ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವೇನು ಮೂರ್ಖರೇ ಎಂದಿದ್ದೇಕೆ?

"ನಾವು ಭಾರತಕ್ಕೆ ಮೋಟಾರ್ಸೈಕಲ್ ಕಳುಹಿಸಿದಾಗ, ಅವರು ನಮಗೆ 100 ಪ್ರತಿಶತದಷ್ಟು ತೆರಿಗೆ ವಿಧಿಸುತ್ತಾರೆ. ಆದರೆ ಭಾರತವು ನಮಗೆ ಮೋಟಾರ್ಸೈಕಲ್ ಕಳುಹಿಸಿದಾಗ, ನಾವು ಅವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ" - ಡೊನಾಲ್ಡ್ ಟ್ರಂಪ್  

Last Updated : Jun 11, 2019, 12:37 PM IST
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವೇನು ಮೂರ್ಖರೇ ಎಂದಿದ್ದೇಕೆ? title=
Pic Courtesy: Reuters

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನೀಡುತ್ತಿದ್ದ ಜನರಲ್ ಸಿಸ್ಟಮ್ಸ್ ಆಫ್ ಪ್ರಾಫಿಶನ್ಸ್ (ಜಿಎಸ್‌ಪಿ)ಯನ್ನು ಹಿಂತೆಗೆದುಕೊಂಡಿದ್ದಾರೆ. ಈ ಕಾರಣದಿಂದಾಗಿ, ಭಾರತದ ಸುಮಾರು $ 5 ಶತಕೋಟಿ ರಫ್ತುಗಳ ಮೇಲೆ ಪರಿಣಾಮ ಬೀರಿದೆ. ಭಾರತಕ್ಕೆ ನೀಡಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ವಾಪಸ್ ಪಡೆದ ಬೆನ್ನಲ್ಲೇ, ಅಮೆರಿಕದ ಮೋಟಾರ್ ಸೈಕಲ್‌ಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕದ ಪ್ರಮಾಣ ಬಹಳ ಅತಿಯಾಗಿದೆ ಎಂದು ಅಸಮಾಧಾನ ಹೊರಹಾಕಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ನಾಯಕತ್ವದಲ್ಲಿರುವ ಅಮೆರಿಕವನ್ನು ಇನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಸಿಬಿಎಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೆರಿಕದ ವಸ್ತುಗಳಿಗೆ ಭಾರತ ಅಧಿಕ ಸುಂಕ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ಆದ್ಯತೆಯನ್ನು ಕೊನೆಗೊಳಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ಇದಕ್ಕೆ ಮೋಟರ್ ಸೈಕಲ್ ಉದಾಹರಣೆಯನ್ನೂ ನೀಡಿದ್ದ ಟ್ರಂಪ್, "ನಾವು ಭಾರತಕ್ಕೆ ಮೋಟಾರ್ಸೈಕಲ್ ಕಳುಹಿಸಿದಾಗ, ಅವರು ನಮಗೆ 100 ಪ್ರತಿಶತದಷ್ಟು ತೆರಿಗೆ ವಿಧಿಸುತ್ತಾರೆ. ಆದರೆ ಭಾರತವು ನಮಗೆ ಮೋಟಾರ್ಸೈಕಲ್ ಕಳುಹಿಸಿದಾಗ, ನಾವು ಅವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ" ಎಂದಿದ್ದರು.

ಬಳಿಕ ಯುಎಸ್ ಮತ್ತು ಭಾರತದ ನಡುವಿನ ವ್ಯವಹಾರ ಸಂಬಂಧಗಳನ್ನು ಸರಿಪಡಿಸಲು, ಭಾರತವು ಅಮೆರಿಕನ್ ಮೋಟರ್ಸೈಕಲ್ಗಳಲ್ಲಿ ಆಮದು ಸುಂಕವನ್ನು 100% ರಿಂದ 50% ಗೆ ಕಡಿಮೆ ಮಾಡಿತು. ಈ ಹೊರತಾಗಿಯೂ, ಸಮಾಧಾನಗೊಳ್ಳದ ಡೊನಾಲ್ಡ್ ಟ್ರಂಪ್, ತಮ್ಮ ನಾಯಕತ್ವದಲ್ಲಿ ಅಮೆರಿಕವನ್ನು ಹೆಚ್ಚು ಮೋಸಗೊಳಿಸಬಾರದು ಎಂದು ಹೇಳಿದ್ದಾರೆ. ಜೊತೆಗೆ ಪ್ರಸ್ತುತ ವಿಧಿಸಲಾಗುತ್ತಿರುವ ಸುಂಕವನ್ನು ಇನ್ನೂ ಕಡಿಮೆ ಮಾದ್ದಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯುಎಸ್ ಟ್ರೇಡ್ ಡೆಫಿಸಿಟ್ $ 800 ಶತಕೋಟಿ ತಲುಪಿದೆ ಎಂದು ಟ್ರಂಪ್ ಹೇಳಿದರು. ಇದರಲ್ಲಿ ಈ ಹಿಂದಿನ ಸರ್ಕಾರಗಳ ದೊಡ್ಡ ಕೊಡುಗೆ ಇದೆ. ಅಮೆರಿಕಾ ಲೂಟಿ ಮಾಡುವುದನ್ನು ನಾನು ನೋಡಲಾರೆ ಇತ್ತೀಚಿಗೆ ಚೀನಾದಿಂದ ಆಮದು ಮಾಡಿಕೊಂಡ 200 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ಮೇಲೆ ತೆರಿಗೆ ಹೆಚ್ಚಿದೆ. ಇತ್ತೀಚೆಗೆ, ಜಿ -20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಜಿ ಜಿಂಪಿಂಗ್ ಪ್ರತ್ಯೇಕವಾಗಿ ಅವರನ್ನು ಭೇಟಿಯಾಗದಿದ್ದರೆ, ನಿಯಮಗಳ ಅಡಿಯಲ್ಲಿ ಅವರು ಇನ್ನೂ ಅಧಿಕ ತೆರಿಗೆ ವಿಧಿಸುತಿದ್ದರು ಎಂದು ಟ್ರಂಪ್ ಹೇಳಿದ್ದಾರೆ. ಅದಾಗ್ಯೂ, ಯುಎಸ್ ನಿಂದ ಚೈನಾಗೆ ರಫ್ತು ಮಾಡಲಾಗುವ ಸರಕುಗಳ ಮೇಲೆ ತೆರಿಗೆಯನ್ನು ಚೀನಾ ಹೆಚ್ಚಿಸಿತು. 

Trending News