ನೀವು ಪಡೆದಿರುವ ಲೋನ್ EMI ಕಡಿಮೆಯಾಗಲಿದೆಯೇ? RBI ನಾಳೆ ಪ್ರಕಟಿಸಲಿದೆ ನಿರ್ಧಾರ

RBI MPC Meeting:ಹಣದುಬ್ಬರ ದರವು ನಿಗದಿತ ವ್ಯಾಪ್ತಿಯನ್ನು ಮೀರಿ ಹೋಗುವುದರಿಂದ, ಪ್ರಸ್ತುತ ರೆಪೊ ದರದಲ್ಲಿ ಆರ್‌ಬಿಐ ಯಾವುದೇ ರೀತಿಯ ಕಡಿತವನ್ನು ಮಾಡುತ್ತದೆ  ಎನ್ನುವ ಯಾವ ನಿರೀಕ್ಷೆಯೂ ಇಲ್ಲ. 

Written by - Ranjitha R K | Last Updated : Jun 6, 2024, 01:38 PM IST
  • ಮೂರು ದಿನಗಳ ದ್ವೈಮಾಸಿಕ ಮಾಸಿಕ ಎಂಪಿಸಿ ಬುಧವಾರ ಆರಂಭ
  • ಎಂಪಿಸಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎನ್ನಲಾಗಿದೆ
  • ಪ್ರಸ್ತುತ ರೆಪೊ ದರದಲ್ಲಿ ಆರ್‌ಬಿಐ ಯಾವುದೇ ರೀತಿಯ ಕಡಿತ ಇಲ್ಲ
ನೀವು ಪಡೆದಿರುವ ಲೋನ್ EMI ಕಡಿಮೆಯಾಗಲಿದೆಯೇ? RBI ನಾಳೆ ಪ್ರಕಟಿಸಲಿದೆ ನಿರ್ಧಾರ  title=

RBI MPC Meeting : ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮೂರು ದಿನಗಳ ದ್ವೈಮಾಸಿಕ ಮಾಸಿಕ ಎಂಪಿಸಿ ಬುಧವಾರ ಆರಂಭವಾಗಿದೆ. ನೀವು ಅಗ್ಗದ ಗೃಹ ಸಾಲ ಅಥವಾ ವೈಯಕ್ತಿಕ ಸಾಲಕ್ಕಾಗಿ ಕಾಯುತ್ತಿದ್ದರೆ, ಇನ್ನೂ ಹೆಚ್ಚು ಸಮಯ ಕಾಯಬೇಕಾಗಬಹುದು.ಎಂಪಿಸಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ದರವು ನಿಗದಿತ ವ್ಯಾಪ್ತಿಯನ್ನು ಮೀರಿ ಹೋಗುವುದರಿಂದ, ಪ್ರಸ್ತುತ ರೆಪೊ ದರದಲ್ಲಿ ಆರ್‌ಬಿಐ ಯಾವುದೇ ರೀತಿಯ ಕಡಿತವನ್ನು ಮಾಡುತ್ತದೆ  ಎನ್ನುವ ಯಾವ ನಿರೀಕ್ಷೆಯೂ ಇಲ್ಲ. 

ಆರ್‌ಬಿಐ ನಿರ್ಧಾರಗಳ ಬಗ್ಗೆ ನಾಳೆ ನೀಡಲಿದೆ ಮಾಹಿತಿ : 
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಜೂನ್ 7 ರಂದು ಹಣಕಾಸು ನೀತಿ ಸಮಿತಿ (ಎಂಪಿಸಿ) ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ರಿಸರ್ವ್ ಬ್ಯಾಂಕ್‌ನಿಂದ ರೆಪೊ ದರದಲ್ಲಿ ಕಡಿತದ ನಿರೀಕ್ಷೆಯಿಲ್ಲ ಎನ್ನುವುದು ತಜ್ಞರ ವಾದ. ಹಣದುಬ್ಬರ ದರವು ಇನ್ನೂ ಕಳವಳಕಾರಿ ವಿಷಯವಾಗಿದೆ. ಫೆಬ್ರವರಿ 2023ರಿಂದ ರೆಪೊ ದರವು 6.5 ಪ್ರತಿಶತದಷ್ಟು ಉನ್ನತ ಮಟ್ಟದಲ್ಲಿದೆ. ಫೆಬ್ರವರಿ 2023ರಲ್ಲಿ ಸೆಂಟ್ರಲ್ ಬ್ಯಾಂಕ್ ಕೊನೆಯದಾಗಿ ರೆಪೋ ದರವನ್ನು 6.5 ಪ್ರತಿಶತಕ್ಕೆ ಹೆಚ್ಚಿಸಿತ್ತು.ಅಂದಿನಿಂದ ಸತತ ಏಳು ಬಾರಿ ಅದೇ ಮಟ್ಟದಲ್ಲಿ ಅದನ್ನು ನಿರ್ವಹಿಸಿದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಲಿದೆ. ಆದರೆ ಇದು ಬಹಳ ಚಿಕ್ಕ ಮಟ್ಟದ ಕಡಿತವಾಗಿರಬಹುದು ಎಂದು ಹೇಳಲಾಗಿದೆ.ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರವು ಮೇ ತಿಂಗಳಲ್ಲಿ ಸುಮಾರು ಐದು ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ. ಜುಲೈನಲ್ಲಿ ಇದು 3 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಅಂದಾಜಿಸಲಾಗಿದೆ. 

ಈ ತಿಂಗಳ ಅಂತ್ಯದಲ್ಲಿ ಹಣದುಬ್ಬರ ದರದ ಅಂಕಿಅಂಶಗಳು :
ಹಣದುಬ್ಬರ ದರದ ಅಂಕಿಅಂಶಗಳು ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿವೆ. ಅಕ್ಟೋಬರ್‌ನಿಂದ 2024-25 ರ ಹಣಕಾಸು ವರ್ಷದ ಅಂತ್ಯದವರೆಗೆ ಹಣದುಬ್ಬರ ದರವು ಶೇಕಡಾ 5 ಕ್ಕಿಂತ ಕಡಿಮೆ ಇರುತ್ತದೆ ಎಂದು ಅದು ಹೇಳಿದೆ. RBIನ ನಿರೀಕ್ಷೆಗಳಿಗೆ ಸಂಬಂಧಿಸಿದಂತೆ, Housing.com ಮತ್ತು PropTiger.com ನ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಧ್ರುವ್ ಅಗರ್ವಾಲ್, ಭಾರತದ ಆರ್ಥಿಕತೆಯು ತನ್ನ ಬಲವಾದ ಕಾರ್ಯಕ್ಷಮತೆಯನ್ನು ಮುಂದುವರೆಸಿದ್ದು, 2023-24 ರಲ್ಲಿ 8.2 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದರು. 

ಇದನ್ನೂ ಓದಿ : Arecanut Price in Karnataka: ಶಿವಮೊಗ್ಗದಲ್ಲಿ 53 ಸಾವಿರ ರೂ.ನ ಗಡಿ ದಾಟಿದ ಅಡಿಕೆ ಧಾರಣೆ

MPC ಯಲ್ಲಿನ ಸದಸ್ಯರು ಯಾರು ? :
'ಸದ್ಯದ ಹಣದುಬ್ಬರದ ಒತ್ತಡದ ನಡುವೆ RBI MPC ತನ್ನ ಪ್ರಸ್ತುತ ನಿಲುವನ್ನು ಉಳಿಸಿಕೊಳ್ಳುತ್ತದೆ. ಈ ವರ್ಷ ಬಡ್ಡಿದರ ಕಡಿತದ ಸಾಧ್ಯತೆಗಳು ಕಡಿಮೆಯಾಗಿವೆ' ಎಂದು ಅವರು ಹೇಳಿದರು.ಚಿಲ್ಲರೆ ಹಣದುಬ್ಬರ ದರವನ್ನು ಶೇಕಡಾ 2 ರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4 ರಲ್ಲಿ ಇರಿಸಲು ಸರ್ಕಾರವು RBI ಗೆ ಗುರಿಯನ್ನು ನೀಡಿದೆ. ಎಂಪಿಸಿ ಮೂರು ಬಾಹ್ಯ ಸದಸ್ಯರು ಮತ್ತು ಮೂವರು ಆರ್‌ಬಿಐ ಅಧಿಕಾರಿಗಳನ್ನು ಒಳಗೊಂಡಿದೆ. ದರ ನಿಗದಿ ಸಮಿತಿಯ ಬಾಹ್ಯ ಸದಸ್ಯರು ಶಶಾಂಕ್ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News