ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗದ ಕಾರಣ ತೆಲುಗು ದೇಶಂ ಪಕ್ಷ ಕೇಂದ್ರ ಸರ್ಕಾರದ ಮೈತ್ರಿಯಿಂದ ಹೊರಬಂದಿದೆ. ಈಗ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಂಡಿಸಲು ನಿರ್ಧರಿಸಿದೆ.
ಬಜೆಟ್ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡದಿರುವ ಬಗ್ಗೆ ಮೂಡಿದ್ದ ಅಸಮಧಾನ ಉಲ್ಬಣಗೊಂಡಿದೆ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅತಿ ದೊಡ್ಡ ಮಿತ್ರಪಕ್ಷವಾಗಿದ್ದ ಟಿಡಿಪಿ ಜೊತೆಗಿನ ಸಂಬಂಧವನ್ನು ಸಡಿಲಗೊಳಿಸುತ್ತಿದೆ.
ಪೋಲಾವರಂ ಪ್ರಾಜೆಕ್ಟ್ ವಿಷಯದ ಸಮಸ್ಯೆ ಕುರಿತಂತೆ ಇಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.