ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್

ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್, ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆಯಾದರೂ, ಪಾಕ್ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದೆ. 

Last Updated : Aug 2, 2019, 11:20 AM IST
ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್ title=

ವಾಷಿಂಗ್ಟನ್:  ಕಾಶ್ಮೀರ ವಿವಾದವನ್ನು ಬಗೆಹರಿಸುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ವಿಚಾರ.  ಆದರೆ ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳ ಭಾರತ ಮತ್ತು ಪಾಕ್ ನಾಯಕರು ಬಯಸಿದರೆ ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆಗೆ ಸಿದ್ಧ ಎಂದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್, ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆಯಾದರೂ, ಪಾಕ್ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದೆ. 

ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಮಧ್ಯಸ್ಥಿಕೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಚಾರ" ಎಂದು ಸ್ಪಷ್ಟಪಡಿಸಿದರು.

"ಪ್ರಧಾನಿಗಳಾದ ಮೋದಿ-ಇಮ್ರಾನ್ ಇಬ್ಬರೂ ನಿಜಕ್ಕೂ ಅತ್ಯುತ್ತಮರು. ಅವರೇ ಈ ಸಮಸ್ಯೆಯನ್ನು ಹೊಂದಾಣಿಕೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ, ಯಾರಿಗಾದರೂ ನನ್ನ ಮಧ್ಯಪ್ರವೇಶದ ಅಗತ್ಯವಿದೆ ಎಂದು ಬಯಸಿದರೆ, ಸಹಾಯ ಮಾಡಲು ನಾನು ಸಿದ್ಧನಿದ್ದೇನೆ. ಈ ಬಗ್ಗೆ ಪಾಕಿಸ್ತಾನಂದೊಂದಿಗೆ ಮಾತುಕತೆ ನಡೆಸಿದ್ದೇನೆ" ಎಂದು ಟ್ರಂಪ್ ಹೇಳಿದ್ದಾರೆ.
 
Trending News