ಡಿಕೆಶಿ ಆಪ್ತನ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ರೇಡ್

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಐಟಿ ರೇಡ್ ಇನ್ನೂ ತಣ್ಣಗಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬೆಳ್ಳಿಗ್ಗೆಯೇ ಡಿಕೆಶಿ ಆಪ್ತ ವಿಜಯ್ ಮುಳಗುಂದ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ರೇಡ್ ನಡೆದಿದೆ. 

Last Updated : Aug 30, 2017, 10:14 AM IST
ಡಿಕೆಶಿ ಆಪ್ತನ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ರೇಡ್ title=

ಬೆಂಗಳೂರು : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಐಟಿ ರೇಡ್ ಇನ್ನೂ ತಣ್ಣಗಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬೆಳ್ಳಿಗ್ಗೆಯೇ ಡಿಕೆಶಿ ಆಪ್ತ ವಿಜಯ್ ಮುಳಗುಂದ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ರೇಡ್ ನಡೆದಿದೆ. 

ಬೆಂಗಳೂರುನ ಸುಬ್ರಹ್ಮಣ್ಯ ನಗರದ ಬಳಿ ಇರುವ ವಿಜಯ್ ಮುಳಗುಂದ್ ನಿವಾಸದ ಇದೀಗ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದೆ. ಮಹಾರಾಷ್ಟ್ರದ ಮಾಜಿ ಸಿ.ಎಂ.ದಿ.ವಿಲಾಶ್ ರಾವ್ ದೇಶಮುಖ್ ಕುಟುಂಬಕ್ಕೆ ಮುಳಗುಂದ್ ಆಪ್ತ ವ್ಯಕ್ತಿ. 

ವಿಲಾಶ್ ರಾವ್ ಸರ್ಕಾರ ಅಸ್ಥಿರವಾಗಿದ್ದಾಗ ಮಹಾರಾಷ್ಟ್ರದ ಶಾಸಕರನ್ನು ಕರ್ನಾಟಕಕ್ಕೆ ರೆಸಾರ್ಟ್ ವಾಸ್ತವ್ಯಕ್ಕೆ ಕಳುಹಿಸಿ ಕೊಡಲಾಗಿತ್ತು. ಆ ಸಂದರ್ಭದಲ್ಲೂ ಡಿಕೆಶಿ ರೆಸಾರ್ಟ್ ವಾಸ್ತವ್ಯದ ಉಸ್ತುವಾರಿ ವಹಿಸಿದ್ದರು. ಮಹಾರಾಷ್ಟ್ರ ಶಾಸಕರು, ಡಿಕೆಶಿ ಮತ್ತು ವಿಲಾಶ್ ರಾವ್ ದೇಶಮುಖ್  ನಡುವೆ ಮುಳಗುಂದ್ ಕೊಂಡಿಯಾಗಿದ್ದರು.

ಗುಜರಾತ್ ಶಾಸಕರ ರೆಸಾರ್ಟ್ ವಾಸ್ತವ್ಯದ ಸಂದರ್ಭದಲ್ಲೂ ವಿಜಯ್ ಮುಳಗುಂದ್ ಡಿ.ಕೆ.ಶಿವಕುಮಾರ್ ಅವರ ಜೊತೆಯೇ ಇದ್ದರು. 

Trending News