T20 World Cup 2022: ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಪರ್ತ್ ಮತ್ತು ಅಡಿಲೇಡ್ ಸೇರಿದಂತೆ ಆಸ್ಟ್ರೇಲಿಯಾದ ಏಳು ನಗರಗಳು ಮುಂದಿನ ವರ್ಷ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಆತಿಥ್ಯ ವಹಿಸಲಿವೆ. ಪಂದ್ಯಾವಳಿಯ ಪಂದ್ಯಗಳು ನಡೆಯುವ ಇತರ ಎರಡು ನಗರಗಳೆಂದರೆ ಗೀಲಾಂಗ್ ಮತ್ತು ಹೋಬರ್ಟ್. ಆದಾಗ್ಯೂ, ಇವುಗಳಲ್ಲಿ, ಒಂದು ಸುತ್ತಿನ ಪಂದ್ಯಗಳ ಸಾಧ್ಯತೆಯಿದೆ. ಫೈನಲ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯಲಿದೆ ಎಂದು ಹೇಳಲಾಗುತ್ತಿದೆ.
T20 ವಿಶ್ವಕಪ್ 2022 ಪಂದ್ಯಗಳು ಈ 7 ನಗರಗಳಲ್ಲಿ ನಡೆಯಲಿವೆ:
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಾರ, ಮುಂದಿನ ವರ್ಷ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ 45 ಪಂದ್ಯಗಳನ್ನು ಆಡಲಾಗುತ್ತದೆ. ಇದನ್ನು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೋಬರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ಆತಿಥ್ಯ ವಹಿಸಲಿದೆ. ನವೆಂಬರ್ 9 ಮತ್ತು 10 ರಂದು ಸಿಡ್ನಿ ಕ್ರಿಕೆಟ್ ಮೈದಾನ ಮತ್ತು ಅಡಿಲೇಡ್ ಓವಲ್‌ನಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಸೂಪರ್ 12 ಹಂತಕ್ಕೆ ನೇರವಾಗಿ ಅರ್ಹತೆ ಪಡೆದಿರುವ ದೇಶಗಳಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಸೇರಿವೆ.
ಇದನ್ನೂ ಓದಿ- IPL 2022 Mega Auction ನಲ್ಲಿ 4 ತಂಡಗಳು ಗುರಿಯಾಗಿಸಿಕೊಂಡಿವೆ ಈ ಆಟಗಾರನನ್ನು! T20 World Cup ನಲ್ಲಿ ಭರ್ಜರಿ ಬ್ಯಾಟಿಂಗ್!
ನೇರವಾಗಿ ಸೂಪರ್ 12 ತಲುಪಿದ ತಂಡಗಳು :
ಇವುಗಳಲ್ಲದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ (South Africa) ಕೂಡ ಸೂಪರ್ 12 ರಲ್ಲಿ ನೇರ ಸ್ಥಾನ ಪಡೆದಿವೆ. ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಮೊದಲ ಹಂತದಲ್ಲಿ ಆಡಲಿವೆ. ಮೊದಲ ಹಂತದಲ್ಲಿ ಇತರ ನಾಲ್ಕು ತಂಡಗಳನ್ನು ಎರಡು ಅರ್ಹತಾ ಪಂದ್ಯಾವಳಿಗಳಿಂದ ನಿರ್ಧರಿಸಲಾಗುತ್ತದೆ. ಈ ಪಂದ್ಯಾವಳಿಗಳಲ್ಲಿ ಮೊದಲನೆಯದು ಫೆಬ್ರವರಿಯಲ್ಲಿ ಓಮನ್‌ನಲ್ಲಿ ಮತ್ತು ಎರಡನೆಯದು ಜೂನ್-ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ. ಪಂದ್ಯಾವಳಿಯ ಮುಖ್ಯಸ್ಥ ಕ್ರಿಸ್ ಟೆಟ್ಲಿ, ಆಸ್ಟ್ರೇಲಿಯಾದಲ್ಲಿ ಐಸಿಸಿ ಪಂದ್ಯಾವಳಿಯ ಪುನರಾಗಮನದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಪುರುಷರ T20 ವಿಶ್ವಕಪ್ 2022 ಗಾಗಿ ಏಳು ಆತಿಥೇಯ ನಗರಗಳನ್ನು ಘೋಷಿಸಲು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- IPL 2022 ದೊಡ್ಡ ಭವಿಷ್ಯ!: ವಿರಾಟ್ ನಂತರ ಈ ಆಟಗಾರ RCBಗೆ ಹೊಸ ನಾಯಕ..?
2021 ರ ಟಿ20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು :
ಮಿಚೆಲ್ ಮಾರ್ಷ್ ಅವರ 50 ಎಸೆತಗಳಲ್ಲಿ ಅಜೇಯ 77 ರನ್ ಮತ್ತು ಡೇವಿಡ್ ವಾರ್ನರ್ ಅವರ ಅರ್ಧಶತಕದ ನೆರವಿನಿಂದ ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಭಾನುವಾರ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಅನ್ನು ಮೊದಲ ಬಾರಿಗೆ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡವು ನಾಯಕ ಕೇನ್ ವಿಲಿಯಮ್ಸನ್ ಅವರ 48 ಎಸೆತಗಳಲ್ಲಿ 85 ರನ್‌ಗಳ ಇನ್ನಿಂಗ್ಸ್‌ನ ನೆರವಿನಿಂದ ನಾಲ್ಕು ವಿಕೆಟ್‌ಗಳಿಗೆ 172 ರನ್ ಗಳಿಸಿತು. ಪ್ರತ್ಯುತ್ತರವಾಗಿ 'ದೊಡ್ಡ ಪಂದ್ಯಗಳ ಆಟಗಾರರು' ವಾರ್ನರ್ (38 ಎಸೆತಗಳಲ್ಲಿ 53 ರನ್) ಮತ್ತು ಮಾರ್ಷ್ ಏಳು ಎಸೆತಗಳು ಬಾಕಿ ಇರುವಂತೆಯೇ ಕೇವಲ ಎರಡು ವಿಕೆಟ್ ಕಳೆದುಕೊಂಡು ತಂಡಕ್ಕೆ ಜಯ ತಂದುಕೊಟ್ಟರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ