ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ

ಕೊಲೆಯಾದ ವ್ಯಕ್ತಿಯನ್ನು ಬೊಂಧು ಪ್ರಕಾಶ್ ಪಲ್ ಎಂದು ಗುರುತಿಸಲಾಗಿದ್ದು, ಆತ ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.

Last Updated : Oct 10, 2019, 10:59 AM IST
ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ title=

ಕೋಲ್ಕತ್ತಾ: ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಬೊಂಧು ಪ್ರಕಾಶ್ ಪಲ್ ಎಂದು ಗುರುತಿಸಲಾಗಿದ್ದು, ಆತ ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು. ಪ್ರಕಾಶ್ ಪಲ್ ಮತ್ತು ಗರ್ಭಿಣಿ ಪತ್ನಿ ಬ್ಯೂಟಿ ಪಲ್, ಪುತ್ರ ಆನಂದ್ ಮೂವರನ್ನೂ ದುಷ್ಕರ್ಮಿಗಳ ಹತ್ಯೆಗೈದಿದ್ದಾರೆ.

ಮುರ್ಷಿದಾಬಾದ್ ನಗರದ ಜಿಯಾಗಂಜ್ ಬಡಾವಣೆಯಲ್ಲಿ ಪ್ರಕಾಶ್ ಪಲ್ ಕುಟುಂಬ ವಾಸವಾಗಿತ್ತು. ಬುಧವಾರ ರಾತ್ರಿ ಮನೆಗೆ ನುಗ್ಗಿದ ಕೆಲ ದುಷ್ಕರ್ಮಿಗಳು ಮೂವರನ್ನೂ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಘಟನಾ ಸ್ಥಳದಲ್ಲಿ ಪೊಲೀಸರು ಕೊಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
 

Trending News