ಧೋನಿ, ಸೆಹ್ವಾಗ್’ರಿಂದಲೂ ಕಷ್ಟಸಾಧ್ಯವಾದ ಆ ವಿಶ್ವದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕು ಜಸ್ಟ್ 22 ರನ್!

Rohit Sharma: ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ 22 ರನ್ ಗಳಿಸಿದರೆ,  ಏಕದಿನ ವಿಶ್ವಕಪ್‌ನಲ್ಲಿ 1000 ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂಬ ಖ್ಯಾತಿ ಇವರ ಪಾಲಿಗೆ ಸೇರಲಿದೆ.

Written by - Bhavishya Shetty | Last Updated : Oct 4, 2023, 02:36 PM IST
    • ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಆಡಲಿರುವ ಟೀಮ್ ಇಂಡಿಯಾ
    • ಇತಿಹಾಸ ರಚಿಸುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ
    • ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ ನಡೆಯಲಿದೆ ವಿಶ್ವಕಪ್ 2023
ಧೋನಿ, ಸೆಹ್ವಾಗ್’ರಿಂದಲೂ ಕಷ್ಟಸಾಧ್ಯವಾದ ಆ ವಿಶ್ವದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕು ಜಸ್ಟ್ 22 ರನ್!  title=
Rohit Sharma

Rohit Sharma Records in World Cup: ವಿಶ್ವಕಪ್ 2023 ನಾಳೆಯಿಂದ ಅಂದರೆ ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಇನ್ನು ಅಕ್ಟೋಬರ್ 8ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ವಿಶ್ವಕಪ್ ಪಂದ್ಯವನ್ನು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ ಆಟಗಾರರ ಕಾಲೆಳೆದ ಶಿಖರ್ ಧವನ್.! ವಿಡಿಯೋ ವೈರಲ್‌

ಈ ಬಾರಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಇತಿಹಾಸ ರಚಿಸಲಿದ್ದಾರೆ ರೋಹಿತ್ ಶರ್ಮಾ!

ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇತಿಹಾಸವನ್ನು ರಚಿಸಲಿದ್ದಾರೆ. ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ 22 ರನ್ ಗಳಿಸಿದರೆ,  ಏಕದಿನ ವಿಶ್ವಕಪ್‌ನಲ್ಲಿ 1000 ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂಬ ಖ್ಯಾತಿ ಇವರ ಪಾಲಿಗೆ ಸೇರಲಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಒಡಿಐ ವಿಶ್ವಕಪ್‌’ನ 17 ಪಂದ್ಯಗಳಲ್ಲಿ 978 ರನ್ ಗಳಿಸಿದ್ದಾರೆ. ಭಾರತಕ್ಕಾಗಿ 2015 ಮತ್ತು 2019 ರ ವಿಶ್ವಕಪ್ ಆಡಿದ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್‌’ನಲ್ಲಿ 6 ಶತಕ ಮತ್ತು 3 ಅರ್ಧ ಶತಕ ಸಿಡಿಸಿದ್ದಾರೆ. ಇನ್ನು ವಿಶ್ವಕಪ್‌’ನಲ್ಲಿ ಅತ್ಯುತ್ತಮ ಸ್ಕೋರ್ 140 ರನ್ ಆಗಿದ್ದು, ಈ ದಾಖಲೆಯನ್ನು ಪಾಕಿಸ್ತಾನ ವಿರುದ್ಧ ಸೃಷ್ಟಿಸಿದ್ದರು.

ವಿಶ್ವಕಪ್ ಪ್ರಾರಂಭ:

ಭಾರತದ ಆತಿಥ್ಯ ವಹಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್, ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಒಟ್ಟು 48 ಪಂದ್ಯಗಳು ನಡೆಯಲಿವೆ. ಇಲ್ಲಿಯವರೆಗೆ ತನ್ನ 12 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾದ ತಂಡವು ವಿಶ್ವಕಪ್ 5 ಬಾರಿ ಗೆದ್ದಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ 2 ಬಾರಿ ಮತ್ತು ಶ್ರೀಲಂಕಾ, ಪಾಕಿಸ್ತಾನ, ಇಂಗ್ಲೆಂಡ್ ಒಂದೊಂದು ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಇದನ್ನೂ ಓದಿ: World Cup 2023 : ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಪ್ಲೇಯಿಂಗ್ 11 ಪ್ರಕಟ ! ಈ ಆಟಗಾರರನ್ನು ಹೊರಗಿಟ್ಟ ರೋಹಿತ್ ಶರ್ಮಾ

2023 ರ ಕ್ರಿಕೆಟ್ ವಿಶ್ವಕಪ್‌’ನ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 5 ರಂದು ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಪಂದ್ಯಗಳು ಭಾರತದಲ್ಲಿ ನಡೆಯುವ ಸಮಯವನ್ನು ಬೆಳಿಗ್ಗೆ 10: 30 ಮತ್ತು ಮಧ್ಯಾಹ್ನ 2.00 ಕ್ಕೆ ನಿಗದಿಪಡಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News