ಮೈದಾನದಲ್ಲೇ ಜಗಳವಾಡಿದ ಪಠಾಣ್ ಸಹೋದರರು! ಯೂಸುಫ್ ವಿರುದ್ಧ ಸಿಡಿದೆದ್ದ ಇರ್ಫಾನ್ ವಿಡಿಯೋ ವೈರಲ್

Irfan Pathan Run Out: ಇಂಡಿಯಾ ಚಾಂಪಿಯನ್ಸ್ ತಂಡವು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದೆ. ಯುವರಾಜ್ ಸಿಂಗ್ ನಾಯಕತ್ವದ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು

Written by - Bhavishya Shetty | Last Updated : Jul 11, 2024, 06:24 PM IST
    • ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್
    • ಮೈದಾನದ ಮಧ್ಯೆಯೇ ಕಿತ್ತಾಡಿಕೊಂಡ ಇವರಿಬ್ಬರ ವಿಡಿಯೋ ವೈರಲ್
    • ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಸೋಲನ್ನು ಎದುರಿಸಬೇಕಾಯಿತು
ಮೈದಾನದಲ್ಲೇ ಜಗಳವಾಡಿದ ಪಠಾಣ್ ಸಹೋದರರು! ಯೂಸುಫ್ ವಿರುದ್ಧ ಸಿಡಿದೆದ್ದ ಇರ್ಫಾನ್ ವಿಡಿಯೋ ವೈರಲ್ title=
Irfan Pathan Yusuf Pathan Fight Video

Irfan Pathan Run Out: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮೈದಾನದ ಮಧ್ಯೆಯೇ ಕಿತ್ತಾಡಿಕೊಂಡ ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಹೆಡ್ ಕೋಚ್ ಆಗುತ್ತಿದ್ದಂತೆ ಬಿಸಿಸಿಐ ಮುಂದೆ ಈ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಏನದು?

ಇಂಡಿಯಾ ಚಾಂಪಿಯನ್ಸ್ ತಂಡವು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದೆ. ಯುವರಾಜ್ ಸಿಂಗ್ ನಾಯಕತ್ವದ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸೌತ್ ಆಫ್ರಿಕಾ ಚಾಂಪಿಯನ್ಸ್ ಸ್ಕೋರ್‌ಬೋರ್ಡ್‌ನಲ್ಲಿ 210 ರನ್‌ಗಳನ್ನು ಹಾಕಿದರು. ಸೇಡು ತೀರಿಸಿಕೊಳ್ಳಲು ಇಂಡಿಯಾ ಚಾಂಪಿಯನ್ಸ್’ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ, ಸುರೇಶ್ ರೈನಾ (25) ಮತ್ತು ರಾಬಿನ್ ಉತ್ತಪ್ಪ (21) ತಕ್ಕಮಟ್ಟಿನ ಇನ್ನಿಂಗ್ಸ್‌ ಪ್ರದರ್ಶಿಸಿದರು. ಆದರೆ ವಿಕೆಟ್‌ಗಳ ಹರಿವು ನಿಲ್ಲಲಿಲ್ಲ. ಸಂಪೂರ್ಣ ಜವಾಬ್ದಾರಿ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಮೇಲೆ ಬಿದ್ದಿತು.

 

ಇರ್ಫಾನ್ ಪಠಾಣ್ 20 ಎಸೆತಗಳಲ್ಲಿ 35 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಈ ಮಧ್ಯೆ ಒಂದು ರನ್ ಪಡೆಯಲು ಯೂಸುಫ್ ಮತ್ತು ಇರ್ಫಾನ್ ಓಡಿದರು. ಆದರೆ ಇರ್ಫಾನ್ ಎರಡನೇ ರನ್‌’ಗೆ ಓಡುತ್ತಿದ್ದಂತೆ ಯೂಸುಫ್ ನಿರಾಕರಿಸಿದರು. ಇದನ್ನೇ ಅವಕಾಶವಾಗಿ ಪಡೆದುಕೊಂಡ ಎದುರಾಳಿ ತಂಡ, ಇರ್ಫಾನ್ ಹಿಂದಿರುಗುವ ಹೊತ್ತಿಗೆ ವಿಕೆಟ್ ಕಿತ್ತಿದ್ದರು.  ಈ ಸಂದರ್ಭದಲ್ಲಿ ಕೋಪಗೊಂಡ ಇರ್ಫಾನ್ ಪಠಾಣ್, ಯೂಸುಫ್ ವಿರುದ್ಧ ಬಹಿರಂಗವಾಗಿ ಕೂಗಿದರು. ಇಬ್ಬರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ರೋಹಿತ್ ಶರ್ಮಾ 2ನೇ ಪತ್ನಿ ಇವರೇ! ಧರ್ಮಪತ್ನಿ ರಿತಿಕಾಗೂ ಗೊತ್ತಿದೆ ಈ ವಿಚಾರ… ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿಕೆ

ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಸೋಲನ್ನು ಎದುರಿಸಬೇಕಾಯಿತು. ಇರ್ಫಾನ್ ಪಠಾಣ್ ವಿಕೆಟ್ ಪಡೆದ ಬಳಿಕ ಆಫ್ರಿಕಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ, ಯೂಸುಫ್ ಪಠಾಣ್ ಭರ್ಜರಿ ಅರ್ಧಶತಕ ಬಾರಿಸಿದರು. ಅವರು 44 ಎಸೆತಗಳಲ್ಲಿ 54 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ ಯುವರಾಜ್ ತಂಡ 54 ರನ್‌’ಗಳಿಂದ ಸೋಲನುಭವಿಸಬೇಕಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News