ಎಸ್‌ಬಿಐ ಗ್ರಾಹಕರಿಗೆ ಕಹಿ ಸುದ್ದಿ! ಉಳಿತಾಯ ಖಾತೆ ಮೇಲಿನ ಬಡ್ಡಿದರ ಕಡಿತ

ಒಂದು ಲಕ್ಷ ರೂ.ವರೆಗಿನ ಎಸ್‌ಬಿಐನ ಉಳಿತಾಯ ಠೇವಣಿಗಳ ಬಡ್ಡಿದರ ಪರಿಷ್ಕರಿಸುವುದಾಗಿ ಹೇಳಿರುವ ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ, ಶೇ.3.50 ಇದ್ದ ಬಡ್ಡಿದರವನ್ನು ಶೇ.3.25ಕ್ಕೆ ಇಳಿಕೆ ಮಾಡಿದೆ. 

Last Updated : Oct 30, 2019, 01:44 PM IST
ಎಸ್‌ಬಿಐ ಗ್ರಾಹಕರಿಗೆ ಕಹಿ ಸುದ್ದಿ! ಉಳಿತಾಯ ಖಾತೆ ಮೇಲಿನ ಬಡ್ಡಿದರ ಕಡಿತ title=

ನವದೆಹಲಿ: ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದು, ತನ್ನ ಎಲ್ಲಾ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಮತ್ತಷ್ಟು ಕಡಿತಗೊಳಿಸಲಿದೆ.

ಒಂದು ಲಕ್ಷ ರೂ.ವರೆಗಿನ ಎಸ್‌ಬಿಐನ ಉಳಿತಾಯ ಠೇವಣಿಗಳ ಬಡ್ಡಿದರ ಪರಿಷ್ಕರಿಸುವುದಾಗಿ ಹೇಳಿರುವ ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ, ಶೇ.3.50 ಇದ್ದ ಬಡ್ಡಿದರವನ್ನು ಶೇ.3.25ಕ್ಕೆ ಇಳಿಕೆ ಮಾಡಿದೆ. ಈ ಪರಿಷ್ಕೃತ ದರ ನವೆಂಬರ್ 1 ರಿಂದ ಜಾರಿಯಾಗಲಿದೆ ಎಂದು ತಿಳಿಸಿದೆ. 

ಬ್ಯಾಂಕ್‌ಗೆ ಬರುವ ಹಣದ ಪ್ರಮಾಣ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಇಳಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಅಲ್ಲದೆ, ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 10 ಬಿಪಿಎಸ್ ಕಡಿಮೆಯಾಗಲಿದ್ದು, ಬೃಹತ್ ಠೇವಣಿಗಳ ಮೇಲಿನ ಬಡ್ಡಿದರ 30 ಬಿಪಿಎಸ್' ನಷ್ಟು ಕಡಿತವಾಗಲಿದೆ ಎಂದು ಎಸ್ಬಿಐ ತಿಳಿಸಿದೆ.

Trending News