ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡೋಕೆ ಕಷ್ಟವಾದ 5 ವಿಶ್ವದಾಖಲೆಗಳು ಯಾವುವು ಗೊತ್ತಾ?

5 ODI World Cup Records That Are Very Hard To Break: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವಾಗದ ಮತ್ತು ಕಷ್ಟಸಾಧ್ಯವಾದ ಟಾಪ್ 5 ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Nov 7, 2023, 10:45 PM IST
    • 8 ಪಂದ್ಯಗಳಲ್ಲಿ ಗೆಲುವು ಕಂಡಿರುವ ಭಾರತ ಸೆಮಿಫೈನಲ್ ಪ್ರವೇಶ
    • ಇತಿಹಾಸದಲ್ಲಿ ಮುರಿಯಲು ಕಷ್ಟಸಾಧ್ಯವಾದ ಟಾಪ್ 5 ದಾಖಲೆಗಳು
    • ಟಾಪ್ 5 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡೋಕೆ ಕಷ್ಟವಾದ 5 ವಿಶ್ವದಾಖಲೆಗಳು ಯಾವುವು ಗೊತ್ತಾ? title=
World Cup Records That Are Very Hard To Break

5 ODI World Cup Records That Are Very Hard To Break: ODI ವಿಶ್ವಕಪ್ 2023 ಇನ್ನೇನು ಕೊನೆಯ ಹಂತದಲ್ಲಿದೆ. ಈಗಾಗಲೇ 8 ಪಂದ್ಯಗಳಲ್ಲಿ ಗೆಲುವು ಕಂಡಿರುವ ಭಾರತ ಸೆಮಿಫೈನಲ್ ಪ್ರವೇಶ ಮಾಡಿದೆ. ಈ ಸಂದರ್ಭದಲ್ಲಿ ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವಾಗದ ಮತ್ತು ಕಷ್ಟಸಾಧ್ಯವಾದ ಟಾಪ್ 5 ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಸಚಿನ್-ವಿರಾಟ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅಪ್ಘನ್ ಆಟಗಾರ!

ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ರನ್:

‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟ. ಮಾಸ್ಟರ್ ಬ್ಲಾಸ್ಟರ್ 45 ಪಂದ್ಯಗಳಲ್ಲಿ 2,278 ರನ್ ಗಳಿಸಿದ್ದಾರೆ.

ಲಸಿತ್ ಮಾಲಿಂಗ ಡಬಲ್ ಹ್ಯಾಟ್ರಿಕ್:

ಶ್ರೀಲಂಕಾದ ಲೆಜೆಂಡರಿ ಬೌಲರ್ ಲಸಿತ್ ಮಾಲಿಂಗ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಬ್ಯಾಟರ್‌’ಗಳನ್ನು ಔಟ್ ಮಾಡಿದ ಏಕೈಕ ಬೌಲರ್. ಈ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯವೆಂದು ತೋರುತ್ತದೆ.

ವಿಶ್ವಕಪ್ ಗೆದ್ದ ಕಿರಿಯ ನಾಯಕ:

1983ರ ಐತಿಹಾಸಿಕ ವಿಶ್ವಕಪ್ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದಾಗ ದಂತಕಥೆ ಕಪಿಲ್ ದೇವ್ ಕೇವಲ 24 ವರ್ಷ ವಯಸ್ಸಿನವರಾಗಿದ್ದರು. ಅವರು ಈಗಲೂ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿದ ಅತ್ಯಂತ ಕಿರಿಯ ನಾಯಕರಾಗಿ ಮುಂದುವರಿದಿದ್ದಾರೆ.

ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಅಜೇಯ ಸರಣಿ:

ಆಸ್ಟ್ರೇಲಿಯಾ 1999-2011ರ ನಡುವೆ 34 ಪಂದ್ಯಗಳಲ್ಲಿ ಅಜೇಯ ಸರಣಿಯನ್ನು ಹೊಂದಿತ್ತು. 32 ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಟೈ ಆಗಿತ್ತು. ಮತ್ತೊಂದು ಪಂದ್ಯವನ್ನು ಕೈಬಿಡಲಾಯಿತು.

ಇದನ್ನೂ ಓದಿ: “ಟೀಂ ಇಂಡಿಯಾ DRSನ್ನು ತನಗೆ ಬೇಕಾದಂತೆ ಬಳಸುತ್ತಿದೆ”- ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ ವೈರಲ್

ಕುಮಾರ ಸಂಗಕ್ಕಾರ ಸತತ ಶತಕಗಳು:

2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌’ನಲ್ಲಿ ಶ್ರೀಲಂಕಾದ ಆಟಗಾರ ಕುಮಾರ ಸಂಗಕ್ಕಾರ ಸತತ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್‌’ನ ಇತಿಹಾಸದಲ್ಲಿ ಕೇವಲ ಇಬ್ಬರು ಬ್ಯಾಟರ್‌’ಗಳು ಸಾಧಿಸಿದ ಅಪರೂಪದ ದಾಖಲೆಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News