Chattisgarh: ಛತ್ತೀಸ್ಗಢದ ಕಾಂಗ್ರೆಸ್ ಶಾಸಕಿ ಅನಿತಾ ಶರ್ಮಾ ಅವರು 'ಹಿಂದೂ ರಾಷ್ಟ್ರ' ರಚಿಸಲು ಜನರು ಒಂದಾಗಬೇಕು ಎಂದು ಶುಕ್ರವಾರ ಕರೆ ನೀಡಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಒತ್ತು ನೀಡಿದ ಅವರು, ಇದಕ್ಕಾಗಿ ಎಲ್ಲಾ ಹಿಂದೂಗಳು ಮುಂದೆ ಬರುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
Naxal Attack: ಛತ್ತೀಸ್ಗಡದ ದಂತೆವಾಡಾ ಜಿಲ್ಲೆಯಲ್ಲಿ ನಕ್ಸಲರು ಈ ಬಾರಿ ಡಿಆರ್ಜಿ ಪೊಲೀಸರನ್ನು ಗುರಿಯಾಗಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಛತ್ತೀಸ್ಗಡದ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿ ಅಗತ್ಯವಾಗಿರುವ ಎಲ್ಲಾ ರೀತಿಯ ನೆರವು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಛತ್ತೀಸ್ಗಢದ ರಾಯ್ಪುರ ಜಿಲ್ಲೆಯ ವಾಹನ ವರ್ಕ್ಶಾಪ್ನಲ್ಲಿ ಜೆಸಿಬಿಗೆ ಗಾಳಿ ತುಂಬುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಲ್ಲಿದ್ದ ಇಬ್ಬರು ನೌಕರರು ಸಾವನ್ನಪ್ಪಿದ್ದಾರೆ. ಮೃತ ನೌಕರರನ್ನು ರಾಜಪಾಲ್ ಮತ್ತು ಪ್ರಂಜನ್ ಎಂದು ಗುರುತಿಸಲಾಗಿದೆ.
ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಟೈರ್ ಬಳಿಯಿದ್ದ ಇಬ್ಬರೂ ಕೆಲಸಗಾರರು ಗಾಳಿಯಲ್ಲಿ ಹಾರಿದರು. ಇದರೊಂದಿಗೆ ಅವರ ದೇಹದ ಕೆಲವು ತುಂಡುಗಳೂ ಅಲ್ಲಲ್ಲಿ ಬಿದ್ದಿದ್ದವು. ರಾಯ್ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Narayanpur IED Blast: ಛತ್ತಿಸ್ಗಡ್ ದ ನಾರಾಯಣಪುರ್ ಜಿಲ್ಲೆಯಲ್ಲಿ ಮಾವೋವಾದಿಗಳು IED ಸ್ಫೋಟಿಸಿದ್ದಾರೆ. ಈ ಸ್ಫೋಟದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (DRG)ನ ಐವರು ಯೋಧರು ಹುತಾತ್ಮರಾಗಿದ್ದಾರೆ. ಈ ಸ್ಫೋಟದಲ್ಲಿ 12 ಯೋಧರು ಗಾಯಗೊಂಡಿದ್ದಾರೆ.
ಮುಂಬರುವ ಛತ್ತೀಸ್ ಘಡ್ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತಿ ನಾಗರಿಕನ ವೋಟ್ ಗಳನ್ನು ಮಹತ್ವ ಎನ್ನುವದನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಈ ಹಿನ್ನಡೆಯಲ್ಲಿ ಅದು ಮತದಾರರ ಸಂಖ್ಯೆ ಒಂದೇ ಅಂಕಿಯಲ್ಲಿದ್ದರೂ ಸಹಿತ ಅವರಿಗೆ ಮತದಾನ ಮಾಡುವ ಅವಕಾಶವನ್ನು ಒದಗಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.