Naga Sadhu Viral Video: ಸದ್ಯ ಮಹಾಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾ ಮೇಳಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಅಘೋರಿ ಬಾಬಾಗಳು ಆಗಮಿಸಿದ್ದಾರೆ. ಇಂದಿನಿಂದ ಪ್ರಾರಂಭವಾಗಿ ಫೆಬ್ರವರಿ 26ರವರೆಗೆ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಅಘೋರಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಪ್ರತಿನಿತ್ಯ ʻಈʼ ಹಣ್ಣಿನ ಸೇವನೆಯಿಂದ ಮಾರಣಾಂತಿಕ ಕ್ಯಾನ್ಸರ್ ರೋಗ ಬರದಂತೆ ತಪ್ಪಿಸಬಹದು..!
ಇನ್ನು ಇದೇ ಸಂದರ್ಭದಲ್ಲಿ ನಾಗಾ ಸಾಧುವಿನ ವಿಡಿಯೋವೊಂದು ವೈರಲ್ ಆಗಿದ್ದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಆದರೆ ಈ ವಿಡಿಯೋ ಮಹಾಕುಂಭಮೇಳಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಈ ಹಿಂದೆ ನಡೆದಿರುವ ಅರ್ಧಕುಂಭಮೇಳದ್ದು ಎನ್ನಲಾಗಿದೆ.
ಮಹಿಳಾ ಪತ್ರಕರ್ತೆಯೊಬ್ಬಳು ನಾಗಾಸಾಧು ಬಳಿ ಪ್ರಶ್ನೆ ಕೇಳುತ್ತಿದ್ದಂತೆ ಆಕೆ ಮುಂದೆಯೇ ತನ್ನ ಬಟ್ಟೆಗಳನ್ನು ಬಿಚ್ಚಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.
ಕುಂಭಮೇಳಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಈ ನಾಗ ಸಾಧುಗಳು ಆ ಬಳಿಕ ಅದೃಶ್ಯರಾಗುತ್ತಾರೆ. ಇವರು ಎಲ್ಲಿ ನೆಲೆಸುತ್ತಾರೆ ಎಂಬುದೇ ಇದುವರೆಗೆ ನಿಖರವಾಗಿ ಯಾರಿಗೂ ತಿಳಿದಿಲ್ಲ. ಹೆಚ್ಚಾಗಿ ಹಿಮಾಲಯದ ಗುಹೆಗಳಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಪಷ್ಟ ಮಾಹಿತಿ ಇಲ್ಲ. ಎಂತಹದ್ದೇ ಮೈ ಕೊರೆಯುವ ಚಳಿಯಿದ್ದರೂ, ಸುಡು ಬಿಸಿಲಿದ್ದರೂ, ಮೈ ಮೇಲೆ ಒಂದು ತುಂಡು ಬಟ್ಟೆಯನ್ನೂ ಧರಿಸರೆ ಅಲೆದಾಡುವ ಇವರು ಪರಶಿವನ ಮಹಾನ್ ಭಕ್ತರು. ಅನೇಕರು ಅಘೋರಿಗಳನ್ನು ಸಾಕ್ಷಾತ್ ಶಿವನ ಸ್ವರೂಪ ಎಂದೇ ಹೇಳುತ್ತಾರೆ.
ಸ್ಮಶಾನವಾನಿ ಶಿವನಂತೆ ಜೀವನ ನಡೆಸುವ ಅಘೋರಿಗಳು ವಿಚಿತ್ರ ಜೀವನಶೈಲಿಯನ್ನು ಅನುಸರಿಸುತ್ತಾರೆ. ಹೆಚ್ಚಾಗಿ ಬೆತ್ತಲೆಯಾಗಿರುವ ಇವರ ತಲೆಯ ಮೇಲೆ ಉದ್ದವಾದ ಜಟೆ ಇರುತ್ತದೆ. ಮೃತ ದೇಹಗಳ ದಹನದ ಚಿತಾಭಸ್ಮದಿಂದ ದೇಹವನ್ನು ಮುಚ್ಚಿಕೊಳ್ಳುತ್ತಾರೆ. ಇವರಲ್ಲಿ ಹೆಚ್ಚಿನವರು ಶಿವನ ಅನುಯಾಯಿಗಳು. ಶಿವನನ್ನು ಪ್ರಾರ್ಥಿಸುವ ಮತ್ತು ಧ್ಯಾನಿಸುವ ವಿಶಿಷ್ಟ ಶೈಲಿಗಳನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.