ರಾಮ್ ಮಂದಿರವು ರಾಜಕೀಯ ವಿಷಯವಲ್ಲ, ಬದಲಿಗೆ ಇದು ಇಡೀ ಹಿಂದೂ ಸಮಾಜದ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಬುಧವಾರ ಹೇಳಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಬೊಂಧು ಪ್ರಕಾಶ್ ಪಲ್ ಎಂದು ಗುರುತಿಸಲಾಗಿದ್ದು, ಆತ ಆರ್ಎಸ್ಎಸ್ ಕಾರ್ಯಕರ್ತ ಎನ್ನಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಆರ್ಎಸ್ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.
ಅಕ್ಟೋಬರ್ 8 ರಂದು ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿರುವ ಈ ವರ್ಷದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಐಟಿ ಕಂಪನಿ ಎಚ್ಸಿಎಲ್ ಸಂಸ್ಥಾಪಕ-ಅಧ್ಯಕ್ಷ ಶಿವ್ ನಾಡರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಆರ್ಎಸ್ಎಸ್ ನಾಗ್ಪುರ ‘ಮಹಾನಗರ ಸಂಚಲಕ್’ ರಾಜೇಶ್ ಲೋಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಿಜೆಪಿ-ಆರ್ಎಸ್ಎಸ್ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ವಿರೋಧಿಸುತ್ತವೆ. ಯಾವುದೇ ಕಾರಣಕ್ಕೂ ದಲಿತರ ಪ್ರಗತಿಯನ್ನು ಬಯಸುವುದಿಲ್ಲ. ಮೀಸಲಾತಿಯನ್ನು ಕೊನೆಗೊಳಿಸಲು ಅವರು ಯೋಜಿತ ಪಿತೂರಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಹೇಳಿದ್ದಾರೆ.
ಮತ್ತೊಂದು ಬಾರಿ ದೇಶದಲ್ಲಿ ಸ್ಥಿರ ಸರ್ಕಾರ ದೊರೆತಿದೆ. ಇದು ಕೋಟ್ಯಂತರ ಭಾರತೀಯರ ಅದೃಷ್ಟವಾಗಿದ್ದು, ರಾಷ್ಟ್ರೀಯ ಶಕ್ತಿಗೆ ಸಿಕ್ಕ ದಿಗ್ವಿಜಯ ಎಂದ ಅವರು, ಪ್ರಜಾಪ್ರಭುತ್ವದ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದು ಆರ್ಎಸ್ಎಸ್ ನಾಯಕ ಭಯ್ಯಾಜಿ ಜೋಷಿ ಹೇಳಿದ್ದಾರೆ.
ಕಲಿಯುಗದ ರಾಮಾಯಣದಲ್ಲಿ ಮಂಥರೆಯಾಗಿರುವ ಆರ್ಎಸ್ಎಸ್ ಮತ್ತು ಕೈಕೇಯಿಯಂತಿರುವ ಬಿಜೆಪಿ ಜೋಡಿ ಕಳೆದ 30 ವರ್ಷಗಳಿಂದ ರಾಮನನ್ನು ಗಡಿಪಾರು ಮಾಡಿವೆ ಎಂದು ಸಿಂಘ್ವಿ ವಾಗ್ದಾಳಿ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.