ಆರ್‌ಸಿಬಿ...ಆರ್‌ಸಿಬಿ... ಎಂದು ಕೂಗಿದ ಫ್ಯಾನ್ಸ್‌ ಮೇಲೆ ಕಿಂಗ್‌ ಕೊಹ್ಲಿ ಗರಂ..!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕಂಡು ಆರ್‌ಸಿಬಿ.. ಆರ್‌ಸಿಬಿ.. ಎಂದು ಕೂಗಿದ ಅಭಿಮಾನಿಗಳ ವಿರುದ್ಧ ಕಿಂಗ್‌ ಕೊಹ್ಲಿ ಕೋಪಗೊಂಡ ಘಟನೆ ನಾಗ್ಪುರದ ಸ್ಟೇಡಿಯಂನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Sep 24, 2022, 05:43 PM IST
  • ವಿರಾಟ್‌ ಕೊಹ್ಲಿ ಕಂಡು ಆರ್‌ಸಿಬಿ.. ಆರ್‌ಸಿಬಿ.. ಎಂದು ಕೂಗಿದ ಪ್ಯಾನ್ಸ್‌
  • ಅಭಿಮಾನಿಗಳ ಹುಚ್ಚಾಟಕ್ಕೆ ಬೇಸತ್ತ ಕಿಂಗ್‌ ಕೊಹ್ಲಿ
  • ಜರ್ಸಿಯ ಕಡೆಗೆ ಕೈ ತೋರಿಸಿ, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಸಲಹೆ ನೀಡಿದ ವಿರಾಟ್‌
ಆರ್‌ಸಿಬಿ...ಆರ್‌ಸಿಬಿ... ಎಂದು ಕೂಗಿದ ಫ್ಯಾನ್ಸ್‌ ಮೇಲೆ ಕಿಂಗ್‌ ಕೊಹ್ಲಿ ಗರಂ..! title=

ನಾಗ್ಪುರ : ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕಂಡು ಆರ್‌ಸಿಬಿ.. ಆರ್‌ಸಿಬಿ.. ಎಂದು ಕೂಗಿದ ಅಭಿಮಾನಿಗಳ ವಿರುದ್ಧ ಕಿಂಗ್‌ ಕೊಹ್ಲಿ ಕೋಪಗೊಂಡ ಘಟನೆ ನಾಗ್ಪುರದ ಸ್ಟೇಡಿಯಂನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶುಕ್ರವಾರ ರಾತ್ರಿ ಮಳೆಯಿಂದಾಗಿ ಔಟ್‌ಫೀಲ್ಡ್ ಒದ್ದೆಯಾದ ಕಾರಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ T20I ಪಂದ್ಯ ಸುಮಾರು ಎರಡೂವರೆ ಗಂಟೆಗಳ ಕಾಲ ವಿಳಂಬವಾಯಿತು. ಪಂದ್ಯ ತಡವಾದರೂ ಅಭಿಮಾನಿಗಳು ಸಮಾಧಾನದಿಂದ ಕುಳಿತಿದ್ದರು. ಹೆಚ್ಚು ಸಮಯ ಕಾಯಬೇಕಾದ ಸಂದರ್ಭ ಬಂದ ಹಿನ್ನೆಲೆ, ಅಭಿಮಾನಿಗಳು ತಮ್ಮ ಫೇವರೆಟ್‌ ತವರಿನ ತಂಡಕ್ಕಾಗಿ (IPL) ಹುರಿದುಂಬಿಸುವುದನ್ನು ಪ್ರಾರಂಭಿಸಿದರು. ಈ ವೇಳೆ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಇವನಿಗೆ ಮದುವೆ ಆದ್ರೂ ಮಾಡ್ರೋ ಸುಧಾರಿಸ್ತಾನೆ..!

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ನಿಂತಿದ್ದರು. ಕೊಹ್ಲಿಯನ್ನು ನೋಡಿದ ತಕ್ಷಣ ಕ್ರೀಡಾಂಗಣದೊಳಗಿದ್ದ ಅಭಿಮಾನಿಗಳು 'ಆರ್‌ಸಿಬಿ, ಆರ್‌ಸಿಬಿ' ಎಂದು ಘೋಷಣೆ ಕೂಗಲಾರಂಭಿಸಿದರು. ಅಭಿಮಾನಿಗಳ ಹುಚ್ಚಾಟಕ್ಕೆ ಬೇಸತ್ತ ಕೊಹ್ಲಿ  ತಾವು ಹಾಕಿಕೊಂಡಿದ್ದ ಜರ್ಸಿಯ ಕಡೆಗೆ ಕೈ ತೋರಿಸಿ, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಹೇಳಿದರು. ಈ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News