ಸಚಿನ್, ಕೊಹ್ಲಿ, ಧೋನಿ ಕೂಡ ಮಾಡಿರದ ದಾಖಲೆ ಬರೆದಿದ್ದಾರೆ ಈ ಆಟಗಾರ

ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಮೊಟ್ಟಮೊದಲ ಬಾರಿಗೆ ವಸೀಮ್ ಜಾಫರ್ 12,000 ರನ್ ಗಡಿ ತಲುಪಿ ದಾಖಲೆ ಮಾಡಿದ್ದಾರೆ.

Last Updated : Feb 4, 2020, 08:40 PM IST
ಸಚಿನ್, ಕೊಹ್ಲಿ, ಧೋನಿ ಕೂಡ ಮಾಡಿರದ ದಾಖಲೆ ಬರೆದಿದ್ದಾರೆ ಈ ಆಟಗಾರ title=

ನಾಗಪುರ್:ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಕ್ರಿಕೆಟ್ ಆಟಗಾರರ ಬಗ್ಗೆ ಚರ್ಚೆಯಾಗುವಾಗ ಸಚಿನ್ ತೆಂಡೂಲ್ಕರ್ ಅವರ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಆದರೆ, ಮಂಗಳವಾರ ಒಂದು ದಾಖಲೆಯೊಂದನ್ನು ಬರೆಯಲಾಗಿದ್ದು, ಈ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಯಾಕೆ ವಿರಾಟ್ ಕೊಹ್ಲಿ ಅಥವಾ ಮಹೇಂದ್ರ ಸಿಂಗ್ ಧೋನಿ ಕೂಡ ತಲುಪಿಲ್ಲ.  ಹೌದು, ರಣಜಿ ಟ್ರೋಫಿಯಲ್ಲಿ ಮೊತ್ತ ಮೊದಲಬಾರಿಗೆ ವಸೀಮ್ ಜಾಫರ್ ಹೆಸರಿನ ಆಟಗಾರರೊಬ್ಬರು ವೈಯಕ್ತಿಕ ವಾಗಿ 12,000 ರನ್ ಗಳನ್ನು ಕಲೆಹಾಕುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನಾಗಪೂರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಕೇರಳದ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಈ ದಾಖಲೆ ಬರೆದಿದ್ದಾರೆ. ವಿಧರ್ಭ ತಂಡದ ಪರ ಬ್ಯಾಟಿಂಗ್ ಗೆ ಇಳಿಯುವದಕ್ಕೂ ಮೊದಲು ಜಾಫರ್ 11,775 ರನ್ ಗಳನ್ನು ಬಾರಿಸಿದ್ದರು. ಇದಕ್ಕೂ ಮೊದಲು ಇದೆ ಸೀಜನ್ ನಲ್ಲಿ 150ನೇ ಪಂದ್ಯವಾದಿ ಜಾಫರ್ ಇತಿಹಾಸ ರಚಿಸಿದ್ದರು. ಈ ಕುರಿತು ಮಾತನಾಡುವ 41ವರ್ಷ ವಯಸ್ಸಿನ ಜಾಫರ್, ಕ್ರಿಕೆಟ್ ಗಾಗಿ ತಮ್ಮಲ್ಲಿರುವ ಆಸಕ್ತಿಯ ಕಾರಣ ತಾವು ಇಂದಿಗೂ ಕೂಡ ರಿಟೈರ್ಮೆಂಟ್ ಕುರಿತು ಯೋಚಿಸುವುದಿಲ್ಲ ಎಂದು ಹೇಳುತ್ತಾರೆ. ಇತ್ತೀಚೆಗಷ್ಟೇ ಜಾಫರ್ ಅವರನ್ನು ಐಪಿಎಲ್ ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನ ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಬಾಂಗ್ಲಾದೇಶ್ ತಂಡಕ್ಕೂ ಸಹ ಅವರು ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

1996-97ರಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಜಾಫರ್, ಶೀಘ್ರದಲ್ಲಿಯೇ ದೇಸಿಯ ಕ್ರಿಕೆಟ್ ನ ಪ್ರಮುಖ ಆಟಗಾರರಲ್ಲಿ ಶಾಮೀಲಾಗಿದ್ದರು. ದೇಶಿಯ ಕ್ರಿಕೆಟ್ ಪಂದ್ಯಗಳಲ್ಲಿ ಅವರು ಉತ್ತಮ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ ಇಂಡಿಯಾ ಪರ ಅವರು 31 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2008ರಲ್ಲಿ ಅವರು ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಂದ್ಯವನ್ನು ಆಡಿದ್ದಾರೆ.

Trending News