ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಆಟಗಾರ ಯಾರು ಗೊತ್ತಾ?

Highest Paid Indian Cricketers: ಭಾರತೀಯ ಕ್ರಿಕೆಟಿಗರು ಕಳೆದ 12 ತಿಂಗಳ ಪ್ರದರ್ಶನದ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Written by - Bhavishya Shetty | Last Updated : Sep 3, 2023, 12:29 PM IST
    • ಭಾರತೀಯ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಕ್ರೇಜ್ ಹೊಂದಿದೆ
    • ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ
    • ಭಾರತೀಯ ಕ್ರಿಕೆಟಿಗರು 12 ತಿಂಗಳ ಪ್ರದರ್ಶನದ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ
ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಆಟಗಾರ ಯಾರು ಗೊತ್ತಾ?  title=
Highest Paid Indian Cricketers

Top 5 Highest Paid Indian Cricketers: ಭಾರತೀಯ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಕ್ರೇಜ್ ಹೊಂದಿದೆ. ಇನ್ನು ಈ ಕ್ರೀಡೆ ಕೇವಲ ಮನರಂಜನೆ ಮಾತ್ರವಲ್ಲ, ಲಾಭದಾಯಕ ವೃತ್ತಿಯಾಗಿಯೂ ಮಾರ್ಪಾಡಾಗಿದೆ. ಇನ್ನು ನಾವಿಂದು ಈ ಲೇಖನದಲ್ಲಿ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ಭಾರತೀಯ ಕ್ರಿಕೆಟಿಗರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್, ಗಿಲ್ ವಿರುದ್ಧ ಕೆಂಡಕಾರಿದ ಟೀಂ ಇಂಡಿಯಾ ಫ್ಯಾನ್ಸ್

ಭಾರತೀಯ ಕ್ರಿಕೆಟಿಗರು ಕಳೆದ 12 ತಿಂಗಳ ಪ್ರದರ್ಶನದ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಮೂಲ ವೇತನ 7 ಕೋಟಿ ರೂ. ಇದೆ. A+ ಒಪ್ಪಂದದಲ್ಲಿರುವ ವಿರಾಟ್, ಭಾರತದ ನಾಯಕರಾಗಿದ್ದ ಸಂದರ್ಭದಲ್ಲಿ ಟೆಸ್ಟ್‌ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಗೆಲುವುಗಳು ಸಾಧಿಸಿದ್ದರು (68 ರಲ್ಲಿ 40).

ಇನ್ನು ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಇವರೂ ಕೂಡ A+ ಒಪ್ಪಂದದಲ್ಲಿರುವ ಆಟಗಾರ, ಇವರು ಒಂದು ಪಂದ್ಯಕ್ಕೆ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನು ಮೂರು ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರನಾಗಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಐದು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್.

ರವೀಂದ್ರ ಜಡೇಜಾ ಮೂಲ ವೇತನ INR 7 ಕೋಟಿ ಇದ್ದು, ಇವರು ಕೂಡ A+ ಒಪ್ಪಂದದಲ್ಲಿರುವ ಆಟಗಾರರಾಗಿದ್ದಾರೆ. ಭಾರತೀಯ ಎಡಗೈ ಸ್ಪಿನ್ನರ್‌’ನಿಂದ ಅತ್ಯಧಿಕ ಟೆಸ್ಟ್ ವಿಕೆಟ್‌’ಗಳನ್ನು ಕಬಳಿಸಿದ್ದಾರೆ (268).

ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮೂಲ ವೇತನ 7 ಕೋಟಿ ರೂ. ಇದೆ. ಇವರು ಕೂಡ A+ ಒಪ್ಪಂದದಲ್ಲಿರುವ ಆಟಗಾರ. T20I ಗಳಲ್ಲಿ ವೇಗವಾಗಿ 50 ವಿಕೆಟ್‌ ಕಬಳಿಸಿದ ಭಾರತೀಯ ಬೌಲರ್ ಬುಮ್ರಾ 11 ತಿಂಗಳ ಬಳಿಕ ಟೀಂ ಇಂಡಿಯಾಗೆ ಇದೀಗ ಮರಳಿದ್ದಾರೆ.

ಇದನ್ನೂ ಓದಿ: “ಧೋನಿ ಅಲ್ಲ, ಈತನೇ ನನ್ನ ವೃತ್ತಿಜೀವನದ ಫೇವರಿಟ್ ಕ್ಯಾಪ್ಟನ್”: ವೇಗಿ ಇಶಾಂತ್ ಶರ್ಮಾ

ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎ ವರ್ಗದ ಒಪ್ಪಂದದಲ್ಲಿರುವ ಆಟಗಾರ. ಇವರ ಮೂಲ ವೇತನ INR 5 ಕೋಟಿ. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಅಶ್ವಿನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News