IND vs SL: ಟೀಂ ಇಂಡಿಯಾದ ಅನುಭವಿಯ ಆರೋಗ್ಯದಲ್ಲಿ ದಿಢೀರ್ ಏರುಪೇರು: ತಡರಾತ್ರಿ ಮನೆಗೆ ಹಿಂತಿರುಗಿದ ಆಟಗಾರ

ಇಂಡಿಯಾ.ಕಾಮ್‌ನ ಸುದ್ದಿ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆರೋಗ್ಯ ಹದಗೆಟ್ಟ ಕಾರಣ ಕೋಲ್ಕತ್ತಾದಿಂದ ಬೆಂಗಳೂರಿನ ತಮ್ಮ ಮನೆಗೆ ಮರಳಿದ್ದಾರೆ. ಸರಣಿಯ ಎರಡನೇ ಪಂದ್ಯದ ಮೊದಲು, ದ್ರಾವಿಡ್ ಹೋಟೆಲ್‌ನಲ್ಲಿಯೇ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಬಿಪಿ ಸಮಸ್ಯೆ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಔಷಧಿ ಸೇವಿಸಿ ತಂಗಿದ್ದರು ಎನ್ನಲಾಗಿದೆ.

Written by - Bhavishya Shetty | Last Updated : Jan 13, 2023, 11:35 AM IST
    • ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ
    • ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು
    • ಕೋಲ್ಕತ್ತಾದಿಂದ ಮನೆಗೆ ಮರಳಿದ್ದು, ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ
IND vs SL: ಟೀಂ ಇಂಡಿಯಾದ ಅನುಭವಿಯ ಆರೋಗ್ಯದಲ್ಲಿ ದಿಢೀರ್ ಏರುಪೇರು: ತಡರಾತ್ರಿ ಮನೆಗೆ ಹಿಂತಿರುಗಿದ ಆಟಗಾರ title=
Rahul Dravid

IND vs SL 3rd ODI Match: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಉಭಯ ತಂಡಗಳ ನಡುವಿನ ಸರಣಿಯ ಕೊನೆಯ ಪಂದ್ಯ ಜನವರಿ 15 ರಂದು ತಿರುವನಂತಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದೆ. ಏಕಾಏಕಿ ತಂಡದ ಪ್ರಮುಖ ಸದಸ್ಯರೊಬ್ಬರ ಆರೋಗ್ಯ ಹದಗೆಟ್ಟಿದ್ದು, ಈ ಕಾರಣದಿಂದ ಈ ಅನುಭವಿ ಕೋಲ್ಕತ್ತಾದಿಂದ ಮನೆಗೆ ಮರಳಿದ್ದು, ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.

ಇದನ್ನೂ ಓದಿ: ಈ ದಿನಾಂಕದಂದು Athiya Shetty-KL Rahul ಮದುವೆ: ಈ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಸ್ಟಾರ್ ಜೋಡಿ

ಇಂಡಿಯಾ.ಕಾಮ್‌ನ ಸುದ್ದಿ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆರೋಗ್ಯ ಹದಗೆಟ್ಟ ಕಾರಣ ಕೋಲ್ಕತ್ತಾದಿಂದ ಬೆಂಗಳೂರಿನ ತಮ್ಮ ಮನೆಗೆ ಮರಳಿದ್ದಾರೆ. ಸರಣಿಯ ಎರಡನೇ ಪಂದ್ಯದ ಮೊದಲು, ದ್ರಾವಿಡ್ ಹೋಟೆಲ್‌ನಲ್ಲಿಯೇ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಬಿಪಿ ಸಮಸ್ಯೆ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಔಷಧಿ ಸೇವಿಸಿ ತಂಗಿದ್ದರು ಎನ್ನಲಾಗಿದೆ. ಬಂಗಾಳ ಕ್ರಿಕೆಟ್ ಮಂಡಳಿಯು ದ್ರಾವಿಡ್‌ ಆರೋಗ್ಯ ವಿಚಾರಿಸಲು ವೈದ್ಯರನ್ನು ನಿಯೋಜಿಸಿತ್ತು. ಆದರೆ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದೊಂದಿಗೆ ತಿರುವನಂತಪುರಂನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ.

ಈ ಸರಣಿಯಲ್ಲಿ ರಾಹುಲ್ ದ್ರಾವಿಡ್ ತಮ್ಮ 50ನೇ ಹುಟ್ಟುಹಬ್ಬವನ್ನು ತಂಡದ ಆಟಗಾರರೊಂದಿಗೆ ಆಚರಿಸಿಕೊಂಡಿದ್ದರು. ದ್ರಾವಿಡ್ 17 ನೇ ವಯಸ್ಸಿನಲ್ಲಿ ಕರ್ನಾಟಕಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಪ್ರಾರಂಭಿಸಿದರು. ರಾಹುಲ್ ದ್ರಾವಿಡ್ 1996 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್ ಗಳಿಸಿದ್ದು, ಇದರಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳಿವೆ. ಜೊತೆಗೆ 344 ODIಗಳಲ್ಲಿ 10889 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳನ್ನು ಗಳಿಸಿದ್ದಾರೆ. ಭಾರತ ಪರ 1 ಟಿ20 ಪಂದ್ಯವನ್ನೂ ಆಡಿದ್ದಾರೆ. ಈಗ ಅವರು ಹಲವು ವರ್ಷಗಳಿಂದ ಕೋಚ್ ಆಗಿ ಭಾರತ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Ranji Trophy: 17 ಎಸೆತದಲ್ಲಿ 72 ರನ್ ಬಾರಿಸಿದ್ದ ಈ ಸ್ಟಾರ್ ಆಟಗಾರನಿಗೆ ಟೀಂ ಇಂಡಿಯಾ ಬಾಗಿಲು ಇನ್ಮುಂದೆ ಬಂದ್!

ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಿದೆ. ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುತ್ತಲೇ ಶ್ರೀಲಂಕಾ ತಂಡವನ್ನು 215 ರನ್‌ಗಳಿಗೆ ಪೇರಿಸಿದ್ದರು. ಭಾರತದ ಪರ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ 3-3 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಈ ಗುರಿಯನ್ನು ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ ಕಳೆದುಕೊಂಡು ಸಾಧಿಸಿತು. ಕೆಎಲ್ ರಾಹುಲ್ ಭಾರತದ ಪರವಾಗಿ ಗರಿಷ್ಠ 64 ರನ್ ಗಳಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News