ಕೊಲಂಬೊ: ಕೊಲಂಬೋದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಮೊದಲ ವಿಕೆಟ್ ಬೇಗನೇ ಕಳೆದುಕೊಂಡಿತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ಗೆ ಶ್ರೀಲಂಕಾ ತಂಡ ನಡುಗಿತು. ಬೃಹತ್ ಮೊತ್ತವನ್ನು ಕಲೆ ಹಾಕುವ ಮೂಲಕ ಎದುರಾಳಿ ತಂಡವನ್ನು ಭಾರತ ನಾಲ್ಕನೇ ದಿನದ ಪಂದ್ಯದಲ್ಲೂ ಸುಲಭ ಜಯ ಸಾಧಿಸಿದೆ.
ರೋಹಿತ್ ಮತ್ತು ವಿರಾಟ್ ಅದ್ಭುತ ಆರಂಭಿಕ ಆಟ ಪ್ರಾರಂಭಿಸಿದರು. ಮಹೇಂದ್ರ ಸಿಂಗ್ ಧೋನಿ ಮತ್ತು ಮನೀಶ್ ಪಾಂಡೆಯವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ 375 ರನ್ ಕಲೆ ಹಾಕಿತು. ಇದರಿಂದಾಗಿ ಲಂಕಾ ಬ್ಯಾಟ್ಸ್ಮನ್ಗಳು ಪರದಾಡುವಂತೆ ಮಾಡಿದರು.
ಶ್ರೀಲಂಕಾದ ಎಂಜೆಲೋ ಮ್ಯಾಥ್ಯೂಸ್ ಏಕಾಂಗಿಯಾಗಿ ಹೋರಾಡಿದರಾದರೂ 42.2 ಓವರ್ ಗಳಲ್ಲಿ ಸೋಲು ಒಪ್ಪಿಕೊಂಡಿತು.
ಧೋನಿಗೆ 300ನೇ ಏಕದಿನ ಪಂದ್ಯ:
ಈ ಪಂದ್ಯವು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕಾಗಿ ಆಡಿದ 300ನೇ ಏಕದಿನ ಪಂದ್ಯ. ಪ್ರಸ್ತುತ ತಂಡದ ನಾಯಕ ವಿರಾಟ್ ಕೊಹ್ಲಿ ಧೋನಿಗೆ ವಿಶೇಷವಾದ ಬೆಳ್ಳಿಯ ಬ್ಯಾಟ್ ಕಾಣಿಕೆ ನೀಡಿ ಸಂಭ್ರಮ ಆಚರಿಸಿದರು. ಇದೇ ಸಂದರ್ಭದಲ್ಲಿ ನೀವು ಯಾವಾಗಲೂ ನಮ್ಮ ನಾಯಕರಾಗಿರುತ್ತೀರಿ ಎಂದು ಕೊಹ್ಲಿ, ಧೋನಿಗೆ ಹೇಳಿದರು.
'You will always remain our Captain,' says @imVkohli on @msdhoni's 300th ODI celebration #Dhoni300 https://t.co/Le0bd1S92R pic.twitter.com/EXia5QwhX3
— BCCI (@BCCI) August 31, 2017