Ruturaj Gaikwad : 'ನಾನು ತಂಡವನ್ನು ಮುನ್ನಡೆಸುತ್ತೇನೆ... ಈ ಕುರಿತು ಹೆಚ್ಚು ಚಿಂತೆ ಬೇಕಿಲ್ಲ : CSK ನ್ಯೂ ಕ್ಯಾಪ್ಟನ್‌ ಹೀಗೆ ಹೇಳಿದ್ಯಾಕೆ..?

CSK New Captain : ಸಿಎಸ್‌ಕೆ (CSK) ತಂಡದ ನೂತನ ನಾಯಕರಾಗಿ ಕ್ರಿಕೆಟಿಗ ರುತುರಾಜ್‌ ಗಾಯಕ್ವಾಡ್‌ ನೇಮಕಗೊಂಡಿದ್ದಾರೆ. ಈ ಕುರಿತು ಮೊದಲ ಬಾರಿಗೆ ಗಾಯಕ್ವಾಡ್‌ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ತಂಡದಲ್ಲಿ ಉಂಟಾದ ಈ ಬೆಳವಣಿಗೆ ಧೋನಿ ಅಭಿಮಾನಿಗಳಿಗೆ ನೋವುಂಟು ಮಾಡಿದೆ.. ಈ ಕುರಿತು ವರದಿ ಇಲ್ಲಿದೆ..

Written by - Krishna N K | Last Updated : Mar 22, 2024, 05:05 PM IST
    • RCB vs CSK ಪಂದ್ಯಕ್ಕೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಇದೆ.
    • ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಉಂಟಾದ ದಿಢೀರ್‌ ನಾಯಕ್ವ ಬದಲಾವಣೆಯಾಗಿದೆ.
    • ಹೊಸ ಕ್ಯಾಪ್ಟನ್‌ ರುತುರಾಜ್‌ ಈ ಕುರಿತು ಹೇಳಿಕೆ ನೀಡಿದ್ದು ವೈರಲ್‌ ಆಗಿದೆ.
Ruturaj Gaikwad : 'ನಾನು ತಂಡವನ್ನು ಮುನ್ನಡೆಸುತ್ತೇನೆ... ಈ ಕುರಿತು ಹೆಚ್ಚು ಚಿಂತೆ ಬೇಕಿಲ್ಲ : CSK ನ್ಯೂ ಕ್ಯಾಪ್ಟನ್‌ ಹೀಗೆ ಹೇಳಿದ್ಯಾಕೆ..?  title=
ruturaj gaikwad

CSK New Captain Ruturaj Gaikwad : ಐಪಿಎಲ್‌ 2024 RCB vs CSK ಪಂದ್ಯಕ್ಕೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಇವೆ. ಇದೆ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಉಂಟಾದ ದಿಢೀರ್‌ ನಾಯಕ್ವ ಬದಲಾವಣೆಯಿಂದ ಧೋನಿ (MS Dhoni) ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಇನ್ನು ಹೊಸ ಕ್ಯಾಪ್ಟನ್‌ ರುತುರಾಜ್‌ ಈ ಕುರಿತು ಹೇಳಿಕೆ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. 

ಹೌದು.. ಇದೀಗ ಸಿಎಸ್‌ಕೆ ನೂತನ (CSK New Captain ) ನಾಯಕನಾಗಿ ಆಯ್ಕೆಗೊಂಡಿರುವ ಕುರಿತು ರುತುರಾಜ್‌ ಗಾಯಕ್ವಾಡ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿಎಸ್‌ಕೆ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೆ. ನಮ್ಮ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ಆದ್ದರಿಂದ ನನಗೆ ಹೆಚ್ಚಿನ ಭಾರವಿಲ್ಲ. ಧೋನಿ ಭಾಯ್‌, ಜಡ್ಡು, ಅಜಿಂಕ್ಯ ರಹಾಸೆ ಸೇರಿದಂತೆ ದಿಗ್ಗಜ ಆಟಗಾರರ ಮಾರ್ಗದರ್ಶನವಿದೆ.. ಅದ್ದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಗಾಯಕ್ವಾಡ್‌ ಹೇಳಿದ್ದಾರೆ.

ಇದನ್ನೂ ಓದಿ :IPL 2024: 8 ವರ್ಷಗಳ ಬಳಿಕ ಮೈದಾನಕ್ಕಿಳಿದ RCB ಮಾಜಿ ಪ್ಲೇಯರ್! ಈ ಬಾರಿ IPLನಲ್ಲಿ ಈತನದ್ದೇ ಹವಾ ಗ್ಯಾರಂಟಿ

ಗಾಯಕ್ವಾಡ್‌ 2019 ಸಿಎಸ್​ಕೆ ತಂಡವನ್ನು ಸೇರಿಕೊಂಡರು. 2021 ರಲ್ಲಿ ತಮ್ಮ ಅದ್ಭುತ ಆಟದ ವೈಖರಿಯಿಂದಾಗಿ ಸ್ಟಾರ್‌ ಆಟಗಾರ ಪಟ್ಟ ಸೇರಿದರು. ಧೋನಿ ನೇತೃತ್ವದಲ್ಲಿ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ರುತುರಾಜ್‌ ಅವರ ಉತ್ತಮ ಆಟವೂ ಸಹ ಕಾರಣವಾಗಿತ್ತು. ಸಧ್ಯ ಸಿಎಸ್‌ಕೆ ಕ್ಯಾಪ್ಟನ್‌ ಆಗಿ ನೇಮಕಗೊಂಡಿದ್ದಾರೆ.

ಐಪಿಎಲ್‌ 2024 ರ ಆರಂಭಿಕ ಪಂದ್ಯ ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿ ವಿರುದ್ಧದ ನಡೆಯಲಿರುವ ಆರಂಭಿಕ ಪಂದ್ಯದ ಮೂಲಕ ನಾಯಕನಾಗಿ ಗಾಯಕ್ವಾಡ್‌ ತಂಡವನ್ನು ಮುನ್ನಡೆಲಿದ್ದಾರೆ. ಆದರೆ ಈ ಬೆಳವಣಿಗೆ ಧೋನಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News