ನವದೆಹಲಿ: ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣ ಪ್ರಮುಖವಾಗಿ ಮೋದಿ ಸರ್ಕಾರದ ಬಗೆಗಿರುವ ಕಳವಳವಷ್ಟೇ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.
ಎನ್ಡಿಟಿವಿ ಗೆ ಬರೆದ ಅಂಕಣದಲ್ಲಿ ತಿಳಿಸಿರುವ ಮಣಿಶಂಕರ್ ಅಯ್ಯರ್ ವಾಲ್ಟರ್ ಆಂಡರ್ಸನ್ ಮತ್ತು ಶ್ರೀಧರ್ ಧಾಮ್ಲೇ ಅವರ ಇತ್ತೀಚೆಗಿನ ಪುಸ್ತಕ "ದಿ ಆರೆಸೆಸ್ಸ್: ಎ ವೀವ್ ಟು ಇನ್ ಸೈಡ್" ವನ್ನು ಪ್ರಸ್ತಾಪಿಸುತ್ತಾ ಭಾಗವತ್ ಇತ್ತೀಚೆಗಿನ ನಿಲುವು ಪ್ರಮುಖವಾಗಿ ಮೋದಿ ಮತ್ತು ಶಾ ಜೋಡಿಯು 2018ರಲ್ಲಿ ಆಳ್ವಾರ್, ಅಜ್ಮೀರ್, ಗೊರಖಪುರ್, ಪುಲ್ಪುರ್,ಅರೆರಿಯಾ, ಖೈರಾನಾ ದಲ್ಲಿ ಸೋತಿರುವುದು ಆರೆಸೆಸ್ಸ್ ಗೆ ಆತಂಕ ಸೃಷ್ಟಿಸಿದೆ. ಅಲ್ಲದೆ ಸಿಎಸ್ಡಿಎಸ್ ಸಮೀಕ್ಷೆಯಂತೆ ಬಿಜೆಪಿ ಬೆಂಬಲ ದಲಿತ ಸಮುದಾಯದಲ್ಲಿ ಶೇ 33 ರಿಂದ 22 ಕ್ಕೆ ಇಳಿದಿದೆ. ಈ ಹಿನ್ನಲೆಯಲ್ಲಿ ಭಾಗವತ್ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಯ್ಯರ್ ವಿವರಿಸಿದ್ದಾರೆ.
ಇನ್ನು ಮುಂದುವರೆದು ಭಾಗವತ್ ಅವರ ಭಾಷಣ ಹಿಂದು ಬಲಪಂಥೀಯರ ರಾಜಕೀಯ ಅವಕಾಶವಾದಿತನವನ್ನು ಮುಂದುವರೆಸುವುದೇ ಆಗಿದೆ ಆದ್ದರಿಂದ ಭಾಗವತ್ ಚಿಕ್ಯಾಗೋದಲ್ಲಿ ನಡೆದ ವಿಶ್ವ ಹಿಂದು ಕಾಂಗ್ರೆಸ್ ನಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತಾ " ಸಿಂಹ ಮತ್ತು ರಾಯಲ್ ಬೆಂಗಾಲ್ ಟೈಗರ್ ಕೂಡ ಅರಣ್ಯದ ಒಡೆಯ ಎಂದು ಹೇಳುತ್ತದೆ.ಆದರೆ ಒಬ್ಬಂಟಿಯಾಗಿದ್ದರೆ ಕ್ರೂರ ಕಾಡು ನಾಯಿಗಳು ಅವುಗಳ ಮೇಲೆ ದಾಳಿ ನಡೆಸಿ ನಾಶ ಮಾಡುತ್ತವೆ, ಆದ್ದರಿಂದ ನಮ್ಮ ವಿರೋಧಿಗಳಿಗೆ ಇದು ತಿಳಿದಿದೆ" ಎನ್ನುವ ಭಾಗವತ್ ಹೇಳಿಕೆಯ ಒಳ ಅರ್ಥವನ್ನು ಮಣಿಶಂಕರ್ ಅಯ್ಯರ್ ಅಂಕಣದಲ್ಲಿ ವಿವರಿಸಿದ್ದಾರೆ. ಆ ಮೂಲಕ ಭಾಗವತ್ ತಮ್ಮ ಅಜೆಂಡಾವನ್ನು ತೋರಿಸಿದ್ದಾರೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.