ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ?

shikhar dhawan retire: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. ಶಿಖರ್ ಕ್ರಿಕೆಟ್ ಕ್ಷೇತ್ರದಿಂದ ನಿವೃತ್ತಿಯಾಗುತ್ತಿದ್ದಂತೆ ಹಲವರು ನಿರಾಸೆ ವ್ಯಕ್ತಪಡಿಸಿದರು. ಶಿಖರ್ ನಿವೃತ್ತಿಯ ನಂತರ ಯುವರಾಜ್ ಸಿಂಗ್ ಅವರಿಗೆ ಭರ್ಜರಿ ಆಫರ್ ನೀಡಿದ್ದಾರೆ.

Written by - Savita M B | Last Updated : Aug 26, 2024, 11:55 AM IST
  • ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ
  • ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲು ಅವರಿಗೆ ಆಫರ್ ನೀಡಿದ್ದಾರೆ.
ಇದು ಗುರು ನಿಜವಾದ ಸ್ನೇಹ ಅಂದ್ರೆ.. ನಿವೃತ್ತಿ ಬೆನ್ನಲ್ಲೇ ಶಿಖರ್ ಧವನ್‌ಗೆ ಭರ್ಜರಿ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್‌! ಏನದು ಗೊತ್ತೇ? title=

yuvraj singh offer to Opener shikhar dhawan: ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಎಂದರೇ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.. ನಿವೃತ್ತಿಯ ನಂತರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಶಿಖರ್ ಧವನ್ ಗೆ ಭರ್ಜರಿ ಆಫರ್ ನೀಡಿದ್ದಾರೆ. ಧವನ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲು ಅವರಿಗೆ ಆಫರ್ ನೀಡಿದ್ದಾರೆ.

ಇದನ್ನೂ ಓದಿ-IPL 2025: ರೋಹಿತ್‌ ಶರ್ಮಾಗೆ ಹೆಚ್ಚಿದ ಡಿಮ್ಯಾಂಡ್‌.. 50 ಕೋಟಿ ಮೊತ್ತಕ್ಕೆ ಕ್ಯಾಪ್ಟನ್‌ ಹರಾಜು?

"ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಸಂತೋಷವಾಗಿದೆ. ಜೀವನದಲ್ಲಿ ಸಿಕ್ಕ ಪ್ರತಿಯೊಂದು ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಮೈದಾನದಲ್ಲಿ ಮತ್ತು ಹೊರಗೆ ಯಾವಾಗಲೂ 100% ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ICC ಟೂರ್ನಮೆಂಟ್‌ನಲ್ಲಿ ನಿಮ್ಮ ನಿರ್ಭೀತ ಆಟ ಮತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನದಿಂದ ನೀವು ನಿಜವಾದ 'ಗಬ್ಬರ್' ಆಗಿದ್ದೀರಿ. ನಿಮ್ಮಿಂದ ಎದುರಾಳಿ ತಂಡಗಳೂ ಭಯಗೊಂಡಿದ್ದವು. ನಿಮ್ಮ ವೃತ್ತಿಜೀವನದಲ್ಲಿ ನೀವು ಏನು ಸಾಧಿಸಿದ್ದೀರಿ ಎಂಬುದರ ಬಗ್ಗೆ ನೀವು ಹೆಮ್ಮೆಪಡಬೇಕು. ಇದೀಗ ಮತ್ತೊಂದೆಡೆ ನಿಮಗೆ ಸ್ವಾಗತ, ಲೆಜೆಂಡ್ ಕ್ರಿಕೆಟ್ ಆಡಲು ಬನ್ನಿ ಎಂದು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ-ʼವಿರಾಟ್‌ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್‌ ಕಾಮೆಂಟ್!!‌

ಇನ್ನು ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರೂ ಟೀಂ ಇಂಡಿಯಾ ಪರ ಹಲವು ವರ್ಷಗಳಿಂದ ಕ್ರಿಕೆಟ್ ಆಡಿದ್ದಾರೆ. ಇಬ್ಬರಿಗೂ ಉತ್ತಮ ಬಾಂಧವ್ಯವಿದೆ. ಶಿಖರ್ ಲೆಜೆಂಡ್ ಲೀಗ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಮುಖ್ಯ. ಟೀಂ ಇಂಡಿಯಾ ನಾಯಕರಾಗಿರುವ ಯುವರಾಜ್ ನಿವೃತ್ತಿಯ ದಿನವೇ ಅವರಿಗೆ ಆಫರ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News