Team India: ಜಡೇಜಾರಿಂದಾಗಿ ಟೀಂ ಇಂಡಿಯಾದ ಈ ಆಟಗಾರನ ಕೆರಿಯರ್ ಅಂತ್ಯ!?

ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ ಪ್ರಗ್ಯಾನ್ ಓಜಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಜಡೇಜಾ ತಮ್ಮ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡರು.

Written by - Puttaraj K Alur | Last Updated : Feb 24, 2023, 10:53 AM IST
  • ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ 33ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು
  • ಅದ್ಭುತ ಪ್ರದರ್ಶನ ನೀಡಿದ ರವೀಂದ್ರ ಜಡೇಜಾಗೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ
  • ಸಿಗದ ಅವಕಾಶಗಳಿಂದ ಬೇಸತ್ತು ಕ್ರಿಕೆಟ್‍ಗೆ ಗುಡ್‍ ಬೈ ಹೇಳಿದ ಪ್ರಗ್ಯಾನ್ ಓಜಾ
Team India: ಜಡೇಜಾರಿಂದಾಗಿ ಟೀಂ ಇಂಡಿಯಾದ ಈ ಆಟಗಾರನ ಕೆರಿಯರ್ ಅಂತ್ಯ!? title=
ಈ ಆಟಗಾರನ ವೃತ್ತಿಜೀವನ ಅಂತ್ಯ!

ನವದೆಹಲಿ: ಪ್ರಸ್ತುತ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರವೀಂದ್ರ ಜಡೇಜಾ ಆಸ್ಟ್ರೇಲಿಯಾಕ್ಕೆ ನುಂಗಲಾರದ ತುತ್ತಾಗಿದ್ದಾರೆ. ಜಡೇಜಾ ಈ ಸರಣಿಯಲ್ಲಿ ಇದುವರೆಗೆ 17 ವಿಕೆಟ್‌ಗಳೊಂದಿಗೆ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಬ್ಯಾಟಿಂಗ್‍ನಿಂದ ಸಹ ಅವರು ಟೀಂ ಇಂಡಿಯಾಗೆ ಗೆಲುವು ತಂದುಕೊಡುತ್ತಿದ್ದಾರೆ. ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಆಸ್ಟ್ರೇಲಿಯಾಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆ.  

ಬಹುದಿನಗಳ ನಂತರ ರವೀಂದ್ರ ಜಡೇಜಾ ಭಾರತ ಟೆಸ್ಟ್ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ ಬಳಿಕ ಒಬ್ಬ ಆಟಗಾರನ ವೃತ್ತಿಜೀವನಕ್ಕೆ ಅಂತ್ಯ ಹಾಡಿದಂತಾಗಿದೆ. ರವಿಚಂದ್ರನ್ ಅಶ್ವಿನ್ ಮತ್ತು ಪ್ರಗ್ಯಾನ್ ಓಜಾ ಅವರ ಜೋಡಿಯನ್ನು ಟೀಂ ಇಂಡಿಯಾದಲ್ಲಿ ಹಿಟ್ ಎಂದು ಪರಿಗಣಿಸಲಾಗಿತ್ತು, ಆದರೆ ರವೀಂದ್ರ ಜಡೇಜಾ ಆಗಮನದೊಂದಿಗೆ ಎಲ್ಲವೂ ಬದಲಾಗಿದೆ.

ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಸರಣಿಯ ನಡುವೆ ನಿವೃತ್ತಿ ಘೋಷಿಸಿದ ಆಟಗಾರ! ಅಭಿಮಾನಿಗಳು ಶಾಕ್

ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ!

ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ 33ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು, ಇದಕ್ಕೆ ದೊಡ್ಡ ಕಾರಣ ರವೀಂದ್ರ ಜಡೇಜಾ. ಪ್ರಗ್ಯಾನ್ ಓಜಾ ವೆಸ್ಟ್ ಇಂಡೀಸ್ ವಿರುದ್ಧ 14 ನವೆಂಬರ್ 2013ರಂದು ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದರು, ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಚಿನ್ ತೆಂಡೂಲ್ಕರ್ ಅವರ ವಿದಾಯದ ಪಂದ್ಯವಾಗಿತ್ತು. ಮುಂಬೈನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಪ್ರಗ್ಯಾನ್ ಎರಡೂ ಇನಿಂಗ್ಸ್‌ಗಳಲ್ಲಿ 40 ರನ್‌ಗಳಿಗೆ 5 ವಿಕೆಟ್ ಮತ್ತು 49 ರನ್‌ಗಳಿಗೆ 5 ವಿಕೆಟ್ ಪಡೆದು 89 ರನ್‌ಗಳಿಗೆ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದರ ನಂತರ ಓಜಾ ಅವರ ಆಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಈ ಕಾರಣದಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿಯಬೇಕಾಯಿತು. ಇದರ ನಂತರ ಅವರು ತಮ್ಮ ಆಟವನ್ನು ಸುಧಾರಿಸಲು ಶ್ರಮಿಸಿದರು ಬಳಿಕ ಐಸಿಸಿಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡರು. ಆದರೆ ಅಂದು ಎಂಎಸ್ ಧೋನಿ ನಾಯಕತ್ವದಲ್ಲಿ ರವೀಂದ್ರ ಜಡೇಜಾ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಓಜಾ ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.

10 ವಿಕೆಟ್ ಪಡೆದು ಇತಿಹಾಸ

ಸೆಪ್ಟೆಂಬರ್ 5, 1986ರಂದು ಒಡಿಶಾದಲ್ಲಿ ಜನಿಸಿದ ಓಜಾರ ಕೊನೆಯ ಟೆಸ್ಟ್ ಅತ್ಯಂತ ಐತಿಹಾಸಿಕವಾಗಿತ್ತು. ಓಜಾ ಈ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ ಸಾಧನೆ ಮಾಡಿದ್ದರು. ಅದೂ ಭಾರತೀಯ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯದಲ್ಲಿ. ಮುಂಬೈನಲ್ಲಿ 14 ನವೆಂಬರ್ 2013ರಂದು ಆರಂಭವಾದ ಈ ಟೆಸ್ಟ್‌ನಲ್ಲಿ ಪ್ರಗ್ಯಾನ್ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ನಲುಗಿ ಹೋಗಿದರು. ಕೇವಲ 3 ದಿನಗಳಲ್ಲಿ ಮುಕ್ತಾಯವಾದ ಈ ಟೆಸ್ಟ್ ಪಂದ್ಯದಲ್ಲಿ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದುಕೊಂಡರು.  

ಇದನ್ನೂ ಓದಿ: T20 World Cup 2023: ವನಿತಾ ವಿಶ್ವಕಪ್ ಕನಸಿಗೆ ಭಗ್ನ: ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ

ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ ಓಜಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಜಡೇಜಾ ತಮ್ಮ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡರು. ಇದು ಓಜಾ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಮುಳ್ಳಾಯಿತು. ಸರಿಯಾದ ಅವಕಾಶ ಸಿಗದ ಅವರು ವೃತ್ತಿಜೀವನಕ್ಕೆ ಗುಡ್ ಬೈ ಹೇಳಬೇಕಾಯಿತು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News