Rohit Sharma: ಧರ್ಮಶಾಲಾಗೆ ಹೆಲಿಕಾಪ್ಟರ್’ನಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ: ವಿಡಿಯೋ ವೈರಲ್

Rohit Sharma Helicopter Entry Video: ರೋಹಿತ್ ಶರ್ಮಾ ಮಾತ್ರ ಹೀರೋ ಸ್ಟೈಲ್’ನಲ್ಲಿ ಧರ್ಮಶಾಲಾಗೆ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ರೋಹಿತ್ ಅವರನ್ನು ಕೆಲ ಅಧಿಕಾರಿಗಳು ಸ್ವಾಗತಿಸಿ, ಕಾರಿನ ಮೂಲಕ ಹೋಟೆಲ್’ಗೆ ಕರೆ ತಂದಿದ್ದಾರೆ. ಅಂದಹಾಗೆ ಫುಲ್ ಬ್ಲ್ಯಾಕ್ ಡ್ರೆಸ್ ಸ್ಟೈಲ್’ನಲ್ಲಿ ಹೀರೋ ಥರ ಕಾಣಿಸುತ್ತಿದ್ದರು ಟೀಂ ಇಂಡಿಯಾ ನಾಯಕ.  

Written by - Bhavishya Shetty | Last Updated : Mar 5, 2024, 07:17 PM IST
    • ಹೀರೋ ಸ್ಟೈಲ್’ನಲ್ಲಿ ಧರ್ಮಶಾಲಾಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ
    • 5ನೇ ಟೆಸ್ಟ್ ಪಂದ್ಯ ಮಾರ್ಚ್ 7ರಂದು ಗುರುವಾರದಿಂದ ಧರ್ಮಶಾಲಾದಲ್ಲಿ ನಡೆಯಲಿದೆ
    • ಈ ಕೊನೆಯ ಪಂದ್ಯ ಮೂವರು ಆಟಗಾರರಿಗೆ ಅತ್ಯಂತ ವಿಶೇಷವಾಗಿರಲಿದೆ
Rohit Sharma: ಧರ್ಮಶಾಲಾಗೆ ಹೆಲಿಕಾಪ್ಟರ್’ನಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ: ವಿಡಿಯೋ ವೈರಲ್ title=
Rohit Sharma Helicopter Entry Video

Rohit Sharma Helicopter Entry Video: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯಕ್ಕಾಗಿ ಮಂಗಳವಾರ ಧರ್ಮಶಾಲಾಗೆ ಆಗಮಿಸಿದ್ದಾರೆ. ಅಂತಿಮ ಟೆಸ್ಟ್ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(HPCA) ನಲ್ಲಿ ಆಯೋಜಿಸಲಾಗಿದ್ದು, ಇಂಗ್ಲೆಂಡ್ ತಂಡವು ಈಗಾಗಲೇ ಚಂಡೀಗಢದಿಂದ ಚಾರ್ಟರ್ಡ್ ವಿಮಾನದ ಮೂಲಕ ತಲುಪಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಹಾಹಾಕಾರ! ಬೇಸಿಗೆ ಆರಂಭದಲ್ಲೇ ಬಿಕ್ಕಟ್ಟು ಎದುರಾಗಲು ಇದುವೇ ಕಾರಣ

ಆದರೆ ರೋಹಿತ್ ಶರ್ಮಾ ಮಾತ್ರ ಹೀರೋ ಸ್ಟೈಲ್’ನಲ್ಲಿ ಧರ್ಮಶಾಲಾಗೆ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ರೋಹಿತ್ ಅವರನ್ನು ಕೆಲ ಅಧಿಕಾರಿಗಳು ಸ್ವಾಗತಿಸಿ, ಕಾರಿನ ಮೂಲಕ ಹೋಟೆಲ್’ಗೆ ಕರೆ ತಂದಿದ್ದಾರೆ. ಅಂದಹಾಗೆ ಫುಲ್ ಬ್ಲ್ಯಾಕ್ ಡ್ರೆಸ್ ಸ್ಟೈಲ್’ನಲ್ಲಿ ಹೀರೋ ಥರ ಕಾಣಿಸುತ್ತಿದ್ದರು ಟೀಂ ಇಂಡಿಯಾ ನಾಯಕ.  

 

5ನೇ ಟೆಸ್ಟ್ ಪಂದ್ಯ ಮಾರ್ಚ್ 7ರಂದು ಗುರುವಾರದಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಭಾರತ ತಂಡವು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ 3-1 ಮುನ್ನಡೆ ಸಾಧಿಸುವ ಮೂಲಕ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಮುಂಬೈ, ಚೆನ್ನೈ ಅಲ್ಲ… IPLನಲ್ಲಿ ಅತಿ ಹೆಚ್ಚು ಬಾರಿ ನಾಯಕನನ್ನು ಬದಲಾಯಿಸಿದ್ದು ಇದೇ ತಂಡ

ಇನ್ನು ಈ ಕೊನೆಯ ಪಂದ್ಯ ಮೂವರು ಆಟಗಾರರಿಗೆ ಅತ್ಯಂತ ವಿಶೇಷವಾಗಿರಲಿದೆ. ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌’ನ ವಿಕೆಟ್‌ ಕೀಪರ್ ಬ್ಯಾಟ್ಸ್‌’ಮನ್ ಜಾನಿ ಬೈರ್‌ಸ್ಟೋವ್ ಅವರ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್‌ ಶ್ರೇಷ್ಠ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಇಲ್ಲಿ 2 ವಿಕೆಟ್ ಪಡೆದರೆ, 700 ಟೆಸ್ಟ್ ವಿಕೆಟ್ ಪಡೆದ ವಿಶ್ವದ ಏಕೈಕ ವೇಗದ ಬೌಲರ್ ಆಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 

Trending News