ಪವರ್ ಮಿನಿಸ್ಟರ್ಗೆ ಐಟಿ ಶಾಕ್

ಇಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಕುಟುಂಬಕ್ಕೆ ನೋಟೀಸ್.

Last Updated : Nov 6, 2017, 10:10 AM IST
ಪವರ್ ಮಿನಿಸ್ಟರ್ಗೆ ಐಟಿ ಶಾಕ್  title=

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ಡಿಕೆಶಿ ಕುಟುಂಬಕ್ಕೆ ನೋಟೀಸ್ ನೀಡಿದೆ.

ಆದಾಯಕ್ಕು ಮೀರಿ ಆಸ್ತಿ-ಪಾಸ್ತಿ ಪತ್ತೆಯಾದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಆದಾಯ ಇಲಾಖೆ ಡಿಕೆಶಿ ಕುಟುಂಬಕ್ಕೆ ನೋಟೀಸ್ ನೀಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಐಟಿ ಅಧಿಕಾರಿಗಳ ಮುಂದೆ ಪವರ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ವಿಚಾರಣೆಗೆ ಹಾಜರಾಗಲಿದ್ದು, ವಿಚಾರಣೆಗೆ ಬರುವ ವೇಳೆ ಲೆಕ್ಕ ಪರಿಶೋಧಕರನ್ನ ಕರೆತರದಂತೆ ಡಿಕೆಶಿಗೆ ಐಟಿ ಇಲಾಖೆ ಸೂಚನೆ ನೀಡಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ  ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.

ಡಿಕೆಶಿ ಪತ್ನಿ, ಸಹೋದರ ಡಿ.ಕೆ ಸುರೇಶ್, ತಾಯಿ ಗೌರಮ್ಮ ಮತ್ತು ಸಹೋದರಿ ಪದ್ಮಾ ಸಹ ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Trending News