ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ..!

ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಬಾರಿಯೂ CSK ತಂಡವು IPL 2022 ರ ಪ್ರಶಸ್ತಿಯನ್ನು ಗೆಲ್ಲುವ ದೊಡ್ಡ ಸ್ಪರ್ಧಿಯಾಗಿದೆ. 

Written by - Ranjitha R K | Last Updated : Mar 25, 2022, 10:51 AM IST
  • ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ
  • ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ಹೊಸ ನಾಯಕ
  • ತಂಡದಲ್ಲಿದ್ದಾರೆ ಸ್ಟಾರ್ ಆಲ್ ರೌಂಡರ್ ಗಳು
ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ  ಗೆಲ್ಲುವ ಸಾಧ್ಯತೆ ಹೆಚ್ಚು ..! title=
ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ಹೊಸ ನಾಯಕ (file photo)

ನವದೆಹಲಿ : ಐಪಿಎಲ್ 2022 ಕ್ಕೂ (IPL 2022) ಮುನ್ನ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕತ್ವವನ್ನು ತೊರೆದಿದ್ದಾರೆ.  ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್  ತಂಡದ ನಾಯಕರನ್ನಾಗಿ ಮಾಡಲಾಗಿದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ (CSK)ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಬಾರಿಯೂ CSK ತಂಡವು IPL 2022 ರ ಪ್ರಶಸ್ತಿಯನ್ನು ಗೆಲ್ಲುವ ದೊಡ್ಡ ಸ್ಪರ್ಧಿಯಾಗಿದೆ. ಇದಕ್ಕೆ ಮೂರು ಪ್ರಮುಖ ಕಾರಣಗಳೂ ಇವೆ.  

1.CSK ತಂಡದಲ್ಲಿದ್ದಾರೆ ಅತ್ಯುತ್ತಮ ಆಲ್ ರೌಂಡರ್‌ಗಳು : 
ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ (Chennai Super Kings) ಆಲ್‌ರೌಂಡರ್‌ಗಳನ್ನು ಹೊಂದಿದೆ. ಈ ಆಲ್‌ರೌಂಡರ್‌ಗಳ  ಕಾರಣದಿಂದ ಸಿಎಸ್‌ಕೆ ನಾಲ್ಕು ಟ್ರೋಫಿಗಳನ್ನು ಗೆದ್ದಿದೆ. ಪ್ರಸ್ತುತ ರವೀಂದ್ರ ಜಡೇಜಾ (Ravindra Jadeja) ತಂಡದ ನಾಯಕರಾಗಿದ್ದಾರೆ. ಈ ಬಾರಿ  ಜಡೇಜಾ ಮೇಲೆ ಮಹತ್ವದ ಜವಾಬ್ದಾರಿ ಇದೆ. ಜಡೇಜಾ ಹೊರತುಪಡಿಸಿ, ಇಂಗ್ಲೆಂಡ್‌ನ ಮೊಯಿನ್ ಅಲಿ, ಡ್ವೇನ್ ಬ್ರಾವೋ ಮತ್ತು ಶಿಭವ್ ದುಬೆ ಯಾವುದೇ ಸಮಯದಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿಬಿಡಬಹುದು. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಬೆಂಬಲ ನೀಡುತ್ತವೆ. ಜಡೇಜಾ ಮತ್ತು ಮೊಯಿನ್ ಅಲಿ ತಮ್ಮ ಮಾರಕ ಎಸೆತಗಳಿಂದ  ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು  ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ .  

ಇದನ್ನೂ ಓದಿ : IPL 2022 ರ ಅತ್ಯಂತ ಅಪಾಯಕಾರಿ ಬೌಲರ್‌ಗಳು ಇವರೆ ನೋಡಿ!

2.CSK ಬ್ಯಾಟಿಂಗ್ ತಂಡ :
CSK ತಂಡವು ರಿತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆಯಂತಹ ಉತ್ತಮ ಆರಂಭಿಕ ಜೋಡಿಯನ್ನು ಹೊಂದಿದೆ. ಕಳೆದ ಋತುವಿನಲ್ಲಿ ರಿತುರಾಜ್ ಗಾಯಕ್ವಾಡ್ (Ruturaj Gaikwad) ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಐಪಿಎಲ್ 2021 ರಲ್ಲಿ, ರಿತುರಾಜ್ ಗಾಯಕ್ವಾಡ್ 16 ಪಂದ್ಯಗಳಲ್ಲಿ 636 ರನ್ ಗಳಿಸಿದ್ದಾರೆ.  ಇನ್ನು ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ ಮತ್ತು ಅಂಬಟಿ ರಾಯುಡು ಅವರನ್ನು ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ಬ್ಯಾಟ್ ಮಾಡಲು ಮಹೇಂದ್ರ ಸಿಂಗ್ ಧೋನಿಯಂತಹ (MS Dhoni) ಫಿನಿಶರ್‌ ತಂಡದಲ್ಲಿದ್ದಾರೆ. ಈ ಎಲ್ಲಾ ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡ  ಎದುರಾಳಿ ತಂಡಕ್ಕೆ ಮಾರಕವಾಗಿ ಪರಿನಮಿಸುವುದರಲ್ಲಿ ಸಂದೇಹವಿಲ್ಲ.

3. ತಂಡದಲ್ಲಿದ್ದಾರೆ ಫಾಸ್ಟ್ ಬೌಲರ್  :  
ಐಪಿಎಲ್ ಮೆಗಾ ಹರಾಜು 2022 ರಲ್ಲಿ (IPL Mega Auction) CSK ದೀಪಕ್ ಚಹಾರ್ ಅವರನ್ನು 14 ಕೋಟಿಗೆ ಖರೀದಿಸಿದೆ. ದೀಪಕ್ ಚಹಾರ್ ತಮ್ಮ ಕಿಲ್ಲರ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ.  ನಿಧಾನಗತಿಯಲ್ಲಿ ವಿಕೆಟ್ ಕಬಳಿಸುವ ಇವರ ಕಲೆ ಎಲ್ಲರಿಗೂ ಪರಿಚಿತ. ಕ್ರಿಸ್ ಜೋರ್ಡಾನ್ ಮತ್ತು ಆಡಮ್ ಮಿಲ್ನೆ ಕೂಡ CSK ತಂಡದಲ್ಲಿದ್ದಾರೆ. ಈ ಎರಡೂ ಬೌಲರ್‌ಗಳ ಓವರ್‌ಗಳನ್ನು ಆಡುವುದು  ದಾಂಡಿಗರಿಗೆ ಅಷ್ಟು ಸುಲಭವಲ್ಲ. 

ಇದನ್ನೂ ಓದಿ : ನಿರ್ಣಾಯಕ ಪಂದ್ಯದಲ್ಲಿ ಕೊನೆಗೂ ಗೆದ್ದ ಭಾರತ: ಸೆಮೀಸ್ ಹಾದಿ ಎಷ್ಟು ಕಠಿಣ!?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News