ಬೆಂಗಳೂರು: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ತಾವೊಬ್ಬ ಶ್ರೇಷ್ಠ ಆರಂಭಿಕ ಆಟಗಾರ ಎನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.
ಆದರೆ ಈಗ ವಿಷಯ ಏನಪ್ಪಾ ಅಂದರೆ, ಡೇವಿಡ್ ವಾರ್ನರ್ ಸ್ಪೋಟಕ ಶತಕ ಗಳಿಸುತ್ತಿದ್ದಂತೆ ಅವರು ಸಂಭ್ರಮಿಸಿದ ರೀತಿ ಮಾತ್ರ ಎಲ್ಲರ ಗಮನ ಸೆಳೆದಿದೆ. ಹೌದು, ಪಾಕ್ ವಿರುದ್ಧ ಸತತ ನಾಲ್ಕನೇ ಏಕದಿನ ಶತಕವನ್ನು ಗಳಿಸಿದ ನಂತರ ಅವರು ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಪುಷ್ಪಾ ಶೈಲಿಯಲ್ಲಿ ಸಂಭ್ರಮವನ್ನು ಆಚರಿಸಿದರು.
David Warner entertained the Chinnaswamy crowd with his fireworks 🎇
He wins the @aramco #POTM for his scintillating 163 ⚡#CWC23 | #AUSvPAK pic.twitter.com/yQubQ4VGZ5
— ICC (@ICC) October 20, 2023
After 100run David warner celebration and excitement showing to public with
Pushpa raj style jhukega nehi #AlluArjun𓃵 #pushpa#Pushpa2TheRule #AlluArjun#devidwarner#PAKvsAUS #TigerNageshwaraRao pic.twitter.com/1Na258iztg— Ratan Mondal (@RatanMo40278303) October 20, 2023
ವಾರ್ನರ್ ಆಗಾಗ್ಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪುಷ್ಪಾ ಚಿತ್ರದ ಹಾಡುಗಳು ಅಥವಾ ಸಂಭಾಷಣೆಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರು ಪುಷ್ಪ ಚಿತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಾಗ ಅವರಿಗೆ ಶುಭ ಹಾರೈಸಿದವರಲ್ಲಿ ವಾರ್ನರ್ ಕೂಡ ಸೇರಿದ್ದರು.
ಇದನ್ನೂ ಓದಿ: ಧೀಡಿರನೇ ಪತಿಯಿಂದ ಬೇರ್ಪಟ್ಟ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ..! ಅಷ್ಟಕ್ಕೂ ಆಗಿದ್ದಾದರೂ ಏನು?
ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಹಲವು ದಾಖಲೆಗಳನ್ನು ಮಾಡಿದೆ. ಈ ಹಿಂದೆ ವಿಶ್ವಕಪ್‌ನಲ್ಲಿ ಎರಡು ತಂಡಗಳ ಆರಂಭಿಕ ಆಟಗಾರರು ಶತಕ ಬಾರಿಸಿದ್ದರು. ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶನ್ 2011ರ ವಿಶ್ವಕಪ್‌ನಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದರು. ಇದಲ್ಲದೆ, 2019 ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಒಟ್ಟಿಗೆ ಶತಕದ ಇನ್ನಿಂಗ್ಸ್‌ಗಳನ್ನು ಆಡಿದ್ದರು. ವಾರ್ನರ್ ಮತ್ತು ಮಾರ್ಷ್ ಅವರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.