Shubman Gill Dismissal Against Kolkata Knight Riders : ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ ಐಪಿಎಲ್ 2022 ಇಲ್ಲಿಯವರೆಗೆ ಸುದ್ದಿಯಲ್ಲಿ ಇರಲಿಲ್ಲ. ಯಾಕ ಅಂದ್ರೆ ಗಿಲ್ ಈ ಸೀಸನ್ ನಲ್ಲಿ ಕೇವಲ ಎರಡು ಭಾರಿ ಮಾತ್ರ ಗ್ರೌಂಡ್ ಗೆ ಇಳಿದಿದ್ದಾನೆ. ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಗಿಲ್ ಸೋಲು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ, ಗಿಲ್ ದುರಾದೃಷ್ಟಕ್ಕೆ ಬಲಿಯಾಗಿರುವುದು ಭಾರಿ ಸುದ್ದಿಯಾಗಿದೆ. ಲೆಗ್-ಸ್ಟಂಪ್ನ ಹೊರಗೆ ಹೋದ ಬಾಲ್ ಗೆ ಗಿಲ್ ವಿಕೆಟ್ ಒಪ್ಪಿಸಬೇಕಾಯಿತು. ಆದ್ರೆ, ಗಿಲ್ ಔಟಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವೈಡ್ ಬಾಲ್ ಗೆ ವಿಕೆಟ್
ಶುಭಮನ್ ಗಿಲ್ ತಮ್ಮ ಹಳೆಯ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಏನು ವಿಶೇಷ ಆಡಿಲ್ಲ. ಈ ಪಂದ್ಯದಲ್ಲಿ ಗಿಲ್ 5 ಎಸೆತಗಳಲ್ಲಿ 7 ರನ್ ಗಳಿಸುವ ಮೂಲಕ ಟಿಮ್ ಸೌಥಿ ಬಾಲ್ ಗೆ ವಿಕೆಟ್ ಒಪ್ಪಿಸಿದರು. ಟಿಮ್ ಸೌಥಿ ಗುಜರಾತ್ ಇನ್ನಿಂಗ್ಸ್ನ ಎರಡನೇ ಓವರ್ ಮಾಡಲು ಬಂದಿದ್ದರು, ಈ ಓವರ್ನ ಮೊದಲ ಎಸೆತವನ್ನು ಸೌಥಿ ಲೆಗ್ ಸ್ಟಂಪ್ನ ಹೊರಗೆ ಬೌಲ್ಡ್ ಮಾಡಿದರು, ಈ ಚೆಂಡು ವೈಡ್ ಆಗುತ್ತಿತ್ತು, ಆದರೆ ಈ ಬಾಲ್ನಲ್ಲಿ ದೊಡ್ಡ ಶಾಟ್ ಹೊಡೆಯಲು ಹೋಗಿ ಗಿಲ್ ಔಟಾದರು. ಈ ಸುಲಭವಾದ ಬಾಲ್ ಗಿಲ್ ಬ್ಯಾಟ್ ನ ಅಂಚಿಗೆ ಟಚ್ ಆಗಿ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಕೈ ಸೇರಿತು. ಹೀಗಾಗಿ ಗಿಲ್ ಔಟ್ ಆಗಬೇಕಾಯಿತು.
Shubman Gill Wicket vs KKRhttps://t.co/j1CsS1i9qv
— MohiCric (@MohitKu38157375) April 23, 2022
ಇದನ್ನೂ ಓದಿ : No Ball Controversy : No Ball ವಿವಾದದಲ್ಲಿ ರಿಷಬ್ ಪಂತ್ ಜೊತೆ ಸಿಲುಕಿದ ಪ್ರವೀಣ್ ಆಮ್ರೆ ಯಾರು?
ಐಪಿಎಲ್ 2022 ರಲ್ಲಿ ಗಿಲ್ ಪ್ರದರ್ಶನ
ಐಪಿಎಲ್ 2022 ರಲ್ಲಿ, ಶುಭಮನ್ ಗಿಲ್ 7 ಪಂದ್ಯಗಳಲ್ಲಿ 207 ರನ್ ಗಳಿಸಿದ್ದಾರೆ. ಗಿಲ್ ಈ ಸೀಸನ್ ನಲ್ಲಿ ಇದುವರೆಗೆ ಕೇವಲ 2 ಅರ್ಧಶತಕ ಹೊಡೆದಿದ್ದಾರೆ. ಗಿಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್ ಗಳ ಇನ್ನಿಂಗ್ಸ್ ಆಡಿದರು. ಅಲ್ಲದೆ, ಪಂಜಾಬ್ ಕಿಂಗ್ಸ್ ವಿರುದ್ಧ 59 ಎಸೆತಗಳಲ್ಲಿ 96 ರನ್ ಗಳ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ, ಆದರೆ ನಂತರ ಗಿಲ್ ನಿರಂತರವಾಗಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ಪಂದ್ಯದಲ್ಲೂ ಗಿಲ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಮೊದಲ ಎಸೆತದಲ್ಲಿ ಔಟಾದರು.
ಕೊನೆಯ ಓವರ್ಗಳಲ್ಲಿ ತತ್ತರಿಸಿದ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಗುಜರಾತ್ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 9 ವಿಕೆಟ್ಗೆ 156 ರನ್ ಗಳಿಸಿತು. ತಂಡದ ನಾಯಕ ಪಾಂಡ್ಯ 49 ಎಸೆತಗಳಲ್ಲಿ 67 ರನ್ಗಳ ನಾಯಕತ್ವದ ಇನಿಂಗ್ಸ್ ಆಡಿದರು. ಹಾರ್ದಿಕ್ ಹೊರತಾಗಿ ಡೇವಿಡ್ ಮಿಲ್ಲರ್ 27 ರನ್ ಮತ್ತು ವೃದ್ಧಿಮಾನ್ ಸಹಾ 25 ರನ್ ಗಳಿಸಿದರು. ಕೋಲ್ಕತ್ತಾ ಪರ ರಸೆಲ್ ಗರಿಷ್ಠ 4 ವಿಕೆಟ್ ಪಡೆದರು ಮತ್ತು ಟಿಮ್ ಸೌಥಿ ಅವರ ಹೆಸರಿನಲ್ಲಿ 3 ವಿಕೆಟ್ ಪಡೆದರು.
ಇದನ್ನೂ ಓದಿ : RCB vs SRH : ಇಂದು ಹೈದರಾಬಾದ್ಗೆ ಬೆಂಗಳೂರು ʼಚಾಲೆಂಜ್ʼ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.