ಮೋದಿ ಸರ್ಕಾರಕ್ಕೆ ಗುಡ್ ಬೈ ಹೇಳಿದ ಟಿಡಿಪಿ, ದಕ್ಷಿಣ ಭಾರತವೀಗ ಬಿಜೆಪಿ ಮುಕ್ತ!

    

Last Updated : Mar 8, 2018, 01:56 PM IST
ಮೋದಿ ಸರ್ಕಾರಕ್ಕೆ ಗುಡ್ ಬೈ ಹೇಳಿದ ಟಿಡಿಪಿ, ದಕ್ಷಿಣ ಭಾರತವೀಗ ಬಿಜೆಪಿ ಮುಕ್ತ!  title=

ನವದೆಹಲಿ: ಆಂದ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಸ್ಥಾನಮಾನ ನಿಡುವ ನಿಟ್ಟಿನಲ್ಲಿ ವಿಫಲರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆ ಖಂಡಿಸಿ ಚಂದ್ರಬಾಬು ನಾಯ್ಡುರವರ ತೆಲುಗು ದೇಶಂ ಪಕ್ಷ ಇಂದು ಅಧಿಕೃತವಾಗಿ ಮೋದಿ ಸರ್ಕಾರದಿಂದ ಹೊರಬಂದಿದೆ. 

ಆ ಮೂಲಕ ಟಿಡಿಪಿ ಇಬ್ಬರು ಕೇಂದ್ರ ಸಚಿವರಾದ ಪಿ ಅಶೋಕ ಗಜಪತಿರಾಜು ಮತ್ತು ಸತ್ಯನಾರಾಯಣರಾವ್ ಚೌಧರಿ ಯವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಬಿಜೆಪಿ ನಡೆಗೆ ಅಸಮಾಧಾನಗೊಂಡಿರುವ ಚಂದ್ರಬಾಬು ನಾಯ್ಡು ಈ ಹಿಂದೆ 29 ಬಾರಿ ದೆಹಲಿ ತೆರಳಿ  ತಮ್ಮ ಬೇಡಿಕೆಗಳನ್ನು ಇಡೆರಿಸುವಂತೆ ಬೇಡಿಕೊಂಡಿದ್ದರೂ ತಮಗೆ ಯಾವುದೇ ನ್ಯಾಯ ಸಿಕ್ಕಿರಲಿಲ್ಲ ಆದ್ದರಿಂದ ಈಗ ಸರ್ಕಾರದ ಭಾಗವಾಗಿರುವದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಇನ್ನೊಂದೆಡೆಗೆ ಈ ಬೆಳವಣಿಗೆ ಪ್ರತಿಕ್ರಯಿಸಿರುವ  ತೆಲಂಗಾಣದ ಟಿ.ಆರ್.ಎಸ್ ಪಕ್ಷದ ನಾಯಕ  ಕೆ.ಟಿ.ರಾಮರಾವ್  ದೇಶದಲ್ಲಿ ತೃತೀಯ ರಂಗದ ಅವಶ್ಯಕತೆ ಇದೆ ಎಂದು ಪ್ರತಿಕ್ರಯಿಸಿದ್ದಾರೆ.

Trending News