ಭಾರತ ಮತ್ತು ಪಾಕಿಸ್ತಾನ ಎದುರಿಸುತ್ತಿರುವ ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಯಾವುದೇ ದೇಶವು ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಫ್ರಾನ್ಸ್ನ ಬಿಯರಿಟ್ಜ್ನಲ್ಲಿ ನಡೆದ ಜಿ 7 ಶೃಂಗಸಭೆಯ ಹೊರತಾಗಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿ ಕಾಶ್ಮೀರ ಸಮಸ್ಯೆಯು ಯಾವುದೇ ಮೂರನೇ ಶಕ್ತಿಯ ಹಸ್ತಕ್ಷೇಪವನ್ನು ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಚೀನಾ ದೇಶಗಳು ಈಗ ಮುಂದುವರೆಯುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ, ಆದ್ದರಿಂದ ಈ ಹಣೆ ಪಟ್ಟದ ಮೂಲಕ ಡಬ್ಲ್ಯೂಟಿಓ ದಿಂದ ಅವುಗಳು ಲಾಭ ಪಡೆಯುತ್ತಿವೆ, ಇದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್, ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆಯಾದರೂ, ಪಾಕ್ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದೆ.
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಸುಂಕದ ವಿಷಯವಾಗಿ ಮತ್ತೆ ತಗಾದೆ ತೆಗೆದಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಭಾನುವಾರ ಎರಡು ಕೊರಿಯಾಗಳನ್ನು ಬೇರ್ಪಡಿಸುವ ಡಿ.ಎಂ.ಜೆಡ್ ಗಡಿ ಗ್ರಾಮವಾದ ಪನ್ಮುಂಜೋಮ್ ನಲ್ಲಿ ಭೇಟಿಯಾದರು. ಇಲ್ಲಿಂದ ಟ್ರಂಪ್ ಉತ್ತರ ಕೊರಿಯಾದ ಭೂಪ್ರದೇಶವನ್ನು ಪ್ರವೇಶಿಸಿದರು.
1995 ಅಥವಾ 1996 ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬರ್ಗ್ಡಾರ್ಫ್ ಗುಡ್ಮ್ಯಾನ್ ಡಿಪಾರ್ಟ್ಮೆಂಟ್ ಶಾಪ್ ನಲ್ಲಿನ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಗೈದಿದ್ದಾನೆ ಎಂದು ಸಲಹೆ ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಗಂಭೀರ್ ಆರೋಪ ಮಾಡಿದ್ದಾರೆ.
"ನಾವು ಭಾರತಕ್ಕೆ ಮೋಟಾರ್ಸೈಕಲ್ ಕಳುಹಿಸಿದಾಗ, ಅವರು ನಮಗೆ 100 ಪ್ರತಿಶತದಷ್ಟು ತೆರಿಗೆ ವಿಧಿಸುತ್ತಾರೆ. ಆದರೆ ಭಾರತವು ನಮಗೆ ಮೋಟಾರ್ಸೈಕಲ್ ಕಳುಹಿಸಿದಾಗ, ನಾವು ಅವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ" - ಡೊನಾಲ್ಡ್ ಟ್ರಂಪ್
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತಕ್ಕೆ ನೀಡಿದ್ದ ಆಧ್ಯತಾ ವಹಿವಾಟು ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೇ ಬರುವ ಜೂನ್ 5 ಕ್ಕೆ ಇದು ಕೊನೆಗೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ಭಾರತೀಯ ಅಮೆರಿಕನ್ನರೋಡನೆ ದೀಪಾವಳಿ ಆಚರಿಸುತ್ತಾ ಮೋದಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹಕ್ಕೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.