ಛತ್ತೀಸ್ ಗಡ್: ಎನ್ಕೌಂಟರ್ ನಲ್ಲಿ ಏಳು ನಕ್ಸಲರ ಸಾವು

ಛತ್ತೀಸ್ ಗಡ್ ದ ರಾಜನಂದಗಾಂವ್‌ನ ಸೀತಗೋಟ ಕಾಡು ಪ್ರದೇಶದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆಯೊಂದಿಗಿನ  ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ನಕ್ಸಲರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

Last Updated : Aug 3, 2019, 12:41 PM IST
ಛತ್ತೀಸ್ ಗಡ್: ಎನ್ಕೌಂಟರ್ ನಲ್ಲಿ ಏಳು ನಕ್ಸಲರ ಸಾವು    title=
file photo

ನವದೆಹಲಿ: ಛತ್ತೀಸ್ ಗಡ್ ದ ರಾಜನಂದಗಾಂವ್‌ನ ಸೀತಗೋಟ ಕಾಡು ಪ್ರದೇಶದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆಯೊಂದಿಗಿನ  ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ನಕ್ಸಲರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಭದ್ರತಾ ಸಿಬ್ಬಂದಿಯು ಎಕೆ 47 ರೈಫಲ್ಸ್, 303 ರೈಫಲ್, ಕಾರ್ಬೈನ್ ಮತ್ತು ಸೇರಿ ಹಲವಾರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಗ್ನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎನ್ಕೌಂಟರ್ ನಡೆದಿದೆ ಎಂದು ಛತ್ತೀಸ್‌ಗಡ್ ಪೊಲೀಸ್ ಮಹಾನಿರ್ದೇಶಕ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದರೂ ಸಹಿತ ಎನ್‌ಕೌಂಟರ್ ದಾಳಿ ಹಾಗೆ ಮುಂದುವರೆದಿತ್ತು ಎನ್ನಲಾಗಿದೆ. ಎನ್ಕೌಂಟರ್ ದಾಳಿ ಪ್ರಾರಂಭವಾದಾಗ ಈ ಪ್ರದೇಶದಲ್ಲಿ 40 ರಿಂದ 50 ನಕ್ಸಲರು ಇದ್ದರು ಎಂದು ಶಂಕಿಸಲಾಗಿದೆ. ನಕ್ಸಲರ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Trending News