ನವದೆಹಲಿ: ಚೀನಾದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಟರ್ಕಿಯ ಆಲಿಯೆ ಡೆಮಿರ್ಬಾಗ್ ಅವರನ್ನು ಸೋಲಿಸಿ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು.
ಸೈನಾ ನೆಹ್ವಾಲ್ ಅವರು ಪಂದ್ಯದ 39 ನಿಮಿಷದಲ್ಲಿ 21-17, 21-18 ಜಯಗಳಿಸಿ ಅವರು ಟರ್ಕಿಶ್ ಎದುರಾಳಿಯಿಂದ ತೀವ್ರ ಸ್ಪರ್ಧೆಯನ್ನು ಎದುರಿಸಿದರು. ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ರಾಚ್ಚಾನೋಕ್ ಇಂಟಾನನ್ನಲ್ಲಿ ಅವರನ್ನು ಎದುರಿಸಿಸಲಿದ್ದಾರೆ.ಇಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ ಎನ್ನಲಾಗುತ್ತಿದೆ.
ಡೆನ್ಮಾರ್ಕ್ನ ಪ್ರಭಾವಶಾಲಿಯಾದ ಮಿಯಾ ಬ್ಲಿಚ್ಫೆಲ್ಟ್ ವಿರುದ್ಧದ ಪಂದ್ಯದಲಿ ರಾಚ್ಸಾಕ್ ಭರ್ಜರಿ ಗೆಲುವನ್ನು ಸಾಧಿಸಿದ್ದರು, ಸುಮಾರು ಒಂದು ಗಂಟೆ 16 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ 16-21, 22-20, 21-10ರಿಂದ ಇಂಡೋನೇಷ್ಯಾದ ಆಟಗಾರ್ತಿ ಗೆಲುವು ಸಾಧಿಸಿದ್ದರು.