗೆ  title=

ಬೆಂಗಳೂರು: ಎಸ್ಪಿ ಮತ್ತು ಬಿಎಸ್ಪಿ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ದೂರ ಸರಿಯಿತ್ತಿರುವ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಭಾನುವಾರ ಬಿಜೆಪಿ ಪಕ್ಷವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಅಗತ್ಯವಿದೆ ಎಂದು ತಿಳಿಸಿದರು.

"ಪ್ರತಿ ರಾಜ್ಯವು ತನ್ನದೇ ಆದ ರಾಜಕೀಯ ಕ್ರಿಯಾಶೀಲತೆ ಮತ್ತು ತಂತ್ರಗಳನ್ನು ಹೊಂದಿದೆ. ಆದ್ದರಿಂದ ಸಮಾನ ಮನಸ್ಕ  ಪಕ್ಷಗಳು ಈ ಸರ್ಕಾರವನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡಬೇಕೆಂದು" ಎಂದು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಶನಿವಾರದಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡುತ್ತಾ ಕಾಂಗ್ರೆಸ್ ಪಕ್ಷಕ್ಕೆ ಜೊತೆಗಿನ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು ಅಲ್ಲದೆ ಕಾಂಗ್ರೆಸ್ ನ ಸಮಯಕ್ಕೆ ಕಾಯುವುದಿಲ್ಲ ಮತ್ತು ಮೈತ್ರಿ ವಿಚಾರವಾಗಿ ಬಿಎಸ್ಪಿಯೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅವರು ತಿಳಿಸಿದರು.

ಈ ವಾರದ ಆರಂಭದಲ್ಲಿ ಮಾಯಾವತಿಯವರು ರಾಜಸ್ತಾನ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲಿ ಏಕಪಕ್ಷೀಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು.ಕಾಂಗ್ರೆಸ್ ಪಕ್ಷವನ್ನು ಆರೋಪಿಸುತ್ತಾ ಕೇವಲ ಕೆಲವೇ ಸೀಟುಗಳನ್ನು ನೀಡುವುದರ ಮೂಲಕ ಕಾಂಗ್ರೆಸ್ ಪಕ್ಷವು ಬಿಎಸ್ಪಿಯನ್ನು ಇಲ್ಲವಾಗಿಸುವತ್ತ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದ್ದರು.

ಮಧ್ಯಪ್ರದೇಶದಲ್ಲಿ ನವೆಂಬರ್ 28 ಮತ್ತು ರಾಜಸ್ಥಾನ್ ಡಿಸೆಂಬರ್ 7 ರಂದು ಏಕ ಹಂತದ ವಿಧಾನಸಭೆ ಚುನಾವಣೆ ನಡೆಯಲಿದೆ.

Trending News