ಬಿಗ್‌ ಬಾಸ್‌ನಿಂದ ಹೊರ ಬಂದ ಚೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು?

Chaitra Kundapura age: ಚೈತ್ರಾ ಕುಂದಾಪುರ... ಬಿಗ್‌ ಬಾಸ್‌ ಮನೆಯಲ್ಲಿ ಮಾತಿನಿಂದಲೇ ಛಾಪು ಮೂಡಿಸಿದ್ದ ಈ ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಹಿಂದೂ ಫೈರ್‌ ಬ್ರಾಂಡ್‌ ಎಂದು ಖ್ಯಾತಿ ಗಳಿಸಿದ್ದ ಚೈತ್ರಾ ಕುಂದಾಪುರ ಅವರ ನಿಜವಾದ ವಯಸ್ಸು, ಹುಟ್ಟೂರು, ಶಿಕ್ಷಣ ಮತ್ತು ಆಕೆ ಕಾರ್ಯಕ್ರಮಗಳಲ್ಲಿ ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಚೈತ್ರಾ ಕುಂದಾಪುರ... ಬಿಗ್‌ ಬಾಸ್‌ ಮನೆಯಲ್ಲಿ ಮಾತಿನಿಂದಲೇ ಛಾಪು ಮೂಡಿಸಿದ್ದ ಈ ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಹಿಂದೂ ಫೈರ್‌ ಬ್ರಾಂಡ್‌ ಎಂದು ಖ್ಯಾತಿ ಗಳಿಸಿದ್ದ ಚೈತ್ರಾ ಕುಂದಾಪುರ ಅವರ ನಿಜವಾದ ವಯಸ್ಸು, ಹುಟ್ಟೂರು, ಶಿಕ್ಷಣ ಮತ್ತು ಆಕೆ ಕಾರ್ಯಕ್ರಮಗಳಲ್ಲಿ ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.

2 /6

ಚೈತ್ರಾ ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ. ಇಲ್ಲಿನ ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.     

3 /6

ಶಿಕ್ಷಣ ಪೂರ್ತಿಗೊಳಿಸಿದ ನಂತರ ಉದ್ಯೋಗಕ್ಕೆ ಸೇರಿಕೊಂಡ ಚೈತ್ರಾ ಮೊದಲಿಗೆ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ, ಮುಕ್ತ ನ್ಯೂಸ್, ಉದಯವಾಣಿ ಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು ಚೈತ್ರಾ.     

4 /6

ಇವೆಲ್ಲದರ ಜೊತೆಗೆ, ಒಂದಷ್ಟು ಕಾಲ ಉಡುಪಿಯ ಅಜ್ಜರಕಾಡಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದ ಚೈತ್ರಾ ಕುಂದಾಪುರ, ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಗಮನ ಸೆಳೆದಿದ್ದಾರೆ.  

5 /6

ಹಿಂದುತ್ವದ ಬಗ್ಗೆ ಅಪಾರ ಜ್ಞಾನವುಳ್ಳ ಚೈತ್ರಾ ಕುಂದಾಪುರ, ತಮ್ಮ ಭಾಷಣಗಳಿಂದಲೇ ಜನರ ಗಮನ ಸೆಳೆದಿದ್ದರು. ಇನ್ನು ಹೀಗೆ ವೇದಿಕೆ ಹತ್ತಿ ಭಾಷಣ ಮಾಡುವ ಚೈತ್ರಾ ಒಂದು ರುಪಾಯಿಯೂ ಸಂಭಾವನೆ ಪಡೆಯುವುದಿಲ್ಲವಂತೆ.  

6 /6

ಇನ್ನು ಚೈತ್ರಾ ಅವರಿಗೆ ಈಗ 28 ವರ್ಷ ವಯಸ್ಸು ಎನ್ನಲಾಗಿದೆ. ಗೂಗಲ್‌ ನೀಡಿದ ಮಾಹಿತಿ ಅನುಸಾರ ಈಕೆ ವಯಸ್ಸು 28 ಎನ್ನಲಾಗುತ್ತಿದೆ.