ಇಂದು ಹಳೇ ಮೈಸೂರಿನ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ.ಪರಿವಾರವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದ ಪಕ್ಷಕ್ಕೆ ಇವರೆಲ್ಲ ಬಂದಿದ್ದಾರೆ.ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.ಐದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ನಿರಾಕರಿಸಿದ್ರು ಜನ , ಅನೈತಿಕ ಸಂಬಂಧದಿಂದ ಸರ್ಕಾರ ರಚಿಸಿದ್ರು ಕಾಂಗ್ರೆಸ್-ಜೆಡಿಎಸ್.ಈ ಅನೈತಿಕ ಸರ್ಕಾರ ಜನರಿಗೆ ಇಷ್ಟ ಆಗಲಿಲ್ಲ,ಮೊದಲ ಬಾರಿಗೆ ಆಡಳಿತ ಪಕ್ಷಗಳ 17 ಜನ ವಿರೋಧ ಪಕ್ಷ ಸೇರಿ ವಿರೋಧ ಪಕ್ಷವನ್ನು ಅಧಿಕಾರಕ್ಕೆ ತಂದ್ರು.ಕಾಂಗ್ರೆಸ್ನವರ ಬಸ್ ಹೊರಟಿದೆ, ಹೋಗ್ತಾಹೋಗ್ತಾ ಅದರ ಬ್ರೇಕ್ ಫೇಲ್ ಆಗುತ್ತೆ.
ತೆರಿಗೆಯನ್ನು ವಂಚನೆ ಮಾಡಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಒಟ್ಟು ನಾಲ್ಕು ಕೇಸ್ ಗಳನ್ನು ದಾಖಲಿಸಿತ್ತು. ಈಗ ಶನಿವಾರದಂದು ಈ ಪ್ರಕರಣದ ವಿಚಾರಣೆಗಾಗಿ ಆರ್ಥಿಕ ಅಪರಾಧಗಳ ಕೋರ್ಟ್ಗೆ ಹಾಜರಾಗಿದ್ದ ಅವರಿಗೆ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ.
ಅಕ್ರಮ ಹಣ ಪತ್ತೆಯ ವಿಚಾರವಾಗಿ ಈಗ ಜಾರಿ ನಿರ್ದೆಶನಾಲಯದಿಂದ ಬಂಧನದ ಭೀತಿ ಎದುರಿಸುತ್ತಿರುವ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮಗೆ ಯಾವುದೇ ಭಯವಿಲ್ಲ ನಾನೇನು ಕ್ರಿಮಿನಲ್ ಅಲ್ಲ ಎಂದು ತಿಳಿಸಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಐಟಿ ರೇಡ್ ಇನ್ನೂ ತಣ್ಣಗಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬೆಳ್ಳಿಗ್ಗೆಯೇ ಡಿಕೆಶಿ ಆಪ್ತ ವಿಜಯ್ ಮುಳಗುಂದ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ರೇಡ್ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.