ಕಾಲ್ಚೆಂಡಿನಾಟದಲ್ಲಿ ಮೆಸ್ಸಿ, ರೋನಾಲ್ಡೋರನ್ನು ಮೀರಿಸುವ ಬುರ್ಖಾ ಬೆಡಗಿ -ವೀಡಿಯೋ

    

Last Updated : Jul 13, 2018, 06:04 PM IST
 ಕಾಲ್ಚೆಂಡಿನಾಟದಲ್ಲಿ ಮೆಸ್ಸಿ, ರೋನಾಲ್ಡೋರನ್ನು ಮೀರಿಸುವ ಬುರ್ಖಾ ಬೆಡಗಿ -ವೀಡಿಯೋ   title=
Photo courtesy: Instagram

ನವದೆಹಲಿ: ಪುಟ್ಬಾಲ್ ಜ್ವರ ದಿನದಿಂದ ದಿನಕ್ಕೆ ಹೆಚ್ಚೆರುತ್ತಲೆ ಇದೆ, ಫೈನಲ್ ಪಂದ್ಯವೊಂದು ಬಾಕಿಇರುವುದರಿಂದ  ಇದರ ಉತ್ಸಾಹವಂತು ಕಡಿಮೆಯಾಗಿಲ್ಲ.

ಸಾಮಾನ್ಯವಾಗಿ ಸದ್ಯ ಪುಟ್ಬಾಲ್ ನಲ್ಲಿನ ಜಾಗತಿಕ ಸ್ಟಾರ್ ಆಟಗಾರರೆಂದರೆ ಅದು ಅರ್ಜೆಂಟಿನಾದ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ  ರೋನಾಲ್ಡೋ ಆದರೆ ದುರದೃಷ್ಟವೆಂದರೆ ಈಗ ಈ ಎರಡು ತಂಡಗಳ ವಿಶ್ವಕಪ್ ಆಸೆ ಕಮರಿ ಹೋಗಿದೆ.

ಆದರೆ ಈಗ ನಾವು ಹೇಳುತ್ತಿರುವ ಅಸಲಿ ಪುಟ್ಬಾಲ್ ಸಮಾಚಾರವೇನೆಂದರೆ ಇಲ್ಲೊಬ್ಬ ಬುರ್ಖಾ ಧರಿಸಿರುವ ಮಹಿಳೆಯೊಬ್ಬಳು ತನ್ನ ಕಾಲ್ಚೆಳಕದ ಕೌಶಲ್ಯವನ್ನು ತೋರಿಸಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾನವಾದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ವೀಡಿಯೋವೊಂದನ್ನು ನೀವು ವಿಕ್ಷಿಸಿದಾಗ ಖಂಡಿತ ಅವಳು ಈ ಮೇಲೆ ಪ್ರಸ್ತಾಪಿಸಿದ  ಇಬ್ಬರು ಸ್ಟಾರ್ ಆಟಗಾರರನ್ನು ಅವಳು ಮೀರಿಸುವ ಕಾಲ್ಚೆಕವನ್ನು ತೋರಿಸಿದ್ದಾಳೆ. 

ಕುರೆನ್ನಿಸ್ಯಾ ಎನ್ನುವ ಈ 18 ರ ಬಾಲೆ ಯುಟೋಬ್ ಮೂಲಕ ಈ ಕಾಲ್ಚೆಳಕದ ಕೌಶಲ್ಯವನ್ನು ಕಲಿತಿದ್ದಾಳೆ. ಮೊದಲ ಬಾರಿಗೆ 2016ರಲ್ಲಿ ಈಕೆ  ಪುಟ್ಬಾಲ್ ಆಟವಾಡುವ ಅಭ್ಯಾಸವನ್ನು ಬೆಳಸಿಕೊಂಡಿದ್ದಾಳೆ. ಅಂದಿನಿಂದ ಇಂದಿನವರೆಗೂ ತನ್ನ ಪುಟ್ಬಾಲ್ ಕೌಶಲ್ಯವನ್ನು ಪ್ರದರ್ಶಿಸುತ್ತಲೇ ಸಾಗಿದ್ದಾಳೆ ಎನ್ನಬಹುದು. 

Trending News