Sania Mirza: ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ವಾರಗಳಿಂದ ಮುಖ್ಯಾಂಶಗಳಲ್ಲಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ಆಕೆಯ ದಾಂಪತ್ಯದಲ್ಲಿ ಬಹಳ ದಿನಗಳಿಂದ ಸಮಸ್ಯೆಗಳಿದ್ದವು. ನಂತರ ಕೊನೆಗೂ ವಿಚ್ಛೇದನದ ಸುದ್ದಿ ಹೊರಬಿದ್ದಿದ್ದು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಆದರೆ, ಸಾನಿಯಾ ಅಭಿಮಾನಿಗಳು ಅವರು ಎಲ್ಲವನ್ನೂ ಮರೆತು ಜೀವನದಲ್ಲಿ ಮುನ್ನಡೆಯಬೇಕೆಂದು ಬಯಸುತ್ತಾರೆ. ಇತ್ತೀಚೆಗಷ್ಟೇ ಅವರು ತಮ್ಮ ಅಭಿಮಾನಿಗಳೊಂದಿಗೆ ಒಂದು ಅಪ್ಡೇಟ್ ಹಂಚಿಕೊಂಡಿದ್ದಾರೆ.
ಹೌದು ಟೆನಿಸ್ ತಾರೆ ಸಾನಿಯಾ ವಿಚ್ಛೇದನದ ನಂತರ ತನ್ನ ಜೀವನದಲ್ಲಿ ಮುನ್ನಡೆಯುತ್ತಿರುವಂತೆ ತೋರುತ್ತಿದ್ದು.. ಇದನ್ನು ನೋಡಿದ ಅಭಿಮಾನಿಗಳು ಕೂಡ ಸಂತೋಷಪಟ್ಟಿದ್ದಾರೆ. ಸಾನಿಯಾ ಹಂಚಿಕೊಂಡ ಅಪ್ಡೇಟ್ ಪ್ರಕಾರ, ಅವರು ಟೆನಿಸ್ ಚಾನೆಲ್ನ ಕಾಮೆಂಟರಿ ಪ್ಯಾನೆಲ್ಗೆ ವಿಶೇಷ ಅತಿಥಿಯಾಗಿ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ-ಆಥಿಯಾ ಶೆಟ್ಟಿ ಪ್ರೆಗ್ನೆಂಟ್ ! ಕ್ರಿಕೆಟರ್ ಕೆಎಲ್ ರಾಹುಲ್ ತಂದೆ ಆಗಲಿದ್ದಾರಾ?
ಮಾರ್ಚ್ 31 ರಂದು ನಡೆಯುವ ಮಿಯಾಮಿ ಓಪನ್ನಲ್ಲಿ ಸಾನಿಯಾ ಮಿರ್ಜಾ ವಿಶೇಷ ಕಾಮೆಂಟೇಟರ್ ಆಗಿ ಮಹಿಳಾ ಫೈನಲ್ನಲ್ಲಿ ಕಾಮೆಂಟ್ ಮಾಡಲಿದ್ದಾರೆ..
ಇನ್ನು ಸಾನಿಯಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.. ಆಗಾಗ್ಗೆ ತಮ್ಮ ಪೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.. ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಕೂಡ ವರ್ಷದ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಶೋಯೆಬ್ ಮಲಿಕ್ನಿಂದ ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ಬಗ್ಗೆ ಹಲವಾರು ರೀತಿಯ ಸುದ್ದಿಗಳು ಹೊರಬರುತ್ತಿದ್ದವು. ಈ ಇಬ್ಬರ ವಿಚ್ಛೇದನದ ನಂತರ ಅವರ ಮಗನು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ, ಶಾಲೆಯಲ್ಲಿ ಹಿಂಸೆಗೆ ಒಳಗಾಗುತ್ತಿದ್ದಾನೆ.. ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾನೆ ಎಂಬ ವರದಿಗಳೂ ಇದ್ದವು.
ಇದನ್ನೂ ಓದಿ-ʻಆ ರಾತ್ರಿಗಳನ್ನು ಮರೆಯಲು ಸಾಧ್ಯವಿಲ್ಲ..ʼ ಕರೀನಾ ಕಪೂರ್ ಸೆನ್ಸೇಷನಲ್ ಕಾಮೆಂಟ್..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.