'RCB..RCB' ಎಂದು ಕೂಗಲು ಅಭಿಮಾನಿಗಳಿಗೆ ಹೇಳಿದ ವಿರಾಟ್ ಕೊಹ್ಲಿ..!

ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡವು ಸೋಲಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ವರ್ತನೆಯಿಂದ ಈಗ ಅಭಿಮಾನಿಗಳ ಗಮನಸೆಳೆದಿದ್ದಾರೆ.

Written by - Zee Kannada News Desk | Last Updated : May 26, 2022, 07:34 PM IST
  • ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡವು ಸೋಲಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ವರ್ತನೆಯಿಂದ ಅಭಿಮಾನಿಗಳ ಗಮನಸೆಳೆದಿದ್ದಾರೆ.
'RCB..RCB' ಎಂದು ಕೂಗಲು ಅಭಿಮಾನಿಗಳಿಗೆ ಹೇಳಿದ ವಿರಾಟ್ ಕೊಹ್ಲಿ..!  title=
screengrab

ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡವು ಸೋಲಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ವರ್ತನೆಯಿಂದ ಈಗ ಅಭಿಮಾನಿಗಳ ಗಮನಸೆಳೆದಿದ್ದಾರೆ.

ಹೌದು, ಬೆಂಗಳೂರು ತಂಡವು ಗೆಲುವಿನ ಹಂತಕ್ಕೆ ಬಂದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೈ ಸನ್ನೆ ಮಾಡುವ ಮೂಲಕ ಅಭಿಮಾನಿಗಳಿಗೆ ಆರ್ಸಿಬಿ ಆರ್ಸಿಬಿ ಎಂದು ಕೂಗಲು ಕರೆ ನೀಡಿದರು. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Wedding Photos : 17 ವರ್ಷ ಲಿವ್ ಇನ್ ನಲ್ಲಿದ್ದು, 54ನೇ ವಯಸ್ಸಿನಲ್ಲಿ ಮದುವೆಯಾದ ಈ ಬಾಲಿವುಡ್ ಜೋಡಿ! 

ಐಪಿಎಲ್ ೨೦೨೨ ಪ್ಲೇ ಆಫ್ ನಲ್ಲಿ ಕ್ವಾಲಿಫೈಯರ್ 2 ಹಂತವನ್ನು ತಲುಪಲು ಲಕ್ನೋ ವಿರುದ್ಧದ ಪಂದ್ಯವನ್ನು ಬೆಂಗಳೂರು ತಂಡವು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು, ರಜತ್ ಪಟಿದಾರ್ ಅವರ ಭರ್ಜರಿ ಶತಕದ ನೆರವಿನಿಂದ 200ಕ್ಕೂ ಅಧಿಕ ರನ್ ಗಳಿಸಿತ್ತು, ಇನ್ನೊಂದೆಡೆಗೆ ದಿನೇಶ್ ಕಾರ್ತಿಕ್ ಕೂಡ ೩೭ ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನೊಂದೆಡೆಗೆ ಬೆಂಗಳೂರು ತಂಡವು ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡವು ಕೆ.ಎಲ್.ರಾಹುಲ್ ಹಾಗೂ ಹೂಡಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆಲುವಿನ ಹಂತಕ್ಕೆ ಬಂದಿತ್ತಾದರೂ ಕೊನೆಯಲ್ಲಿ ಜೋಶ್ ಹ್ಯಾಜಲ್‌ವುಡ್, ವನಿಂದು ಹಸರಂಗ, ಮತ್ತು ಹರ್ಷಲ್ ಪಟೇಲ್ ಅವರ ಬೌಲಿಂಗ್ ದಾಳಿಗೆ ಸಿಲುಕಿ ಸೋಲನ್ನು ಅನುಭವಿಸಿತು.

ಇದನ್ನೂ ಓದಿ: "ವೀರ ಕಂಬಳ" ಚಿತ್ರಕ್ಕೆ ಕಥೆಯೇ ಹೀರೋ... ಸಿಹಿ ಸುದ್ದಿ ಕೊಟ್ಟ ರಾಜೇಂದ್ರ ಸಿಂಗ್ ಬಾಬು!

ಬೆಂಗಳೂರು ತಂಡವು ಮೊದಲ ಬ್ಯಾಟಿಂಗ್ ನಲ್ಲಿಯೇ ಬೃಹತ್ ಮೊತ್ತಗಳಿಸಿದ್ದರಿಂದಾಗಿ ಆರಂಭದಲ್ಲಿಯೇ ಸಂಭ್ರಮದಲ್ಲಿದ್ದ ವಿರಾಟ್ ಕೊಹ್ಲಿ ಪಂದ್ಯದ ಅಂತ್ಯದಲ್ಲಿ ರೋಚಕ ಹಣಾಹಣಿಯಿಂದ ಕೂಡಿತ್ತು, ಈ ಹಂತದಲ್ಲಿ ತಂಡವು ಗೆಲುವಿನ ಹಂತಕ್ಕೆ ಬಂದಾಗ ಕೊಹ್ಲಿ 'ಆರ್ಸಿಬಿ ಆರ್ಸಿಬಿ' ಎಂದು ಕೂಗುತ್ತಿದ್ದ ಅಭಿಮಾನಿಗಳಿಗೆ ಇನ್ನಷ್ಟೂ ಕೂಗಲು ಪ್ರೇರೇಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News