Virat Kohli Birthday Cake Cutting Video: ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಇಂದು (ನವೆಂಬರ್ 5, 2022) 34 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು, ಅಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗಾಗಿ ಆಡುತ್ತಿದೆ. ಭಾರತವು ತನ್ನ ಮುಂದಿನ ಪಂದ್ಯವನ್ನು ಮೆಲ್ಬೋರ್ನ್‌ನಲ್ಲಿ ಆಡಬೇಕಾಗಿದೆ.
ವಿರಾಟ್ ತನ್ನ ಜನ್ಮದಿನವನ್ನು ಎಂಸಿಜಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡರು. ರೋಹಿತ್ ಶರ್ಮಾ ನೇತೃತ್ವದ ತಂಡದ ಮುಂದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ.
Birthday celebrations ON in Australia 🎂 🎉
Happy birthday @imVkohli & @PaddyUpton1 👏 👏 #TeamIndia | #T20WorldCup pic.twitter.com/sPB2vHVHw4
— BCCI (@BCCI) November 5, 2022
ಇದನ್ನೂ ಓದಿ: Virat Kohli : ಬೆಸ್ಟ್ ಫಾರ್ಮ್‌ಗೆ ಮರಳಿದ 'ಕಿಂಗ್ ಕೊಹ್ಲಿ' : ಈ ಪವಾಡವಾಗಿದ್ದು ಹೀಗೆ!
ವಿಡಿಯೋ ಶೇರ್ ಮಾಡಿದ ಬಿಸಿಸಿಐ:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ವಿರಾಟ್ ಅವರು ಕೇಕ್ ಕತ್ತರಿಸಿ ನಂತರ ಅದನ್ನು ಗಬಗಬನೆ ತಿನ್ನುತ್ತಿದ್ದಾರೆ. ಪ್ಯಾಡಿ ಆಪ್ಟನ್ ಕೂಡ ಅವರ ಜೊತೆಗಿದ್ದಾರೆ. ಇಂದು ಪಾಡಿ ಅಪ್ಟನ್ ಅವರ ಜನ್ಮದಿನವೂ ಆಗಿದೆ. ಅವರು ಟೀಮ್ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿದ್ದಾರೆ. ವಿರಾಟ್ ಅವರ ಬ್ಯಾಟ್ ರನ್ ಗಳಿಸದಿದ್ದಾಗ, ಪ್ಯಾಡಿ ಅಪ್ಟನ್ ಅವರಿಂದ ಕೋಚಿಂಗ್ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಇದೇ ವೇಳೆ ವಿರಾಟ್ ಕೂಡ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಕೇಕ್ ಕಟ್ ಮಾಡಿದ್ದು, ಕೇಕ್ ತಿನ್ನುತ್ತಿದ್ದಾರೆ.
ವಿರಾಟ್ ಫಿಟ್ನೆಸ್ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ:
ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ಅವರನ್ನು ಫಿಟ್ನೆಸ್-ಫ್ರೀಕ್ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ವಿಚಾರದಲ್ಲಿ ಅವರು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಬಹಳಷ್ಟು ಅಥ್ಲೀಟ್‌ಗಳು ಕೇಕ್‌ಗಳನ್ನು ಸೇವಿಸುವುದಿಲ್ಲ. ಇದಕ್ಕೆ ಕಾರಣ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ ಎಂದು. ಫಿಟ್‌ನೆಸ್‌ಗಾಗಿ ತುಂಬಾ ಚಿಂತನಶೀಲ ಡಯಟ್ ತೆಗೆದುಕೊಳ್ಳುತ್ತೇನೆ ಎಂದು ಸ್ವತಃ ವಿರಾಟ್ ಹೇಳಿದ್ದರು. ಹೀಗಿರುವಾಗ ಇಂತಹ ವಿಡಿಯೋಗಳನ್ನು ನೋಡಿದಾಗ ವಿರಾಟ್ ಅಭಿಮಾನಿಗಳು ಮತ್ತು ತಂಡದ ಪ್ರೀತಿಯ ವಿಚಾರದಲ್ಲಿ ಫಿಟ್ನೆಸ್ ಅನ್ನು ಮರೆತಂತಿದೆ.
ಇದನ್ನೂ ಓದಿ: Virat Kohli Birthday Special: ಅಪ್ಪನ ಕನಸು-ಅಣ್ಣನಿಗೆ ಕೊಟ್ಟ ಮಾತು…ವಿರಾಟ್ ಕೊಹ್ಲಿ ಜೀವನದ ಈ ಕಣ್ಣೀರ ಕಥೆ ಕೇಳಿ
ಮೆಲ್ಬೋರ್ನ್‌ನಲ್ಲಿ 'ಸೂಪರ್-ಸಂಡೇ'
ಭಾರತ ತಂಡವು ಈಗ ನವೆಂಬರ್ 6 ರಂದು ಅಂದರೆ ಭಾನುವಾರದಂದು ಸೂಪರ್-12 ಸುತ್ತಿನ ಗ್ರೂಪ್ -2 ರ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಪಂದ್ಯ ಗೆದ್ದ ತಕ್ಷಣ ಟೀಂ ಇಂಡಿಯಾ ಸೆಮಿಫೈನಲ್ ಟಿಕೆಟ್ ಖಚಿತಗೊಳಿಸಲಿದೆ. ಆದರೆ ಸೋಲು ಕಂಡರೆ ಅದರ ಬಾಗಿಲು ಮುಚ್ಚಬಹುದು ಕೂಡ. ಹಾಗಾಗಿ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಸದ್ಯ ಗ್ರೂಪ್-2ರಲ್ಲಿ ಟೀಂ ಇಂಡಿಯಾ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.