Virat Kohli: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೆಲವು ಸಮಯದ ಹಿಂದೆ ಕೆಟ್ಟ ಫಾರ್ಮ್ ನಲ್ಲಿ ಇದ್ದರು. ಸುಮಾರು ಮೂರು ವರ್ಷಗಳ ಕಾಲ ಅವರ ಬ್ಯಾಟ್‌ನಿಂದ ಯಾವುದೇ ಶತಕ ಇನ್ನಿಂಗ್ಸ್ ಬರುತ್ತಿರಲಿಲ್ಲ. ನಂತರ ಏಷ್ಯಾಕಪ್-2022ರಲ್ಲಿ ಲಯ ಹಿಡಿದ ಅವರು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಟಿ20 ವಿಶ್ವಕಪ್-2022ರಲ್ಲಿ ಅವರ ಅಬ್ಬರ ಎಲ್ಲರನ್ನೂ ಮಂತ್ರಮುಗ್ದಗೊಳಿಸಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಸೋತ ಟೀಂ ಇಂಡಿಯಾ ಟೂರ್ನಿಯಿಂದ ಹೊರಗುಳಿದಿತ್ತು.
ಇದನ್ನೂ ಓದಿ: ICC Ranking : ವಿಶ್ವದ ನಂ.1 ಬ್ಯಾಟ್ಸ್‌ಮನ್ ಪಟ್ಟ ಅಲಂಕರಿಸಿದ ಸೂರ್ಯಕುಮಾರ್!
ಜೈ-ವೀರುಗಿಂತ ಕಡಿಮೆಯಿಲ್ಲ ಇವರ ಸ್ನೇಹ:
ವಿರಾಟ್ ಕೊಹ್ಲಿ ತನ್ನ ವೃತ್ತಿ ಜೀವನ, ಕುಟುಂಬದಂತೆ ಸ್ನೇಹಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅವರ ಸ್ನೇಹಿತ ಯಾರೆಂದು ತಿಳಿಯುವ ಕುತೂಹಲವಿದೆಯೇ? ಅವರು ಬೇರೆ ಯಾರೂ ಅಲ್ಲ ವಿಶ್ವದ ನಂಬರ್ ವನ್ ಬ್ಯಾಟ್ಸ್ ಮನ್ ಮಿಸ್ಟರ್ 360 ಎಬಿಡಿ ವಿಲಿಯರ್ಸ್. ಕಷ್ಟದ ಸಮಯದಲ್ಲಿ ವಿರಾಟ್ ಕೊಹ್ಲಿಗೆ ಯಾವಾಗಲೂ ಬೆಂಬಲವಾಗಿ ನಿಂತಿದ್ದೇನೆ ಎಂದು ದಕ್ಷಿಣ ಆಫ್ರಿಕಾದ ಈ ಹಿರಿಯ ಕ್ರಿಕೆಟಿಗ ಹೇಳಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಮತ್ತು ಎಬಿ ಅವರ ಸ್ನೇಹವು 'ಶೋಲೆ' ಚಿತ್ರದ ಜೈ-ವೀರುಗಿಂತ ಕಡಿಮೆಯಿಲ್ಲ ಎಂದು ಪರಿಗಣಿಸಲಾಗಿದೆ. ಕ್ರಿಕೆಟ್ ಮೈದಾನದ ಒಳಗೂ ಹೊರಗೂ ಸಾಕಷ್ಟು ಕಥೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇಬ್ಬರ ಚಿತ್ರಗಳು ಆಗಾಗ ವೈರಲ್ ಆಗುತ್ತಿರುತ್ತವೆ.
ಎಬಿ ಡಿವಿಲಿಯರ್ಸ್ ಈಗ ಎಲ್ಲರ ಮುಂದೆ ವಿರಾಟ್ ಬಗ್ಗೆ ಒಂದು ಮಾತು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿರಾಟ್ ಕೊಹ್ಲಿ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ಅವರು ಇತ್ತೀಚೆಗೆ ಬಹಳ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ಆಗ ನಾನು ಯಾವಾಗಲೂ ಅವರ ಸಂಪರ್ಕದಲ್ಲಿದ್ದೆ. ಅವರನ್ನೂ ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದ್ದೆ. ಅವರು ನನಗೆ ಬಹಳ ಒಳ್ಳೆಯ ಸ್ನೇಹಿತ” ಎಂದು ಹೇಳಿದ್ದಾರೆ.
ವಿರಾಟ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ 71 ನೇ ಶತಕವನ್ನು ಗಳಿಸಿದಾಗ ಎಬಿಡಿ ಅವರನ್ನು ಹೊಗಳಿದ್ದರು. ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಐಪಿಎಲ್ ದಿನಗಳಿಂದಲೂ ಉತ್ತಮ ಸ್ನೇಹಿತರು. ಇಬ್ಬರೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ದೀರ್ಘಕಾಲ ಒಟ್ಟಿಗೆ ಆಡಿದ್ದರು.
ಇದನ್ನೂ ಓದಿ: Virushka : ಅನುಷ್ಕಾ ಶರ್ಮಾ ಹೆಸರಿರುವ ಟೀ ಶರ್ಟ್ ಧರಿಸಿದ ವಿರಾಟ್ ಕೊಹ್ಲಿ! ಕಾರಣವೂ ಇದೆ
ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಅಬ್ಬರ:
ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಿದ್ದ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮಿಂಚಿದ್ದರು. ಈ ಜಾಗತಿಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್. ಅವರು 6 ಪಂದ್ಯಗಳಲ್ಲಿ 98.67 ಸರಾಸರಿಯಲ್ಲಿ ಒಟ್ಟು 296 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.