ರಾತ್ರೋ ರಾತ್ರಿ ಫೇಮಸ್‌ ಆದ ಈ ಹುಡಗನ ಬಗ್ಗೆ ನಿಮಗೆಷ್ಟು ಗೊತ್ತು..

Robin Minz: ಇಂಡಿಯನ್ ಪ್ರೀಮಿಯರ್ ಲೀಗ್  2024ರ ಹರಾಜು ದಾಖಲೆಗಳನ್ನು ಮುರಿಯಲು ಮತ್ತು ಇತಿಹಾಸವನ್ನು ಮರುಬರೆಯಲು ಸಾಕ್ಷಿಯಾಗಿದೆ. ಇನ್ನು ಹರಾಜಿನಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಇವರನ್ನ 3.6 ಕೋಟಿಗೆ ಖರೀದಿ ಮಾಡಿದೆ. ಅಷ್ಟಕ್ಕು ಯಾರು ಆ ಹುಡುಗ ? ಕೆಲವೇ ನಿಮಿಷಗಳಲ್ಲಿ ಆತ ಫೇಮಸ್‌ ಆಗಿದ್ದೇಗೆ? ಎನ್ನುವ ಮಾಹಿತಿ ಇಲ್ಲಿದೆ..

Written by - Zee Kannada News Desk | Last Updated : Dec 21, 2023, 09:39 AM IST
  • 21 ವರ್ಷದ ಯುವ ಆಟಗಾರ ರಾಬಿನ್ ಮಿಂಜ್ ಐಪಿಎಲ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
  • ಹರಾಜಿನಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಇವರನ್ನ 3.6 ಕೋಟಿಗೆ ಖರೀದಿ ಮಾಡಿದೆ.
  • MS ಧೋನಿಯನ್ನು ತನ್ನ ಆರಾಧ್ಯವೆಂದು ಪರಿಗಣಿಸುವ ಅವರಿಗೆ ಧೋನಿಯೇ ದೊಡ್ಡ ಸ್ಪೂರ್ತಿಯಾಗಿದ್ದಾರೆ.
ರಾತ್ರೋ ರಾತ್ರಿ ಫೇಮಸ್‌ ಆದ ಈ ಹುಡಗನ ಬಗ್ಗೆ ನಿಮಗೆಷ್ಟು ಗೊತ್ತು.. title=

Indian cricket player: ಐಪಿಲ್‌ ಹರಾಜು ನಮ್ಮ ದೇಶವಷ್ಟೆ ಅಲ್ಲದೆ ವಿದೇಶಗಳ ಗಮನ ಕೂಡ ಸೆಳೆದಿತ್ತು. ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ ಎಂದು ಎಲ್ಲರು ಎದುರು ನೋಡುತ್ತಿದ್ದರೆ. ಆ ಒಬ್ಬ ಹುಡುಗನ ಕಡೆಗೆ ದೇಶದ ಗಮನ ನೆಟ್ಟಿತ್ತು. ಗೂಗಲ್‌ನಲ್ಲಿ ರಾಬಿನ್‌ ಮಿಂಜ್‌ನ ಹೆಸರನ್ನು ಹುಡುಕೋಕೆ ಜನರು ಪ್ರಾರಂಭಿಸಿದ್ದರು.

ರಾಬಿನ್‌ ಮಿಂಜ್‌ ಮೂಲತಃ ಜಾರ್ಕಂಡರವರು. ಬುಡಕಟ್ಟು ಜನಾಂಗಕ್ಕೆ ಸೇರಿದ ಇವರು 10 ನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತೀರ್ಣನಾದ ನಂತರ ಮಧ್ಯದಲ್ಲೆ  ತಮ್ಮ  ಅಧ್ಯಯನವನ್ನು ತ್ಯಜಿಸಿದರು. ಇನ್ನು ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಈಗ ಜಾರ್ಖಂಡ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಇದನ್ನೂ ಓದಿ:  “ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ…” ಎಂದು ಬೇಡಿಕೊಂಡ ಅಭಿಮಾನಿಗೆ MI ಮಾಲೀಕ ಅಂಬಾನಿ ಕೊಟ್ಟ ಉತ್ತರವೇನು ಗೊತ್ತಾ?

ಇನ್ನು ನಾವ್‌ ಯಾಕೆ ನಿಮಗೆ ಈ ಹುಡುಗನ ಬಗ್ಗೆ ಹೇಳೋಕೆ ಹೊರಟಿದ್ದೀವಿ ಅಂದ್ರೆ.

21 ವರ್ಷದ  ಯುವ ಆಟಗಾರ ರಾಬಿನ್ ಮಿಂಜ್ ಐಪಿಎಲ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. 21 ವರ್ಷ ವಯಸ್ಸಿನ ಮಿಂಜ್ ಹೆಸರು ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಬಿಡ್ಡಿಂಗ್ ಯುದ್ಧಕ್ಕೆ ಕಾರಣವಾಯಿತು. ಅವರ ಮೂಲ ಬೆಲೆ 20 ಲಕ್ಷದಿಂದ ಪ್ರಾರಂಭವಾಗಿ, ಎರಡು ತಂಡಗಳ ನಡುವಿನ ಜಗಳವು  3.6 ಕೋಟಿಯ ಮೊತ್ತಕ್ಕೆ ಏರಿಕೆಯಾಗಿತ್ತು. 

ಇದನ್ನೂ ಓದಿ: ಹೇಗಿದೆ ಗೊತ್ತಾ ಧೋನಿ CSK ನೂತನ ಪಡೆ..! IPL 2024 ವಾರ್‌ಗೆ MSD ಟೀಂ ರೆಡಿ 

ಎಡಗೈ ವಿಕೆಟ್ ಕೀಪಿಂಗ್ ಬ್ಯಾಟರ್ ಆಗಿರುವ ಅವರು, ಚೆಂಡನ್ನು ಬಲವಾಗಿ ಹೊಡೆಯುತ್ತಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್, ಮಿಂಜ್ ಈ ವರ್ಷದ ಆರಂಭದಲ್ಲಿ ಒಡಿಶಾದಲ್ಲಿ ನಡೆದ ಆಹ್ವಾನಿತ T20 ಪಂದ್ಯಾವಳಿಯಲ್ಲಿ 35 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದ್ದರು. MS ಧೋನಿಯನ್ನು ತನ್ನ ಆರಾಧ್ಯವೆಂದು ಪರಿಗಣಿಸುವ ಅವರಿಗೆ ಧೋನಿಯೇ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಇನ್ನು ಹರಾಜಿನಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಇವರನ್ನ 3.6 ಕೋಟಿಗೆ ಖರೀದಿ ಮಾಡಿದೆ. ರಾತ್ರೋ ರಾತ್ರಿ ಫೇಮಸ್‌ ಆದ ಹುಡುಗ ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News