ಮದುವೆಯಾದ 4ನೇ ವರ್ಷಕ್ಕೆ ಡಿವೋರ್ಸ್‌ ಪಡೆದ ʼಮೊದಲ ಸಲʼ ಸಿನಿಮಾ ನಟಿ..!

Actress Bhama Divorce : 2010 ರಲ್ಲಿ ಬಿಡುಗಡೆಯಾದ ಮೊದಲ ಸಲ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಚೆಲುವೆ ಭಾಮಾಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಟಿ ಮದುವೆಯಾದ ನಾಲ್ಕೇ ವರ್ಷಕ್ಕೆ ಡಿವೋರ್ಸ್‌ ಪಡೆದಿದ್ದು, ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.
 

1 /8

ಯಶ್‌ ನಟನೆಯ ಮೊದಲಾಸಲ ಸಿನಿಮಾದ ಮೂಲಕ ನಟಿ ಭಾಮಾ ಕನ್ನಡ ಸಿನಿರಸಿಕರಿಗೆ ಪರಿಚಯವಾದರು.  

2 /8

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಒಂದು ಸಂಚಲನ ಮೂಡಿಸುತ್ತಿದೆ.  

3 /8

2020ರಲ್ಲಿ ಭಾಮಾ ಅರುಣ್ ಜಗದೀಶ್ ಜೊತೆ ಅದ್ದೂರಿಯಾಗಿ ಮದುವೆಯಾದರು. ಇದೀಗ ಏಕಾಎಕಿ ನಟಿ ಡಿವೋರ್ಸ್‌ ಪಡೆದಿದ್ದಾಗಿ ತಿಳಿಸಿದ್ದಾರೆ.  

4 /8

ಈ ಕುರಿತು ಸೋಷಿಯಲ್ ಮೀಡಿಯಾ ಪೋಸ್ಟ್‌ ಹಂಚಿಕೊಂಡಿರುವ ನಟಿ, ತಾವು ಸಿಂಗಲ್ ಮದರ್ ಎಂದು ಸ್ಪಷ್ಟಪಡಿಸಿದ್ದಾರೆ.  

5 /8

ಭಾಮಾ ಅರುಣ್‌ ಅಂತ ಇದ್ದ ಇನ್‌ಸ್ಟಾಗ್ರಾಮ್‌ ಖಾತೆಯ ಹೆಸರನ್ನು ಭಾಮಾ ಅಂತ ಬದಲಾಯಿಸಿಕೊಂಡಿದ್ದಾರೆ.  

6 /8

ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ ಅಂತ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ ಭಾಮಾ.   

7 /8

ಆದರೆ, ಅಧಿಕೃತವಾಗಿ ಭಾಮಾ ತಮ್ಮ ಪತಿಯಿಂದ ಡಿವೋರ್ಸ್‌ ಪಡೆದಿದ್ದಾರೆ ಎನ್ನುವುದನ್ನು ನೇರವಾಗಿ ತಿಳಿಸಿಲ್ಲ.  

8 /8

ಮೊದಲ ಸಲ ಸಿನಿಮಾದ ಬಳಿಕ ಭಾಮಾ ಕೊನೆಯದಾಗಿ 2017 ರಲ್ಲಿ ಬಿಡುಗಡೆಯಾದ ರಾಗಾ ಸಿನಿಮಾದಲ್ಲಿ ನಟಿಸಿದ್ದರು.