T20 World Cup: ಮೇ 25ರಂದು ಅಮೆರಿಕಾಗೆ ಹಾರಲಿದೆ ಟೀಂ ಇಂಡಿಯಾ ಮೊದಲ ತಂಡ: ಐಪಿಎಲ್ ಮುಕ್ತಾಯದ ಬೆನ್ನಲ್ಲೇ 2ನೇ ಬ್ಯಾಚ್ ಪ್ರಯಾಣ

Team India T20 World Cup 2024: ಇದಕ್ಕೂ ಮೊದಲು ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆಯದ ತಂಡಗಳ ಸದಸ್ಯರು ಮೇ 21 ರಂದು ನಿರ್ಗಮಿಸಬೇಕಿತ್ತು, ಆದರೆ ಆ ಬಳಿಕ ಬದಲಾವಣೆ ಕಂಡುಬಂದಿದೆ.

Written by - Bhavishya Shetty | Last Updated : May 18, 2024, 07:58 PM IST
    • ಪ್ಲೇಆಫ್‌ಗೆ ಅರ್ಹತೆ ಪಡೆಯದ ತಂಡಗಳ ಸದಸ್ಯರು ಮೇ 21 ರಂದು ನಿರ್ಗಮಿಸಬೇಕಿತ್ತು
    • ಐಪಿಎಲ್ ಫೈನಲ್ ಆಡುವ ಆಟಗಾರರು ಮೇ 27 ರಂದು ಹೊರಡಲಿದ್ದಾರೆ
    • ಮೇ 26 ರಂದು ಐಪಿಎಲ್ ಫೈನಲ್‌’ನ ನಂತರ ಪ್ರಯಾಣ ಬೆಳೆಸಲಿದ್ದಾರೆ
T20 World Cup: ಮೇ 25ರಂದು ಅಮೆರಿಕಾಗೆ ಹಾರಲಿದೆ ಟೀಂ ಇಂಡಿಯಾ ಮೊದಲ ತಂಡ: ಐಪಿಎಲ್ ಮುಕ್ತಾಯದ ಬೆನ್ನಲ್ಲೇ 2ನೇ ಬ್ಯಾಚ್ ಪ್ರಯಾಣ title=
Indian Cricket Team

Team India T20 World Cup 2024: ಭಾರತ ಕ್ರಿಕೆಟ್ ತಂಡ ಅಮೆರಿಕಕ್ಕೆ ತೆರಳುವ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ತಂಡದ ಹೆಚ್ಚಿನ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿ ಮೇ 25 ರಂದು ಟಿ20 ವಿಶ್ವಕಪ್‌’ಗಾಗಿ ನ್ಯೂಯಾರ್ಕ್‌’ಗೆ ತೆರಳಲಿದ್ದು, ಉಳಿದವರು ಮೇ 26 ರಂದು ಐಪಿಎಲ್ ಫೈನಲ್‌’ನ ನಂತರ ಪ್ರಯಾಣ ಬೆಳೆಸಲಿದ್ದಾರೆ.

ಇದಕ್ಕೂ ಮೊದಲು ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆಯದ ತಂಡಗಳ ಸದಸ್ಯರು ಮೇ 21 ರಂದು ನಿರ್ಗಮಿಸಬೇಕಿತ್ತು, ಆದರೆ ಆ ಬಳಿಕ ಬದಲಾವಣೆ ಕಂಡುಬಂದಿದೆ. ಈಗ ಮೇ 25 ರಂದು ಹೊರಡಲಿದ್ದು, ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಇದನ್ನೂ ಓದಿ: ಬಿಸಿಹಾಲಿಗೆ ಈ ಬೇರಿನ ಪುಡಿ ಬೆರೆಸಿ ಕುಡಿಯಿರಿ: ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಸಹ ದೂರವಾಗುತ್ತೆ

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಸಹಾಯಕ ಸಿಬ್ಬಂದಿ ಮೇ 25 ರಂದು ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಪಿಎಲ್ ಫೈನಲ್ ಆಡುವ ಆಟಗಾರರು ಮೇ 27 ರಂದು ಹೊರಡಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ಮತ್ತು ಜೂನ್ 9 ರಂದು ಪಾಕಿಸ್ತಾನದ ವಿರುದ್ಧ ಆಡಬೇಕಾಗಿದೆ.

ಭಾರತದ ವೇಳಾಪಟ್ಟಿ

ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ಬಳಿಕ ಭಾರತ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮೂರನೇ ಪಂದ್ಯದಲ್ಲಿ ಭಾರತ ಜೂನ್ 12 ರಂದು ಅಮೆರಿಕವನ್ನು ಎದುರಿಸಲಿದೆ. ಟೀಂ ಇಂಡಿಯಾದ ಗುಂಪು ಹಂತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಗೊರಕೆ ಸಮಸ್ಯೆ ಇರಲ್ಲ

ವಿಶ್ವಕಪ್’ಗಾಗಿ ಟೀಂ ಇಂಡಿಯಾ ತಂಡ:

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News