LED ಬಲ್ಬ್'ನಿಂದ ಲಭ್ಯವಾಗಲಿದೆ ಹೈಸ್ಪೀಡ್ ಇಂಟರ್ನೆಟ್!

ಇತ್ತೀಚಿನ ಯೋಜನೆಯಡಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ತಂತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಹೊಸ ತಂತ್ರಜ್ಞಾನವನ್ನು ಲೈ-ಫೈ ತಂತ್ರಜ್ಞಾನ ಎಂದು ಹೆಸರಿಸಲಾಗಿದೆ.  

Last Updated : Jan 30, 2018, 04:52 PM IST
LED ಬಲ್ಬ್'ನಿಂದ ಲಭ್ಯವಾಗಲಿದೆ ಹೈಸ್ಪೀಡ್ ಇಂಟರ್ನೆಟ್! title=

ನವದೆಹಲಿ: ಇದು 4 ಜಿ ಇಂಟರ್ನೆಟ್ ಯುಗ. ಈ ಸಮಯದಲ್ಲಿ LED ಬಲ್ಬ್'ನಿಂದ ನಿಮಗೆ ಸೂಪರ್ ಫಾಸ್ಟ್ ಇಂಟರ್ನೆಟ್ ಸಿಕ್ಕರೆ ಹೇಗಿರುತ್ತೆ? ಇದು ತಮಾಷೆಯಲ್ಲ, ನೀವು ನಿಜವಾಗಿಯೂ ನಿಮ್ಮ ಮನೆಯಲ್ಲಿರುವ ಬಲ್ಬ್'ನಿಂದಲೇ ಉಚಿತ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು. ನಿಮ್ಮ ಮನೆಯಲ್ಲಿ LED ಬಲ್ಬ್ ಇದ್ದರೆ ನೀವು ಖಚಿತವಾಗಿ ಈ ಲಾಭವನ್ನು ಪಡೆಯುತ್ತೀರಿ. ಭಾರತ ಸರ್ಕಾರವು ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ ಮತ್ತು ಇದಲ್ಲದೆ ಹಲವು ವೈಶಿಷ್ಟ್ಯಗಳನ್ನು ಒದಗಿಸಬಹುದು. ಇತ್ತೀಚಿನ ಯೋಜನೆಯಡಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ತಂತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಹೊಸ ತಂತ್ರಜ್ಞಾನವನ್ನು ಲೈ-ಫೈ ತಂತ್ರಜ್ಞಾನ ಎಂದು ಹೆಸರಿಸಲಾಗಿದೆ.

ಈ ಮೂಲಕ ಅದು ಒಂದು ಕಿಲೋಮೀಟರ್ ಪ್ರದೇಶದಲ್ಲಿ 10 ಜಿಬಿ ವೇಗದಿಂದ ದತ್ತಾಂಶವನ್ನು ವರ್ಗಾಯಿಸುತ್ತದೆ ಎಂದು ತಂತ್ರಜ್ಞಾನ ಹೇಳಿದೆ. ಈ ವಿಧಾನದ ಮೂಲಕ, ಇಂಟರ್ನೆಟ್ ಅನ್ನು ಬಹುತೇಕ ಭಾಗಗಳಿಗೆ ತಲುಪಿಸಬಹುದು.

ಸಚಿವಾಲಯದ ಅಡಿಯಲ್ಲಿ ಪೈಲಟ್ ಯೋಜನೆಯನ್ನು ನಡೆಸುತ್ತಿರುವ ಸ್ವಾಯತ್ತ ಸೈಂಟಿಫಿಕ್ ಬಾಡಿ ಎಜುಕೇಷನ್ ಅಂಡ್ ರಿಸರ್ಚ್ ನೆಟ್ವರ್ಕ್ನ ಡೈರೆಕ್ಟರ್ ಜನರಲ್ (ಇಆರ್ಎನ್ಇಟಿ) ನಯಾ ಪಹುಜಾ, ಭವಿಷ್ಯದಲ್ಲಿ ಸ್ಮಾರ್ಟ್ ನಗರಗಳಲ್ಲಿ ಲೈ-ಫೈ ತಂತ್ರಜ್ಞಾನವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Trending News